ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರಿಗೆ ಮೀಸಲಾತಿ ನೀಡಲು ಎಚ್ ಎಎಲ್ ಒಪ್ಪಿಗೆ

By Mahesh
|
Google Oneindia Kannada News

HAL Jobs Kannadigas Quota|
ಬೆಂಗಳೂರು ಜು 13: ಗ್ರೂಪ್ ಸಿ ಹಾಗೂ ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಒಪ್ಪಿರುವುದಾಗಿ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್(ಎಚ್ ಎಎಲ್) ಪ್ರಕಟಿಸಿದೆ. ಕೇಂದ್ರ ಸರ್ಕಾರ ಸ್ವಾಮ್ಯದ ಎಚ್ ಎಎಲ್ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನ ಬಗ್ಗೆ ಪರಿಶೀಲನೆ ನಡೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಂಗಳವಾರ ಸಂಸ್ಥೆಗೆ ಭೇಟಿ ನೀಡಿದ್ದರು.

ಖಾಲಿ ಇರುವ ಹುದ್ದೆಗಳಿಗೆ (ಸುಮಾರು 677) ನೇಮಕಾತಿ ಮಾಡುವಾಗ ಸ್ಥಳೀಯ ಕನ್ನಡಿಗರನ್ನು ಆಯ್ಕೆ ಮಾಡುವಂತೆ ಕೋರಲಾಗಿದೆ. ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಸರೋಜಿನಿ ಮಹಿಷಿ ವರದಿ ಅನ್ವಯ ನೇಮಕಾತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕೂಡಾ ಎಚ್ ಎಎಲ್ ವಿರುದ್ಧ ತಿರುಗಿ ಬಿದ್ದಿತ್ತು. ಸರೋಜಿನಿ ಮಹಿಷಿ ವರದಿ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧೀನದಲ್ಲಿರುವ ಎಲ್ಲಾ ಇಲಾಖೆ ಹಾಗೂ ಕಾರ್ಖಾನೆಗಳ ಸಿ ಮತ್ತು ಡಿ ದರ್ಜೆ ನೇಮಕಾತಿಯಲ್ಲಿ ಶೇ 100 ರಷ್ಟು ಕನ್ನಡಿಗರಿಗೆ ಆದ್ಯತೆ ನೀಡಬೇಕು.

ಎಚ್ ಎಎಲ್ ನ ಬೆಂಗಳೂರು ಘಟಕದಲ್ಲಿ 15,162 ನೌಕರರಿದ್ದಾರೆ. ಅವರಲ್ಲಿ 11,262 ಮಂದಿ ಕನ್ನಡಿಗರು. ಖಾಲಿ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಬಗ್ಗೆ ಚಿಂತಿಸಲಾಗುವುದು. ಸೂಚನಾ ಫಲಕ, ಸಂಸ್ಥೆ ವರದಿ ಎಲ್ಲವೂ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಎಚ್ ಎಎಲ್ ನ ಮಾನವ ಸಂಪನ್ಮೂಲ ಅಧಿಕಾರಿ ಸುಧಾಕರ್ ರಾವ್ ಹೇಳಿದ್ದಾರೆ.

English summary
The Hindustan Aeronautics Limited (HAL) is decided to provide Kannadigas Quota to 677 posts in C and D categories. This decision by HAL reflected after protest by Karnataka Rakshana Vedike and Kannada Development Authority Chairman Mukhyamantri Chandru demanding to provide quota under Dr Sarojini mahisi report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X