ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದ ಮುಂಬೈ ಸ್ಫೋಟ ಭಯೋತ್ಪಾದಕರ ಕೃತ್ಯ

By Shami
|
Google Oneindia Kannada News

Mumbai serial blasts 2011
ಮುಂಬೈ, ಜು. 13 : ಬುಧವಾರ ಸಂಜೆ 6.45, 6.55 ಮತ್ತು 7.05 ಗಂಟೆಗೆ ಮುಂಬೈನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಇದುವರೆಗೆ ಗೊತ್ತಾದ ಮಾಹಿತಿಗಳು ತಿಳಿಸಿವೆ.

ಮುಂಬೈ ಪೊಲೀಸ್ ಕಮಿಷನರ್ ಪ್ರಕಾರ ಇದು ಭಯೋತ್ಪಾದಕರ ಕೃತ್ಯ. ಕೇಂದ್ರ ಗೃಹ ಖಾತೆಯ ವಕ್ತಾರರೂ ಕೂಡ ಇದನ್ನೇ ಹೇಳುತ್ತಿದ್ದಾರೆ.

ಜವೇರಿ ಬಜಾರ್, ಕಬೂತರ್ ಖಾನಾ, ಓಪೆರಾ ಹೌಸ್ ಪ್ರದೇಶಗಳಲ್ಲಿ ಸ್ಫೋಟಗಳು ಕಂಡಬಂದಿರುವುದರಿಂದ ಅಪಾರ ಹಾನಿ ಉಂಟು ಮಾಡುವ ಉದ್ದೇಶದಿಂದಲೇ ಈ ಸ್ಥಳಗಳನ್ನು ಭಯೋತ್ಪಾದಕರು ಆಯ್ಕೆ ಮಾಡಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಸುದ್ದಿಗಾರರೊಂದಿಗೆ ಮಾತನಾಡಿ ಕೆಳಗಿನಂತೆ ತಿಳಿಸಿದರು. [ವಿಡಿಯೋ 1] [ವಿಡಿಯೋ 2] [ವಿಡಿಯೋ 3]

26/11 ಸ್ಫೋಟದಿಂದ ಚೇತರಿಸಿಕೊಳ್ಳುತ್ತಿರುವಂತೆ ನಗರದಲ್ಲಿ ಮತ್ತೆ ಬಾಂಬ್ ಸ್ಫೋಟ ಆಗಿರುವುದು ದುರದೃಷ್ಟಕರ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದು ಮತ್ತು ಅವರಿಗೆ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆ ಎಂದರು. [ಚಿತ್ರಪಟ : ಮುಂಬೈ ಸರಣಿ ಸ್ಫೋಟ 2011]

English summary
Mumbai serial blasts 2011 : According to the reports 13 people have been killed and hundreds of injured. Mumbai police commissioner says it is handy work of terrorists. Union home ministry also has confirmed the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X