ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಆಡಳಿತ ಇಂಗ್ಲೀಷ್ ಮಯ, ಕನ್ನಡವೇ ಮಾಯ

By * ವಿಕ್ರಮ್ ಹೆಗ್ಡೆ, ಬೆಂಗಳೂರು
|
Google Oneindia Kannada News

E Governance Kannada
E-governance ಅಥವಾ E- ಆಡಳಿತದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿಬರ್ತಿದೆ ಅಲ್ವ? ಏನು ಈ ಇ- ಗವರ್ನೆನ್ಸ್ ಅಂದರೆ? ಸಾಮಾನ್ಯವಾಗಿ ಎಲ್ಲರೂ ಇದನ್ನ electronic governance ಅಂತ ವಿಸ್ತರಿಸಿ, ಸರ್ಕಾರೀ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ದೊರಕಿಸುವುದು ಎಂದು ಅರ್ಥ ಮಾಡಿಕೊಂಡಿದ್ದೇವೆ. ಆದರೆ ನಮ್ಮ ರಾಜ್ಯದಲ್ಲಿ ಇದನ್ನು ಅಳವಡಿಸಿರುವ ಪರಿ ನೋಡಿದ್ರೆ ಬೇರೇನೇ ಅಭಿಪ್ರಾಯ ಬರಬಹುದು. ಇ-ಗವರ್ನೆನ್ಸ್ ನ ವಿಸ್ತಾರ ರೂಪ English governance ಇದ್ದಿರಬಹುದೇನೋ ಎಂದೆನಿಸುತ್ತೆ. ಕುಶಾಲಿಗಲ್ಲ! ಅಂಕಿ ಅಂಶಗಳ ಸಹಿತ ವಿವರಿಸುತ್ತೇನೆ ನೋಡಿ.

ಕರ್ನಾಟಕದ ತಾಣಗಳ ಹಣೆಬರಹ!: ಇಲ್ಲಿ ನೋಡಿ. ಇದರಲ್ಲಿ ಕರ್ನಾಟಕದ ಎಲ್ಲ ಇ-ಗವರ್ನೆನ್ಸ್ ಯೋಜನೆಗಳ ಪಟ್ಟಿ ಇದೆ. ಈ ವೆಬ್ಸೈಟ್ ಯಾವ ಭಾಷೆಯಲ್ಲಿದೆ ನೋಡಿ. ಎಲ್ಲಾದರೂ 'ಕನ್ನಡ ಆವೃತ್ತಿ' ಅಂತ ಕೊಂಡಿಯಾದ್ರೂ ಕಂಡು ಬರುತ್ತಿದೆಯಾ? ಹೋಗಲಿ, ಇವರ E - ಆಡಳಿತ ಹುಡುಕಿಕೊಂಡು ಯಾರಾದರೂ ಆ ತಾಣಗಳಿಗೆ ಹೋದ್ರೆ ಅವರಿಗೆ ಸಿಗೋದು ಏನು ಗೊತ್ತಾ? ಅಲ್ಲಿರುವ 15 ಕೊಂಡಿಗಳಲ್ಲಿ 4 ಮಾತ್ರ ಕನ್ನಡ ಆವೃತ್ತಿಗೆ ಅವಕಾಶ ಮಾಡಿಕೊಡುತ್ತವೆ. ನೆನಪಿರಲಿ ಇವು ಯಾವು ನೇರವಾಗಿ ಕನ್ನಡದಲ್ಲಿ ಮೂಡಿ ಬರಲ್ಲ. ಬಂದ ಮೇಲೆ ಕನ್ನಡ ಆವೃತ್ತಿ ಎಲ್ಲಿ ಸಿಗಬಹುದು ಅಂತ ನಾವೇ ಹುಡುಕಿಕೊಳ್ಳಬೇಕು.

ಅಲ್ಲೇ police constable ಸೇರ್ಪಡೆಗೆ ಪ್ರಕಟಣೆ ಇದೆ ನೋಡಿ. ಇದು ಕೂಡಾ ಕನ್ನಡದಲ್ಲಿಲ್ಲ. ಆ ವೆಬ್ಸೈಟ್ ಬರೀ ಇಂಗ್ಲೀಷಿನಲ್ಲಿದೆಯ? ಇಲ್ಲ, ಇನ್ನೊಂದು ಭಾಷೆ ಕೂಡ ಇದೆ. ಹಿಂದಿ. ಏನಿದರ ಅರ್ಥ?

ಇನ್ನೊಂದು ನೋಡಿ. ಇದು ಎಲ್ಲ ಜಿಲ್ಲಾಡಳಿತಗಳ ಅಂತರ್ಜಾಲ ತಾಣಗಳ ಪಟ್ಟಿ. ಕೆಲವು ಜಿಲ್ಲಾ ಪಂಚಾಯ್ತಿಗಳ ವೆಬ್ಸೈಟ್ ಕೂಡಿ ಒಟ್ಟು 38 ಇವೆ. ಇದರಲ್ಲಿ ಎಷ್ಟು ಕನ್ನಡದಲ್ಲಿದೆ? ಸೊನ್ನೆ.

ಇಲಾಖೆಗಳ ಅಂತರ್ಜಾಲ ತಾಣಗಳು? ಇದರಲ್ಲಿ ನಾನು ನೋಡಿದ ಪೈಕಿ ನಾಲ್ಕೈದು ಬಿಟ್ಟರೆ ಮತ್ತೆಲ್ಲ English governance ರೂಪದಲ್ಲೇ ಇವೆ.

ತಂತ್ರಜ್ಞಾನ ಜನರ ಬದುಕನ್ನು ಸರಳಗೊಳಿಸಬೇಕು!

ನಿಜವಾಗಿಯೂ ತಂತ್ರಜ್ಞಾನ ಎಲ್ಲೆಲ್ಲಿ ಸಾಧ್ಯನೋ ಅಲ್ಲೆಲ್ಲ ಉಪಯೋಗಿಸಿಕೊಳ್ಳಬೇಕು. ಇನ್ನು ಹೇಳ್ಬೇಕು ಅಂದ್ರೆ ಜನರು ಸರ್ಕಾರಿ ಕಚೇರಿ ತಿರುಗಾಡೋ ಪ್ರಸಂಗವೇ ಬರಬಾರದು. ಆದರೆ ಈ ಸೌಕರ್ಯನ ಬರೀ ಇಂಗ್ಲಿಷ್ ಭಾಷೇಲಿ ಕೊಟ್ರೆ ಏನು ಪ್ರಯೋಜನ ಹೇಳಿ?

ಇದನ್ನ ಈ ಮುಂಚೆ ಒಮ್ಮೆ ನಾನು ನಮ್ಮ ನ್ಯಾಯಾಲಯಗಳ ವಿಷಯದಲ್ಲಿ ಒಬ್ಬ ನ್ಯಾಯಮೂರ್ತಿಗಳ ಹತ್ತಿರ ಕೇಳಿದಾಗ "ಕನ್ನಡ ಆವೃತ್ತಿನೂ ಇರುತ್ತೆ, ನಿಮಗೆ ಸರಿಯಾಗಿ ಹುಡುಕಲಿಕ್ಕೆ ಬಂದಿರುವುದಿಲ್ಲ" ಅಂದರು. ಕಾನೂನು ಕಲಿಕೆಯ ಮೊದಲನೆಯ ಸಾಲಿನಲ್ಲಿದ್ದ ನಾನು ಹೀಗೇ ಇರಬಹುದೇನೋ ಎಂದುಕೊಂಡೆ. ಇರಲಿ, ನಾನು ಈ ವಿಷಯದಲ್ಲಿ ದಡ್ಡನೇ ಆಗಿರಬಹುದು. ಆದರು ದಡ್ಡನಿಗೂ ತಿಳಿವಂತೆ ಸೌಲಭ್ಯಗಳನ್ನು ದೊರಕಿಸುವುದು ಸರಕಾರದ ಕರ್ತವ್ಯವಲ್ಲವೇ?

ಇನ್ನು UID ಬರುತ್ತಿದೆ. ಯೋಜನೆಯ ಪ್ರಕಾರ ನಡೆದರೆ ಮುಂದೆ ಹೆಚ್ಚು ಹೆಚ್ಚು ಸರಕಾರೀ ಸೌಲಭ್ಯಗಳು ಇ-ಗವರ್ನೆನ್ಸ್ ಮೂಲಕವೇ ಲಭ್ಯವಾಗುತ್ತವೆ. ಆಗಲೂ ಇದೇ ಧೋರಣೆ ಮುಂದುವರೆದರೆ ಕನ್ನಡಿಗರಿಗೆ ಬಹಳ ಅನಾನುಕೂಲವೇ.[ಸುದ್ದಿ ಕೃಪೆ: ಏನ್ಗುರು ಬ್ಲಾಗ್]

English summary
Does E Governance means English Governance? Many of the government websites under E Governance does not have kannada language support and it is difficult for public those who don't know English.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X