ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ದಾನಧರ್ಮದ ಫಲ ಅವ್ರ ಕುರ್ಚಿ ಉಳಿಸಿದೆ

By Mahesh
|
Google Oneindia Kannada News

Ragahveshwar Bharati on Yeddyurappa government
ಸಾಗರ ಜು 8: "ಸಿಎಂ ಯಡಿಯೂರಪ್ಪ ಅಧಿಕಾರ ಉಳಿಸಿಕೊಂಡಿದ್ದು ಮಠಮಾನ್ಯಗಳಿಗೆ ಧಾರಾಳವಾಗಿ ಹಣ ನೀಡಿದ್ದರಿಂದ ಮತ್ತು ಗೋಶಾಲೆಗಳಿಗೆ ಸಹಾಯ ಮಾಡಿದ್ದರಿಂದ, ದಾನಧರ್ಮದ ಪುಣ್ಯದ ಫಲ ಅವರನ್ನು ಕಾಪಾಡಿದೆ" ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.

ಸಾಗರ ತಾಲೂಕು ವರದಹಳ್ಳಿ ಶ್ರೀಧರಾಶ್ರಮ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಿನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಬಿದ್ದೇ ಬಿಟ್ಟಿತು ಎನ್ನುವಂತಹ ಸಂದರ್ಭ ಸಾಕಷ್ಟು ಸಲ ಎದುರಾಗಿತ್ತು. ಆದರೆ ಅವರು ಬಚಾವಾಗುತ್ತಿದ್ದಾರೆ. ಇದಕ್ಕೆಲ್ಲ ಯಾವ ರಾಜಕೀಯ ಅಥವಾ ವೈಜ್ಞಾನಿಕ ಕಾರಣವೂ ಇಲ್ಲ. ಬದಲಾಗಿ ಮಠಮಾನ್ಯಗಳಿಗೆ, ಗೋಶಾಲೆಗಳಿಗೆ ನೀಡಿದ ಉದಾರ ದಾನವೇ ಕಾರಣ ಎಂದರು.

ರಾಘವೇಶ್ವರ ಸ್ವಾಮಿ ಮಾತಿನಿಂದ ಸಭೆಯಲ್ಲಿದ್ದ ಅನೇಕರು ತಬ್ಬಿಬ್ಬಾದಂತೆ ಕಂಡು ಬಂದರು. ಆದರೆ ಭಕ್ತವೃಂದವೇ ಯಾರೂ ಸ್ವಾಮೀಜಿಯನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಗೋಶಾಲೆ ಆರಂಭಿಸಲಾಗುವುದು. ಅದಕ್ಕೆ ತಲಾ 5 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗುವುದು. ವರದಹಳ್ಳಿಯ ಗೋಶಾಲೆಗೆ ಪ್ರಪ್ರಥಮವಾಗಿ ಈ ಹಣ ಬಿಡುಗಡೆ ಮಾಡಲಾಗಿದೆ ಎಂದು ಯಡಿಯೂರಪ್ಪ ಅವರು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Karnataka Government is Stable and Yeddyurappa's good will of giving grants to Temples and Mutts saved his government. There is nothing wrong in giving hefty grants to seer. After all it will be used for public said Ramachandrapur Math seer Raghaveshwara Bharati Swamiji at Sridhara Ashram, Sagar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X