ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನಿನಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಕಟ್ಟೆಚ್ಚರ

By Srinath
|
Google Oneindia Kannada News

Japan earthquake tsunami alert July10
ಟೋಕಿಯೊ, ಜುಲೈ 10: ಸರಿಯಾಗಿ ನಾಲ್ಕು ತಿಂಗಳ ಹಿಂದೆ ಭೀಕರ ಸುನಾಮಿಗೆ ತ್ತುತ್ತಾಗಿದ್ದ ಜಪಾನಿನಲ್ಲಿ ಭಾನುವಾರ ಬೆಳಗ್ಗೆ ಮತ್ತೆ ಭಾರಿ ಭೂಕಂಪವಾಗಿದ್ದು, ಸುನಾಮಿ ಕಟ್ಟೆಚ್ಚರ ಘೋಷಿಸಲಾಗಿದೆ. ತಕ್ಷಣಕ್ಕೆ ಯಾವುದೇ ಸಾವುನೋವು ವರದಿಯಾಗಿಲ್ಲ. 'ಭೂಕಂಪದ ಪ್ರಮಾಣ 7.3ರಷ್ಟಿತ್ತು. ಇದರಿಂದ ಈಶಾನ್ಯ ಕರಾವಳಿಯಲ್ಲಿ ಸುನಾಮಿ ಬಗ್ಗೆ ಜಾಗ್ರತೆ ಇರಲಿ' ಎಂದು ಜಪಾನಿನ ಹವಾಮಾನ ಇಲಾಖೆ ಘೋಷಿಸಿದೆ.

ಫುಕೋಶಿಮಾ ಅಣು ಸ್ಥಾವರದಲ್ಲಿ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಸುನಾಮಿ ಕಟ್ಟೆಚ್ಚರ ಸ್ಥಳಿಯ ಮಟ್ಟದಲ್ಲಿದೆ. ಆದ್ದರಿಂದ ನೆರೆಯ ಕರಾವಳಿಗಳನ್ನು ಎಚ್ಚರಿಸಿಲ್ಲ. ಜಪಾನಿನ ಕಾಲಮಾನದ ಪ್ರಕಾರ ಭಾನುವಾರ ಬೆಳಗ್ಗೆ 9.57ರಲ್ಲಿ (ಜುಲೈ 10) 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಹವಾಮಾನ ಇಲಾಖೆ ಖಚಿತಪಡಿಸಿದೆ.

ಮಾರ್ಚ್ 11ರಂದು 9.1 ತೀವ್ರತೆಯ ಭೂಕಂಪ ತದನಂತರ ಬಲಾಢ್ಯ ಸುನಾಮಿ ಜಪಾನಿಗೆ ಬಡಿದಿತ್ತು. ಇದರಿಂದ ಅಂದಾಜು 20 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಸುನಾಮಿಯಿಂದ ಬೆಂಕಿ ಕಾಣಿಸಿಕೊಂಡು ಫುಕೋಶಿಮಾ ಅಣು ಸ್ಥಾವರ ಸಂಪೂರ್ಣವಾಗಿ ಜ್ವಾಲೆಗಳಲ್ಲಿ ನಂದಿಹೋಗಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

English summary
A strong earthquake (magnitude 7.3) jolted northeastern Japan on Sunday (July 10), and workers at the crippled Fukushima nuclear power plant were evacuated after an alert for a tsunami of 50 cm was issued by the country's metreological agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X