ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗೋ ವಿಮಾನ ದುರಂತ, 46 ಮಂದಿ ದುರ್ಮರಣ

|
Google Oneindia Kannada News

Congo plane crash
ಕಾಂಗೋ, ಜು. 9: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ನ 'ಕಾಂಗೋ'ದಲ್ಲಿ ಶುಕ್ರವಾರ (ಜು.8)118 ಪ್ರಯಾಣಿಕರಿದ್ದ ವಿಮಾನ ಅಪಘಾತಕ್ಕೀಡಾಗಿ 46 ಜನ ಧಾರುಣವಾಗಿ ಸಾವಿಗೀಡಾಗಿದ್ದಾರೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ವೇಳೆ 'ಹೇವಾ ಬೋರಾ' ಕಂಪೆನಿಗೆ ಸೇರಿದ ಈ ವಿಮಾನ ಕಾಂಗೋ ದೇಶದ ಉತ್ತರ ಭಾಗದಲ್ಲಿರುವ 'ಕಿಸಂಗನಿ' ಎಂಬಲ್ಲಿ ಭೂ ಸ್ಪರ್ಶ ಮಾಡವ ಪ್ರಯತ್ನದಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ.

ಹೇವಾ ಬೋರಾ ಅಧ್ಯಕ್ಷ ಸ್ಟಾವ್ ರೋಸ್ ಪಪಾಯೊಅನ್ನೊ ಈ ಅಪಘಾತವನ್ನು ಧೃಡೀಕರಿಸಿದ್ದು " ಇಲ್ಲಿಯವರೆಗೆ 44 ಶವಗಳು ದೊರೆತಿವೆ. ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ 2 ಜನ ಮೃತಪಟ್ಟಿದ್ದು 53 ಜನ ಸುರಕ್ಷಿತವಾಗಿದ್ದಾರೆ" ಎಂಬ ಮಾಹಿತಿ ನೀಡಿದ್ದಾರೆ. ಆದರೆ ಉಳಿದ 19 ಮಂದಿಯ ಬಗ್ಗೆ ಯಾವ ಮಾಹಿತಿಯೂ ದೊರೆತಿಲ್ಲ.

ಸಂಚಾರ ಮುಗಿಸಿ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗುತ್ತಿದ್ದ ವೇಳೆ, ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಹಾಗೂ ಭೀಕರ ಬಿರುಗಾಳಿಗೆ ವಿಮಾನ ತುತ್ತಾಗಿರುವುದನ್ನು ಕೂಡ ಉಲ್ಲೇಖಿಸಿರುವ ಅವರು ಕೆಟ್ಟ ಹವಾಮಾನದಿಂದಾಗಿ ರನ್ ವೇಗಿಂತ ಮೊದಲೇ ವಿಮಾನವನ್ನು ಲ್ಯಾಂಡ್ ಮಾಡಬೇಕಾದ ಪರಿಸ್ಥಿತಿಯಲ್ಲಿ ಈ ಅವಘಡ ಸಂಭವಿಸಿದೆ ಎಂದಿದ್ದಾರೆ. ರನ್ ವೇಯ ತುದಿಯಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

English summary
At least 46 people died when a plane crashed as it attempted to land in heavy rain in eastern Democratic Republic of Congo Friday, Jul 8, the air company said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X