ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ಮೇಲೆ ಭೂಕಬಳಿಕೆ ಕೇಸುಗಳ ಜಡಿಮಳೆ

By Srinath
|
Google Oneindia Kannada News

jayalalitha attends cabinet meetin
ಚೆನ್ನೈ, ಜುಲೈ 11: ಜಯಲಲಿತಾ ಅಧಿಕಾರಕ್ಕೆ ಬರುತ್ತಿದ್ದಂತೆ ಸುವಿಶಾಲ ತಮಿಳುನಾಡಿನ ಎಲ್ಲ ಭಾಗಗಳಲ್ಲಿಯೂ ಭೂಕಬಳಿಕೆಯ ದೂರುಗಳ ಹೊಳೆಯೇ ಹರಿಯುತ್ತಿದೆ. ಗಮನಾರ್ಹವೆಂದರೆ ಇವುಗಳಲ್ಲಿ ಬಹುತೇಕ ದೂರುಗಳು ಡಿಎಂಕೆ ನಾಯಕರ ವಿರುದ್ಧ ಬಂದಿವೆ. ಇದಕ್ಕಾಗಿ ಅಮ್ಮ ಜಯಮ್ಮ ವಿಶೇಷ ಪೊಲೀಸ್‌ ಘಟಕಗಳನ್ನು ಸ್ಥಾಪಿಸಿದ್ದಾರೆ.

ಡಿಎಂಕೆ ನಾಯಕರು ಬಡವರ ಮೇಲೆ ದಬ್ಟಾಳಿಕೆ ನಡೆಸಿ ಅವರ ಭೂಮಿ ಕಿತ್ತುಕೊಳ್ಳುತ್ತಿದ್ದು, ತಾವು ಅಧಿಕಾರಕ್ಕೆ ಬಂದರೆ ಇವೆಲ್ಲದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಯಲಲಿತಾ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರು. ಅದರಂತೆ ಇತ್ತೀಚೆಗೆ ಎಲ್ಲಾ ಜಿಲ್ಲೆಗಳಲ್ಲಿ ಭೂಕಬಳಿಕೆ ಪ್ರಕರಣಗಳ ವಿಚಾರಣೆಗೆ ಒತ್ತು ನೀಡಲಾಗಿದೆ. 1500ಕ್ಕೂ ಹೆಚ್ಚು ದೂರುಗಳೂ ಬಂದಿವೆ.

ಬಹುತೇಕ ದೂರುಗಳಲ್ಲಿ ಪೊಲೀಸರು ಸ್ಥಳೀಯ ಡಿಎಂಕೆ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಕೆಲವು ದೂರುಗಳು ಮಾಜಿ ಉಪ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌ ಅವರ ವಿರುದ್ಧವೂ ದಾಖಲಾಗಿದ್ದು, ಯಾವುದೇ ಸಾಕ್ಷ್ಯಗಳಿಲ್ಲದೆ ನಮ್ಮ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ನಾವು ಅವುಗಳನ್ನು ಎದುರಿಸುತ್ತೇವೆ ಎಂದು ಇಬ್ಬರೂ ಹೇಳಿದ್ದಾರೆ.

ಡಿಎಂಕೆ ಅಧಿಕಾರದಲ್ಲಿದ್ದಾಗ ಭೂಮಿ ಕಳೆದುಕೊಂಡವರು ದೂರು ನೀಡಲು ಹೆದರುತ್ತಿದ್ದರು. ಈಗ ಜಯಲಲಿತಾ ಅಧಿಕಾರಕ್ಕೆ ಬಂದ ಮೇಲೆ ಅವರಿಗೆ ತಮ್ಮ ಭೂಮಿ ಮರಳಿ ಸಿಗಬಹುದೆಂಬ ನಿರೀಕ್ಷೆ ಹುಟ್ಟಿದೆ. ಹಾಗಾಗಿ ಧೈರ್ಯವಾಗಿ ದೂರು ನೀಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಬಹುತೇಕ ಎಲ್ಲಾ ಜಿಲ್ಲೆಗಳ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಭೂಕಬಳಿಕೆ ಪ್ರಕರಣಗಳ ತನಿಖೆಗೆಂದೇ ಒಬ್ಬ ಸಬ್‌ ಇನ್ಸ್‌ಪೆಕ್ಟರ್ ಹಾಗೂ ಒಬ್ಬ ಪೇದೆಯನ್ನು ನಿಯೋಜಿಸಲಾಗಿದೆ. ಭೂಮಿ ಕಳೆದುಕೊಂಡವರಲ್ಲಿ ಸ್ಥಳೀಯ ರೈತರ ಜತೆಗೆ ಅನಿವಾಸಿ ಭಾರತೀಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

English summary
Chief minister J. Jayalalithaa ordered the police to take prompt action on complaints of land grabbing. Since July 1 the police has received over 1,449 complaints of land grabbing from the public and complaints are still pouring in”, she said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X