ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೇಕಿಂಗ್ ನ್ಯೂಸ್ : ಮುಂಬೈನಲ್ಲಿ 3 ಕಡೆ ಭಾರೀ ಸ್ಫೋಟ

By Prasad
|
Google Oneindia Kannada News

Mumbai serial blasts 2011
ಮುಂಬೈ, ಜು. 13 : ಭಯೋತ್ಪಾದನೆ ಮುಂಬೈಗೆ ಮತ್ತೆ ಮರುಕಳಿಸಿದೆ. ನಗರದ ಮೂರು ಪ್ರದೇಶಗಳಲ್ಲಿ ಮೂರು ಸರಣಿ ಸ್ಫೋಟಗಳು ಸಂಭವಿಸಿದ್ದು, ಆರಂಭಿಕ ವರದಿಯ ಪ್ರಕಾರ, ಮೂವರು ಸತ್ತಿದ್ದು, 12 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅತ್ಯಂತ ಜನನಿಬಿಡ ಪ್ರದೇಶಗಳಾದ ದಾದರ್ ಬಳಿಯ ಕಬೂತರ್ ಖಾನಾ, ಜವೇರಿ ಬಜಾರ್ ಮತ್ತು ಓಪೆರಾ ಹೌಸ್ ಬಳಿ ಮೂರು ಬಲವಾದ ಸ್ಫೋಟಗಳು ಸಂಭವಿಸಿವೆ. ಎಸಿಪಿ ಮಧುಕರ್ ಪ್ರಕಾರ, ವಿದ್ಯುತ್ ಮೀಟರ್ ಬಾಕ್ಸ್ ನಲ್ಲಿ ಬಾಂಬ್ ಇಡಲಾಗಿತ್ತು. ಮತ್ತೊಂದೆಡೆ MH 43 A 9384 ಟ್ಯಾಕ್ಸಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. [ವಿಡಿಯೋ 1]

ಪೊಲೀಸರು ಸ್ಫೋಟ ನಡೆದ ಸ್ಥಳಕ್ಕೆ ಧಾವಿಸಿದ್ದು, ಮುಂಬೈ ನಗರದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲು ಪೊಲೀಸ್ ವರಿಷ್ಠರು ಆದೇಶಿಸಿದ್ದಾರೆ. ಓಪೆರಾ ಹೌಸ್ ಬಳಿ 100ಕ್ಕೂ ಹೆಚ್ಚಿನ ಜನ ಗಾಯಗೊಂಡಿರಬಹುದೆಂದು ಶಂಕಿಸಲಾಗಿದೆ. ಈ ಸ್ಫೋಟದ ಹೊಣೆಯನ್ನು ಯಾವ ಭಯೋತ್ಪಾದನಾ ಸಂಘಟನೆಯೂ ಹೊತ್ತಿಲ್ಲ. [ವಿಡಿಯೋ 2]

ಇತ್ತೀಚೆಗೆ ಬಂದ ವರದಿಯ ಪ್ರಕಾರ, 8 ಜನ ಸತ್ತಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಭಯೋತ್ಪಾದಕರ ಕೃತ್ಯ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ದೃಢಪಡಿಸಿದೆ.

ದೇಶದಾದ್ಯಂತ ಕಟ್ಟೆಚ್ಚರ : ಮುಂಬೈನಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತಿದ್ದಂತೆ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. [ವಿಡಿಯೋ 3]

English summary
3 serial blasts in Mumbai. Blasts are taken place at Zaveri Bazaar, Opera House and Kabootar Khana near Dadar. According to initial report 3 people have been killed and more than 100 injured. Red alert has been sounded across India including Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X