ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಸ್ಕೋ ವಿರುದ್ಧ ಚಳವಳಿ: ರೈತರ ಜೊತೆ ಟೆಕ್ಕಿಗಳು

By Mahesh
|
Google Oneindia Kannada News

Techies support farmers to fight against Posco
ಬೆಂಗಳೂರು ಜು 12: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲು ಮುಂದಾಗಿರುವ ಬಹುರಾಷ್ಟ್ರೀಯ ಕಂಪೆನಿ ಪೋಸ್ಕೋ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಿದೆ. ಸರ್ಕಾರದ ನೋಟಿಸ್ ಅನ್ನು ಧಿಕ್ಕರಿಸಿರುವ ರೈತರು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ರೈತರ ಈ ಹೋರಾಟಕ್ಕೆ ಸಾಫ್ಟ್ ವೇರ್ ಟೆಕ್ಕಿಗಳು ಕೈ ಜೋಡಿಸಿದ್ದಾರೆ.

ಐಟಿ ಬಿಟಿ ಉದ್ಯೋಗಿಗಳು, ವೈದ್ಯರು ಹೆಚ್ಚಾಗಿರುವ ಬೆಂಗಳೂರು ಮೂಲದ ಅವಿರತ ಟ್ರಸ್ಟ್, ಇತ್ತೀಚೆಗೆ ಗದಗ ರೈತರನ್ನು ಕೂಡಿಸಿಕೊಂಡು ಮಾಡಿದ ಪಾಠ ಪ್ರವಚನ ಈಗ ಫಲ ಕೊಟ್ಟಿದೆ. ಬೃಹತ್ ಕೈಗಾರಿಕೆಯಿಂದ ಅಭಿವೃದ್ಧಿ ಎನ್ನುವ ಸರ್ಕಾರದ ಯೋಜನೆಯ ಹಿಂದಿರುವ ಸತ್ಯಾಸತ್ಯತೆ ಬಗ್ಗೆ ರೈತರಿಗೆ ಅವಿರತದ ಟೆಕ್ಕಿಗಳು ತಿಳಿಹೇಳಿದ್ದರು.

ಗದಗ ಜಿಲ್ಲೆಯಾದ್ಯಂತ ತಂಡ ತಂಡವಾಗಿ ಭೇಟಿ ಕೊಟ್ಟು, ರೈತರಲ್ಲಿ ಜಾಗೃತಿ ಮೂಡಿಸಲು ಅವಿರತ ಟ್ರಸ್ಟ್ ಯೋಜನೆ ಹಾಕಿಕೊಂಡಿದೆ. ವಾರಾಂತ್ಯದಲ್ಲಿ 30 ಜನರ ತಂಡ ಹಳ್ಳಿಗಳಿಗೆ ಭೇಟಿ ಕೊಟ್ಟು, ಶಾಲಾ ಮಕ್ಕಳಿಂದ ಹಿಡಿದು ಗ್ರಾಮದ ಸಮಸ್ತರಿಗೆ ಶಿಕ್ಷಣ ನೀಡುತ್ತಿದೆ. ಇದರ ಜೊತೆಗೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಬೇರೆ ಸಾಗಿದೆ.

ಸುಮಾರು 12 ಲಕ್ಷ ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಕೈಗಾರಿಕಾ ಸಂಸ್ಥೆಗಳ ಕೈ ಸೇರಿದೆ. ಉಕ್ಕು ಕಾರ್ಖಾನೆ ಸ್ಥಾಪನೆಗೆ ಬೇಕಿರುವುದು 3,300 ಎಕರೆ ಭೂಮಿ ಮಾತ್ರ. ಸರ್ಕಾರ ಹೊಸದಾಗಿ ರೈತರ ಭೂಮಿ ವಶಪಡಿಸಿಕೊಳ್ಳುವುದನ್ನು ಕೈ ಬಿಟ್ಟು, ಈಗಾಗಲೇ ಕಾರ್ಖಾನೆಗಳ ವಶದಲ್ಲಿರುವ ಅಕ್ರಮ ಭೂಮಿಯನ್ನು ಪೋಸ್ಕೋಗೆ ನೀಡಲಿ ಎಂದು ಅವಿರತ ಟ್ರಸ್ಟ್ ನ ಅಧ್ಯಕ್ಷ ಕೆಟಿ ಸತೀಶ್ ಗೌಡ ಹೇಳುತ್ತಾರೆ.

English summary
Aviratha, a trust formed by IT BT professionals joined hand with villagers, farmers in Gadag in Anti Posco protest. Techies educating villagers about industrialization and protested against land acquisition by Posco company to build steel plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X