• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಸಲೀಲೆ: ಸನ್‌ ಟಿವಿ ಮೇಲೆ ಬಿತ್ತು ಮತ್ತೊಂದು ಕೇಸು

By Srinath
|

Ranjitha at a press meet
ಚೆನ್ನೈ, ಜುಲೈ 13: ಸ್ವಾಮಿ ನಿತ್ಯಾನಂದ ಅವರೊಂದಿಗೆ ತಮ್ಮನ್ನು ಅಶ್ಲೀಲ ಭಂಗಿಗಳಲ್ಲಿ ತೋರಿಸಲಾದ ಚಿತ್ರಗಳನ್ನು ತಿರುಚಲಾಗಿದೆ ಎಂದು ಸನ್‌ ನೆಟ್‌ವರ್ಕ್‌ ಮಾಲಿಕ ಕಲಾನಿಧಿ ಮಾರನ್‌ ವಿರುದ್ಧ ನಟಿ ರಂಜಿತಾ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ. ಜಯರಾಂ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ತರುವಾಯ ಡಿಎಂಕೆ ನಾಯಕರ ವಿರುದ್ಧ ಪೊಲೀಸ್ ಕೇಸುಗಳ ಜಡಿಮಳೆಯಾಗುತ್ತಿರುವುದು ಗಮನಾರ್ಹ.

ನಿತ್ಯಾನಂದ ಅವರ ಜೊತೆಗೆ ತಾನಿರುವಂತೆ ಚಿತ್ರಗಳನ್ನು ತಿರುಚಲಾಗಿದೆ. ಅಲ್ಲದೇ ವಿಡಿಯೋ ಪ್ರಸಾರವನ್ನು ಸ್ಥಗಿತಗೊಳಿಸಬೇಕಾದರೆ ಹಣ ನೀಡುವಂತೆ ವ್ಯಕ್ತಿಯೋರ್ವ ಕೇಳಿದ್ದ ಎಂದು ಆಕೆ ದೂರು ನೀಡಿರುವುದಾಗಿ ನಗರ ಪೊಲೀಸ್‌ ಆಯುಕ್ತ ಜೆ.ಕೆ.ತ್ರಿಪಾಠಿ ಹೇಳಿದ್ದಾರೆ.

ರಂಜಿತಾ ನೀಡಿದ ದೂರನ್ನು ತನಿಖೆಗಾಗಿ ಕ್ರೈಂ ಬ್ರಾಂಚ್‌ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಳೆದ ವಾರವಷ್ಟೇ ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮ ಪೊಲೀಸರಿಗೆ ದೂರು ನೀಡಿದ್ದು, ಸನ್‌ ನೆಟ್‌ವರ್ಕ್‌ ಮಾಲಿಕ ಕಲಾನಿಧಿ ಮಾರನ್‌ ಮತ್ತು ಕಾರ್ಯನಿರ್ವಾಹಕ ಹನ್ಸರಾಜ್‌ ಸಕ್ಸೇನಾ ತಿರುಚಲಾದ ವೀಡಿಯೋ ತೋರಿಸಿ ತಾವು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಪ್ರದರ್ಶಿಸಿದ್ದರು ಎಂದು ದೂರಿದ್ದರು. [ಗ್ಯಾಲರಿ : ರಂಜಿತಾ ಪತ್ರಿಕಾಗೋಷ್ಠಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
About 1.5 years after the alleged sex scandal involving her with self-styled godman Swami Nithyananda broke out, actress Ranjitha filed a police complaint at Chennai City Police Commissioner’s Office accusing Sun Network owner Kalanidhi Maran of morphing and telecasting visuals showing her in a compromising position with controversial spiritual guru Nithyananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more