ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾಗೆ 87 ಕೋಟಿ ರು. ಲಂಚ: ಲೋಕಾಯುಕ್ತ ಆರೋಪ

|
Google Oneindia Kannada News

Katta
ಬೆಂಗಳೂರು, ಜು.9: ಅದೇನು ಗ್ರಹಚಾರವೋ ಏನೋ! ಭೂ ಕಬಳಿಕೆ ಅಥವಾ ಲಂಚ ಪಡೆದ ಪ್ರಕರಣಗಳು ದಿನನಿತ್ಯದ ವರದಿಗಳಾಗುತ್ತಿವೆ. ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಶಾಸಕರುಗಳನ್ನು ಸಂಶಯದಿಂದಲೇ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗತೊಡಗಿದೆ. ಇದೀಗ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಪುತ್ರ, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಸೇರಿ 9 ಜನರ ವಿರುದ್ಧ ಲೋಕಾಯುಕ್ತರಿಂದ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿದೆ.

'ಇಟಾಸ್ಕಾ ಸಾಪ್ಟ್ ವೇರ್ ಡೆವಲಪ್ ಮೇಂಟ್ ಕಂಪನಿ'ಗೆ ಕೆಐಎಡಿಬಿ ಮೂಲಕ ಅಕ್ರಮವಾಗಿ 325 ಎಕರೆ ಭೂಮಿ ಮಂಜೂರು ಮಾಡಿರುವುದಕ್ಕೆ ಪ್ರತಿಯಾಗಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡ ಹಾಗೂ ಕಟ್ಟಾ ಜಗದೀಶ್ ಅವರು 87 ಕೋಟಿ ರು. ಲಂಚ ಪಡೆದಿರುವುದು. ಈ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಮಾಜಿ ಸಚಿವರೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯದ ಕಟಕಟೆಗೆ ಬಂದು ನಿಂತಂತಾಗಿದೆ.

ಆರೋಪಪಟ್ಟಿಯನ್ನು ಸ್ವೀಕರಿಸಿರುವ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ಅವರು 19 ರಿಂದ ವಿಚಾರಣೆ ಪ್ರಾರಂಭ ಎಂದು ಹೇಳಿ ಎಲ್ಲ ಆರೋಪಿಗಳಿಗೂ ಸಮನ್ಸ್ ಜಾರಿ ಮಾಡಿ, ಜುಲೈ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಈಗಾಗಲೇ ಭ್ರಷ್ಟಾಚಾರದಲ್ಲಿ ನಂ.1 ಪಟ್ಟ ಗಿಟ್ಟಿಸಿರುವ ರಾಜ್ಯದಲ್ಲಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ ಭ್ರಷ್ಟಾಚಾರ. ಜನಸಾಮಾನ್ಯರು ಇದರ ಕರಿನೆರಳಿನಲ್ಲೆ ಬದುಕಬೇಕಾದ ದುಸ್ಥಿತಿಗೆ ಏನನ್ನಬೇಕು?

English summary
Lokayuktha Police has submitted more than 25,000 pages charge sheet in bribe case of Rs. 87 crores, against former minister katta subramanya naidu and his son katta jagadish. Justice Mr. N.K. Sidhindra has told that the inquiry will be start from 19th of July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X