ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ದುರಂತ ಸ್ಥಳಕ್ಕೆ ಹೋಗದೆ ಸಚಿವರ ಉದ್ದಟತನ

By Srinath
|
Google Oneindia Kannada News

Manmohan Singh
ಕೋಲ್ಕತ್ತಾ, ಜುಲೈ 12: ಅಸ್ಸಾಂನಲ್ಲಿ ಗುವಾಹಟಿ- ಪುರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಸೂಚಿಸಿದ ನಂತರವೂ ರೈಲ್ವೆ ಖಾತೆ ರಾಜ್ಯ ಸಚಿವ ಮುಕುಲ್ ರಾಯ್ ಅವರು ಅಲ್ಲಿಗೆ ಹೋಗದಿರುವುದು ವಿವಾದಕ್ಕೆ ಕಾರಣವಾಗಿದೆ.

ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಮಾನ ಸಿಗಲಿಲ್ಲ. ಅದು ಪಕ್ಷದ ಮತ್ತೋರ್ವ ನಾಯಕ ದಿನೇಶ್ ತ್ರಿವೇದಿ ಅವರ ಪಾಲಾಗಿದೆ ಎಂದು ಅಸಮಾಧಾನಗೊಂಡ ತೃಣಮೂಲ ನಾಯಕ ಮುಕುಲ್ ಪ್ರಧಾನಿ ಆದೇಶವನ್ನು ಧಿಕ್ಕರಿಸಿ, ತಮ್ಮ ಸಾಮಾಜಿಕ ಹೊಣೆಗಾರಿಕೆಗೆ ಎಳ್ಳು ನೀರು ಬಿಟ್ಟರೆಂದು ತಿಳಿದುಬಂದಿದೆ.

ಪ್ರಧಾನಿಗಳ ಸೂಚನೆ ಹೊರತಾಗಿಯೂ ತಾವು ಸ್ಥಳಕ್ಕೆ ತೆರಳುವುದಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಯ್, 'ಈ ಬಗ್ಗೆ ಹೇಳುವುದು ಏನೂ ಇಲ್ಲ. ಹೆಚ್ಚಿನ ಮಾಹಿತಿಗೆ ಉತ್ತರ ಪ್ರಾಂತೀಯ ರೈಲ್ವೆ ಪ್ರಧಾನ ವ್ಯವಸ್ಥಾಪಕರನ್ನು ಪ್ರಶ್ನಿಸಿ' ಎಂದು ಉದ್ದಟತನದ ಉತ್ತರ ನೀಡಿದರು.

ಉತ್ತರ ಪ್ರಾಂತೀಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎಂ.ಆರ್.ಚಂದ್ರ ಅವರು, ಸಚಿವರು ರೈಲು ಹಳಿ ತಪ್ಪಿದ ರಂಗಿಯಾ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದರು. ಆದರೆ ಅಲ್ಲಿನ ಪರಿಸ್ಥಿತಿ ಸಹಜವಾಗಿದ್ದು, ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರಷ್ಟೇ. ಯಾವುದೇ ಸಾವು ಸಂಭವಿಸಿಲ್ಲ ಹಾಗಾಗಿ ಸ್ಥಳಕ್ಕೆ ಭೇಟಿ ನೀಡುವ ಅಗತ್ಯ ಇಲ್ಲ ಎಂದು ಸಲಹೆ ಮಾಡಿದ್ದಾಗಿ ತಿಳಿಸಿದರು.

ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಮಾಲ್ವ ಬಳಿ ಕಲ್ಕಾ ರೈಲು ದುರಂತದ ಸ್ಥಳಕ್ಕೆ ಏಕೆ ಭೇಟಿ ನೀಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಯ್, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣೆ ಹಾಗೂ ಪರಿಹಾರ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ ಎಂದು ಉತ್ತರಿಸಿದರು.

English summary
Mukul Roy, MoS for railways, is defiant. Even after prime minister Manmohan Singh asked him on Monday (July 11) to visit the railway accident site in Assam, Roy remained non-committal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X