ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಸ್ಕೋದಿಂದ ಯಡಿಯೂರಪ್ಪಗೆ 600 ಕೋಟಿ ಲಂಚ!

By Mahesh
|
Google Oneindia Kannada News

HD Kumaraswamy
ಹುಬ್ಬಳ್ಳಿ ಜು 13: ಯಡಿಯೂರಪ್ಪ ಹಾಗೂ ಅವರ ಸಚಿವರ ಸಮೂಹ ಆಲಿಬಾಬಾ ಮತ್ತು 40 ಕಳ್ಳರಿದ್ದಂತೆ. ಪೋಸ್ಕೊ ಕಂಪೆನಿಗೆ ಸುಮಾರು 5,700 ಎಕರೆ ಫಲವತ್ತಾದ ಭೂಮಿ ನೀಡಲು ಯಡಿಯೂರಪ್ಪ ಅವರು 600 ಕೋಟಿ ರು ಲಂಚ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಪೇಜಾವರಶ್ರೀಗಳು ಹೇಳಿದಂತೆ ಕುಣಿಯುವ ಮುಖ್ಯಮಂತ್ರಿ,ತೊಂಟದಶ್ರೀ ಸ್ವಾಮೀಜಿಗಳ ಮಾತಿಗೆ ಬೆಲೆ ಕೊಡದಿರುವುದು ವಿಷಾದನೀಯ ಎಂದು ಕುಮಾರಸ್ವಾಮಿ ಹೇಳಿದರು.

ಗದಗ್ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಪೋಸ್ಕೋ ಕಂಪನಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸದ್ಯದಲ್ಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಲಿದ್ದೇನೆ. ಈ ರೈತರ ಜಾಗವನ್ನು ಕಂಪನಿಗೆ ಮಾರಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪಡೆದಿರುವ ಕೋಟಿಗಟ್ಟಲೆ ಕಿಕ್ ಬ್ಯಾಕ್ ಹಣವನ್ನು ಕಕ್ಕಿಸದೇ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೊರಿಯಾ ಮೂಲದ ಪೋಸ್ಕೋ ಕಂಪನಿ ಸ್ಥಾಪನೆಗೊಂಡರೆ ಅದಕ್ಕೆ ಅಗತ್ಯವಾದ 44ಎಂಜಿಡಿ ನೀರನ್ನು ಸರ್ಕಾರ ಎಲ್ಲಿಂದ ಒದಗಿಸುತ್ತದೆ. ಹಿಮಾಲಯದಿಂದ ಮತ್ತೆ ಇಲ್ಲಿಗೆ ನೀರು ತಂದು ಬೊಮ್ಮಾಯಿ ಆಧುನಿಕ ಭಗೀರಥ ಆಗಬೇಕು ಅಷ್ಟೇ. ಶೇ.30ರಷ್ಟು ಅದಿರನ್ನು ಕೊರಿಯಾ ದೇಶಕ್ಕೆ ರಫ್ತು ಮಾಡಲು ಅವಕಾಶ ನೀಡಿರುವುದು ತಪ್ಪು. ನಮ್ಮ ಪಕ್ಷ ರೈತರ ಪರವಾಗಿದೆ, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಪೇಜಾವರ ಶ್ರೀಗಳಿಗೆ ಜಯ: ಮಂಗಳೂರು ವಿಶೇಷ ಆರ್ಥಿಕ ವಲಯ(MSEZ)ಕ್ಕಾಗಿ ರೈತರ 2 ಸಾವಿರ ಎಕರೆ ಭೂಮಿ ಕಬಳಿಕೆ ಮಾಡಲು ಯೋಜಿಸಿದ್ದ ಸರ್ಕಾರ ತನ್ನ ಯೋಚನೆಯನ್ನು ಕೈಬಿಟ್ಟಿದೆ. ರೈತರ ಭೂಮಿ ಅಕ್ರಮ ವಶಪಡಿಸುವಿಕೆ ವಿರುದ್ಧ ಮಂಗಳವಾರದಿಂದ ಆಮರಣಾಂತ ಉಪವಾಸ ಕೈ ಗೊಳ್ಳುವುದಾಗಿ ಹೇಳಿದ್ದ ಉಡುಪಿ ಪೇಜಾವರಶ್ರೀಗಳ ಬೆದರಿಕೆಗೆ ಸರ್ಕಾರ ಬಗ್ಗಿದೆ.

English summary
HD Kumaraswamy said Karnataka chief minister BS Yeddyurappa has got hefty graft money from Posco company. The BJP government in Karnataka is looting farmland under the guise of industrial development by deceiving farmers he added
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X