ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಸ್ ಬೇಡವೆಂದ ಗಂಡ, ಜೈಲಿಗೆ ಹಾಕಿ ಎಂದ ಹೆಂಡತಿ

By Mahesh
|
Google Oneindia Kannada News

Wife slaps husband for refusing sex
ಹರ್ರಿ ಕೌಂಟಿ ಜು 11: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆಯ ವ್ಯತಿರಿಕ್ತ ರೂಪ ನಡೆಯುವುದು ಅಮೆರಿಕದಲ್ಲಿ ಕಾಮನ್. ಇಲ್ಲಿ 911 ಗೆ ಕರೆ ಮಾಡಿ ಪೊಲೀಸರು ಬಂದ ಮೇಲೆ ಜಗಳ ಮುಗಿಯುತ್ತದೆ. 911 ಕಂಟ್ರೋಲ್ ರೂಮ್ ಎದುರಿಸದ ವಿಚಿತ್ರ ಪ್ರಸಂಗದ ಆಡಿಯೋ ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ತನ್ನ ಗಂಡ ಸೆಕ್ಸ್ ಬೇಡ ಎನ್ನುತ್ತಿದ್ದಾನೆ ಅವನನ್ನು ಕೂಡಲೇ ಜೈಲಿಗೆ ಹಾಕಿ ಎಂದು ಮಹಿಳೆಯೊಬ್ಬಳು ಮನವಿ ಸಲ್ಲಿಸಿದ್ದಾಳೆ.

ಹರ್ರಿ ಕೌಂಟಿ ಪೊಲೀಸ್ ಇಲಾಖೆ ಜೂನ್ ತಿಂಗಳಲ್ಲಿ ಒಂದು ದಿನ ಬೆಳಗ್ಗೆ 911ರ ಕರೆ ಸ್ವೀಕರಿಸಿದಾಗ, ಹೆಂಗಸೊಬ್ಬಳು ಮಾತನಾಡಿ ಗಂಡ ಸೆಕ್ಸ್‌ಗೆ ತಿರಸ್ಕರಿಸುತ್ತಿದ್ದಾನೆ, ಅದಕ್ಕೆ ಆತನನ್ನು ಜೈಲಿಗೆ ಹಾಕಿ ನಾಲ್ಕು ಬಾರಿಸಬೇಕು ಎಂದು
ಬೇಡಿಕೊಂಡಿದ್ದಾಳೆ.

"ನಾನು ಇಂದು ಬೆಳಗ್ಗೆ ಆತನಿಗೆ ಹೊಡೆದೆ. ಏಕೆಂದರೆ ಆತ ನನ್ನೊಂದಿಗೆ ಸೆಕ್ಸ್ ಮಾಡಲು ವಿರೋಧಿಸಿದ್ದ ಅಲ್ಲದೆ ಕಳೆದ ಎರಡು ತಿಂಗಳಿಂದ ಆತ ನನ್ನೊಂದಿಗೆ ಸೆಕ್ಸ್ ಸಂಬಂಧ ಮಾಡಿಯೇ ಇಲ್ಲ. ಯಾವಾಗಲೂ ಫೋನ್ ನಲ್ಲಿ ಬ್ಯುಸಿ ಇರುತ್ತಾನೆ. ಅದಕ್ಕೆ ನಾನು ಅವನ ಕೆನ್ನೆಗೆ ನಾಲ್ಕು ಬಾರಿಸಿದೆ. ಇದರಿಂದ ಕೋಪಗೊಂಡ ಆತ ನನ್ನ ವಿರುದ್ಧ ಪೊಲೀಸ್ ದೂರು ನೀಡಿ ಜೈಲಿಗೆ ಹಾಕಿಸುತ್ತೇನೆ ಎಂದು ಹೇಳಿದ ಎಂದು ಮಹಿಳೆ ತನ್ನ ಪತಿಯ ಬಗ್ಗೆ ಪೊಲೀಸ್ ಅಧಿಕಾರಿಯೊಂದಿಗೆ ದೂರಿದ್ದಾಳೆ.

ಈ ಪ್ರಕರಣದ ಬಗ್ಗೆ ಆಕೆ ಗಂಡನನ್ನು ಪೊಲೀಸರು ಪ್ರಶ್ನಿಸಿದಾಗ, "ನನ್ನ ಹೆಂಡತಿಯೊಂದಿಗೆ ಅಂತಹ ಜಗಳವೇನೂ ನಡೆದಿಲ್ಲ, ಅವಳು ನನ್ನ ಜೈಲಿಗೆ ಹಾಕಿಸಬೇಕು ಎಂದು ಇಷ್ಟಪಟ್ಟಿದ್ದಾಳೆ. ಕಾರಣ ಗೊತ್ತಿಲ್ಲ" ಎಂದಿದ್ದಾನೆ. ಕೊನೆಗೆ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಎಮರ್ಜೆನ್ಸಿ ಕಾಲ್ ದುರ್ಬಳಕೆ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ. ಪತಿ, ಪತ್ನಿಯರ ಹೆಸರು, ವಿಳಾಸ, ಸಂಖ್ಯೆಗಳನ್ನು ಅಳಿಸಿದ ಸಂಪೂರ್ಣ ಧ್ವನಿಮುದ್ರಿಕೆಯನ್ನು ಡಬ್ಲ್ಯೂಎಂಬಿಎಫ್ ನ್ಯೂಸ್ ವರದಿ ಮಾಡಿದೆ.

English summary
A woman called 911 saying her husband wanted her to go to jail after she slapped him when he reportedly refused to have sex with her.WMBF News has provided the entire 911 call masking name and identity of the caller.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X