ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್.ಕಾಂನಲ್ಲೂ ಸಚಿನ್ ತೆಂಡೂಲ್ಕರ್ ಜಗದೇಕವೀರ

By Mahesh
|
Google Oneindia Kannada News

Sachin with Fedex
ವಿಶ್ವಕಪ್ ಕ್ರಿಕೆಟ್ 2011 ಸಂದರ್ಭದಲ್ಲಿ ಹಲವು ಕ್ರಿಕೆಟ್ಟಿಗರಿಗೆ ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣಗಳಿಗೆ ನಿರ್ಬಂಧ ಹೇರಲಾಗಿತ್ತು. ಅಭಿಮಾನಿಗಳು ಸಚಿನ್ ಟ್ವೀಟ್ ಗಾಗಿ ಕಾದು ಕೂತ್ತಿದ್ದು ಇದೆ. ಈಗ ಕ್ರಿಕೆಟ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ಗಣ್ಯಾತಿಗಣ್ಯರು ಟ್ವಿಟ್ಟರ್ ಹಕ್ಕಿಯ ಹಿಂದೆ ಬಿದ್ದಿದ್ದಾರೆ. ಈ ಗಣ್ಯರ ಹಿಂದೆ ಲಕ್ಷಾಂತರ ಹಿಂಬಾಲಕರು ಇರುತ್ತಾರೆ. ಸರ್ವದಾಖಲೆಗಳ ಪತನಗೈದಿರುವ ಜಗದೇಕವೀರ ಸಚಿನ್, ಟ್ವಿಟ್ಟರ್ ನಲ್ಲೂ ಅಗ್ರಸ್ಥಾನ ಕಾಯ್ದು ಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿರುವ ಟಾಪ್ 5 ಕ್ರಿಕೆಟರ್ ಗಳು ಇಂತಿದ್ದಾರೆ.

5. ಗ್ರಹಾಂ ಸ್ವಾನ್ : ವಿಶ್ವದ ಅಗ್ರಗಣ್ಯ ಆಫ್ ಸ್ಪಿನ್ನರ್, ಇಂಗ್ಲೆಂಡ್ ತಂಡದ ಬೆನ್ನಲುಬಾಗಿದ್ದಾರೆ. ಬರೀ ಸ್ವಂತದ ಸಂದೇಶಗಳಲ್ಲದೆ ಸಹಸ್ಪರ್ಧಿಯಾದ ಮುರಳಿ ಹೊಗಳಿ ವಿಡಿಯೋ ಕ್ಲಿಪ್ಲಿಂಗ್ ಕೂಡಾ ಹಾಕುವ ಧಾರಾಳತನ ಸ್ವಾನ್ ಗಿದೆ. ವಿಶ್ವಕಪ್ ಮುಂದೆ 165,810 ಹಿಂಬಾಲಕರಿದ್ದರು ಈಗ ಸಂಖ್ಯೆ 244,210ಕ್ಕೇರಿದೆ. ಲೇಟೆಸ್ಟ್ ಟ್ವೀಟ್ ಮುರಳಿ ಮ್ಯಾಜಿಕ್ ಬಗ್ಗೆ ವಿಡಿಯೋ..

4. ಜಹೀರ್ ಖಾನ್: ಭಾರತದ ವೇಗಿ ಜಹೀರ್ ಅಭಿಮಾನಿಗಳು ಇತ್ತೀಚೆಗೆ ಇನ್ನಷ್ಟು ಹೆಚ್ಚಾಗಿದ್ದಾರೆ. ಕಾರಣ, ಇಶಾ ಜೊತೆಗೆ ನಿಶ್ಚಿತಾರ್ಥದ ಸುದ್ದಿ. ಸತತವಾಗಿ ಯಶಸ್ಸಿನ ಕುದುರೆ ಏರಿ ಓಡುತ್ತಿರುವುದು ಜಹೀರ್ ಗೆ ಅಭಿಮಾನಿಗಳನ್ನು ಮುತ್ತುವಂತೆ ಮಾಡಿದೆ. ವಿಶ್ವಕಪ್ ಗೂ ಮೊದಲು 198,152 ಹಿಂಬಾಲಕರನ್ನು ಹೊಂದಿದ್ದ ಜಹೀರ್ ಈಗ 278,938 ಜನರನ್ನು ಹೊಂದಿದ್ದಾರೆ. ಜೂನ್ 18ರಂದು ಬೆಂಗಳೂರಿನ ಎನ್ ಸಿಎ ತರಬೇತಿ ಬಗ್ಗೆ ಚುಟುಕು ಸಂದೇಶ ಹರಿಬಿಟ್ಟಿದ್ದಾರೆ.

3. ಶೇನ್ ವಾರ್ನ್: ಹುಣಸೇ ಮುಪ್ಪಾದರೂ ಹುಳಿ ಮುಪ್ಪೇ ಎನ್ನುವಂತೆ ಇತ್ತೀಚೆಗೆ ಐಪಿಎಲ್ ನಿಂದಲೂ ನಿವೃತ್ತಿ ಹೊಂದಿದ್ದ ಸುಂದರಾಂಗ ಶೇನ್ ವಾರ್ನ್ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ವಿಶ್ವದ ಶ್ರೇಷ್ಠ ಕ್ರಿಕೆಟರ್ ಶೇನ್ ಈಗಲೂ ಇಂದಿನ ಯುವಪೀಳಿಗೆಗೆ ಪೈಪೋಟಿ ನೀಡುತ್ತಿದ್ದಾನೆ. ಆಗ 329,404 ಹಿಂಬಾಲಕರನ್ನು ಹೊಂದಿದ್ದ ಶೇನ್, 485,160ರನ್ನು ಹೊಂದಿದ್ದಾನೆ. ಟ್ವಿಟ್ಟರ್ ನಲ್ಲಿ ಸದಾ ಚಟುವಟಿಕೆಯಿಂದಿರುವ ಶೇನ್ ಪಂಚಿಂಗ್ ಡೈಲಾಗ್ ಗಳು, ವೈಯಕ್ತಿಕ ಜೀವನದ ಮಾಹಿತಿಗಳು ಅಭಿಮಾನಿಗಳನ್ನು ಕುತೂಹಲದಿಂದ ಕಾಯ್ದುಕೊಂಡಿದೆ.

2. ಯುವರಾಜ್ ಸಿಂಗ್ : ಭಾರತ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂಬ ಹಣೆಪಟ್ಟಿ ಹೊತ್ತು ಓಡಾಡುತ್ತಿರುವ ಯುವರಾಜನ ಅಭಿಮಾನಿಗಳ ಸಂಖ್ಯೆ ಏನೂ ಕಮ್ಮಿಯಿಲ್ಲ. ಲಂಡನ್ ನಲ್ಲಿ ಸುತ್ತುತ್ತಿರುವ ಯುವರಾಜ, ಇಂಗ್ಲೆಂಡ್ ಪ್ರವಾಸದ ಬಗ್ಗೆ ತಲೆಕೆಡಿಸಿಕೊಂಡಿದ್ದಾನೆ. ಯುವಿ ಬಗೆಗಿನ ಗಾಸಿಪ್ ಸುದ್ದಿಗಳು, ಬಾಲಿವುಡ್ ಬೆಡಗಿಯರ ಜೊತೆ ಟ್ವೀಟ್ ಸಂದೇಶಗಳು ಹೆಚ್ಚೆಚ್ಚು ಹಿಂಬಾಲಕರನ್ನು ಹೊಂದುವಂತೆ ಮಾಡಿದೆ. 334,762 ಹಿಂಬಾಲಕರಿದ್ದ ಯುವಿಪಡೆಯಲ್ಲಿ ಈಗ 586,795 ಜನರಿದ್ದಾರೆ.

1. ಸಚಿನ್ ತೆಂಡೂಲ್ಕರ್: ಸಚಿನ್ ಗೆ ಸದ್ಯಕ್ಕೆ ಯಾವ ಕ್ರಿಕೆಟರ್ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೆಚ್ಚು ಗಾಸಿಪ್ ಇಲ್ಲದೆ, ನಾನ್ ಸೆನ್ಸ್ ಟ್ವೀಟ್ ಇಲ್ಲದೆ ಸಚಿನ್ ಕೇವಲ ತಮ್ಮ ಆಟದ ಮೂಲಕ ಜನಪ್ರಿಯತೆ ಹಿಗ್ಗಿಸಿಕೊಳ್ಳುತ್ತಿದ್ದಾರೆ. ವಿಶ್ವಕಪ್ ಗೂ ಮೊದಲು 851,238 ಹಿಂಬಾಲಕರನ್ನು ಹೊಂದಿದ್ದ ಸಚಿನ್ ಈಗ 1,204,710 ಹಿಂಬಾಲಕರನ್ನು ಪಡೆದಿದ್ದಾರೆ.

I am always humbled by the support and love that I get from Indians even when I am @ Wimbledon watching tennis. ಎಂದು ಇತ್ತೀಚಿಗೆ ವಿಂಬಲ್ಡನ್ ಪಂದ್ಯ ವೀಕ್ಷಿಸಿದ ಮೇಲೆ ಟ್ವೀಟ್ ಮಾಡಿದ್ದಾರೆ. ಸಚಿನ್ ಎಂಟ್ರಿ ಆದ ಮೇಲೆ ಭಾರತದಲ್ಲಿ ಟ್ವಿಟ್ಟರ್ ಗೆ ಹೊಸ ಕಳೆ ಬಂದಿದ್ದಂತೂ ಸುಳ್ಳಲ್ಲ.

English summary
Social networking and micro blogging site has celebrities from all fields. Post World cup 2011 many cricketers are becoming twitaholic. Sachin Tendulkar again tops the list of most followed cricketers on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X