ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದಲ್ಲಿ ನಾಲ್ಕೇ ಸಿಲಿಂಡರ್‌ನಲ್ಲಿ ಅಡುಗೆ ಮಾಡಲು ಕಲಿಯಿರಿ

|
Google Oneindia Kannada News

LPG
ನವದೆಹಲಿ, ಜು. 9: ಇಂಧನ ಇಲಾಖೆಯ ಹೇಳಿಕೆಯಲ್ಲಿ ಯಾವುದೇ ಬದಲಾವಣೆಯಾಗದಿದ್ದಲ್ಲಿ ಸದ್ಯದಲ್ಲಿಯೇ ನಾವು ಉಪಯೋಗಿಸುವ ವರ್ಷದ ಐದನೇ ಎಲ್ ಪಿಜಿ ಸಿಲಿಂಡರ್ ನ ಬೆಲೆ ರು. 800 ಆಗಲಿದೆ. ಹೌದು! ವಿಷಯ ನಿಜ. ಇನ್ನು ಮುಂದೆ ನಾವು ವರ್ಷಕ್ಕೆ ನಾಲ್ಕು ಎಲ್ ಪಿಜಿ ಸಿಲಿಂಡರ್ ಮಾತ್ರ ಈಗ ಇರುವ ಬೆಲೆಯಲ್ಲಿ ಕೊಳ್ಳಲು ಸಾಧ್ಯ. ನಂತರ ಐದನೇ ಸಿಲಿಂಡರ್ ಬೇಕೆಂದಾದರೆ ರು. 800 ಅಥವಾ ಆಗಿನ ಮಾರುಕಟ್ಟೆ ದರ ಕೊಟ್ಟು ಕೊಂಡುಕೊಳ್ಳಬೇಕು.

ಇದು ಸಾಮಾನ್ಯ ವರ್ಗದ ಜನರಿಗೆ ಅಂತ ನೀವು ಅಂದುಕೊಂಡರೆ ಅದು ತಪ್ಪು. ಇದು ಬಡತನ ರೇಖೆಗಿಂತ ಕೆಳಗಿನವರಿಗೂ ಅನ್ವಯವಾಗುತ್ತದೆ. ಆದರೆ ಅವರು ರು. 1,400 ಕೊಟ್ಟು ಹೊಸ ಕನೆಕ್ಷನ್ ಪಡೆದುಕೊಳ್ಳಬಹುದು ಎಂಬುದು ಅವರಿಗೆ ದೊರೆತ ವರ. ಹಾಗಾದರೆ ಹೆಚ್ಚು ಜನರಿರುವ ಮನೆಯಲ್ಲಿ ಏನು ಗತಿ! ಹೊರಗಡೆ ತಿಂದರೆ ಹೊಟ್ಟೆ ಕೆಡುತ್ತೆ; ಮನೆಯಲ್ಲಿ ತಿಂದರೆ ಜೇಬು ಸುಡುತ್ತೆ.

ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಎಲ್ಲಾ ತುಟ್ಟಿಯಾಗಿರುವ ಈ ವೇಳೆಯಲ್ಲಿ ಎಲ್ ಪಿಜಿ ಸಿಲಿಂಡರ್ ಮಾತ್ರ ಏಕೈಕ ಆಶಾಕಿರಣವಾಗಿತ್ತು. ಈಗ ಅದಕ್ಕೂ ಕತ್ತರಿ ಬಿದ್ದು ಊಟ ಮಾಡಿದರೂ ಹೊಟ್ಟೆ ಉರಿ ಪ್ರಾರಂಭವಾಗುವಂತೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಗಗನಕ್ಕೇರಿದೆ ಎಂಬ ಸಿದ್ಧ ಉತ್ತರ ಯಾವಾಗಲೂ ನಮ್ಮ ಕೇಂದ್ರ ಸರ್ಕಾರದ ಬಳಿ ಇರುವುದು ಗೊತ್ತೇ ಇದೆಯಲ್ಲ...!

English summary
Cooking gas consumers would soon get only four refills in a year at subsidized rate. Every subsequent cylinder would cost Rs 800 or so at today's market price. The ministry proposes to limit the number of subsidized cylinders for even BPL (below poverty line) at four cylinders a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X