ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನಿ, ಭಾಗವಹಿಸಿ ವಾಟಾಳರ ಎಮ್ಮೆಗಳ ಸಮಾವೇಶಕ್ಕೆ!

By Srinath
|
Google Oneindia Kannada News

Vatal Nagaraj
ಬೆಂಗಳೂರು, ಜುಲೈ 12: ಪ್ರತಿಭಟನೆಯೆಂದರೆ ವಾಟಾಳ್, ವಾಟಾಳ್ ಅಂದರೆ ಪ್ರತಿಭಟನೆ. ದಿನಕ್ಕೊಂದು, ವಿಭಿನ್ನ ಪ್ರತಿಭಟನೆಗೆ ಹೆಸರಾದ ವಾಟಾಳ್ ನಾಗರಾಜ್ ಅವರ ಪ್ರತಿಭಟನೆಯ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗುತ್ತಿದೆ, ಅದುವೇ 'ಎಮ್ಮೆಗಳ ಸಮಾವೇಶ'. ಪ್ರತಿಭಟನೆಗೆ ಕಾರಣ ಗ್ರಾಮೀಣ ಅಭಿವೃದ್ದಿ ಮಂಡಳಿ ರಚಿಸುವ ಸಲುವಾಗಿ. ಸಮಯ 11 ಗಂಟೆಗೆ, ಸ್ಥಳ ಚಾಮರಾಜನಗರ.

ಎಮ್ಮೆಗಳು ಗ್ರಾಮೀಣ ಪ್ರದೇಶದ ಜನರ ಬದುಕಿನ ಒಂದು ಭಾಗ. ವಿವಿಧ ಮಾದರಿಯ ಎಮ್ಮೆಗಳ ತಳಿ ಅಭಿವೃದ್ದಿ ಪಡಿಸುವಂತೆ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ. ಬಸ್, ತೈಲ ಬೆಲೆಗಳ ಏರಿಕೆಯಿಂದ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಚಾಮರಾಜನಗರ ಜಿಲ್ಲೆ ಸೇರಿದಂತೆ ಗಡಿ ಜಿಲ್ಲೆಗಳ ಅಭಿವೃದ್ದಿಗೆ ಹತ್ತು ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆಂದು ತನ್ನ ಕಪ್ಪು ಕನ್ನಡಕವನ್ನು, ಟೋಪಿಯನ್ನು ತೆಗೆಯದೆ ವಾಟಾಳ್ ನಾಗರಾಜ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಸಮಗ್ರ ಗ್ರಾಮೀಣ ಅಭಿವೃದ್ದಿಗಾಗಿ ವಿಶೇಷ ಯೋಜನೆ ತಯಾರಿಸಿ ಗ್ರಾಮೀಣ ಜನರ ಆಶ್ರಯಕ್ಕಾಗಿ ಗ್ರಾಮೀಣ ಅಭಿವೃದ್ದಿ ಮಂಡಳಿ ರಚಿಸಬೇಕೆಂದು ಒತ್ತಾಯಿಸಿದ ವಾಟಾಳ್, ನಾಳೆ ಈ ವಿಶಿಷ್ಟ ಪ್ರತಿಭಟನೆ ನಡೆಸಲಿದ್ದಾರೆ. 11 ಗಂಟೆಗೆ ನಡೆಯಲಿರುವ ಎಮ್ಮೆಗಳ ಸಮಾವೇಶದಲ್ಲಿ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ಹಣ ಮೀಸಲಿಡುವಂತೆ ಸರಕಾರವನ್ನು ಒತ್ತಾಯಿಸಲಿದ್ದೇನೆಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

English summary
Kannada activist Vatal Nagaraj is back with his trade mark protests. This time he is riding a Buffalo at Chamarajanagar on july12 at 11am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X