ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ ಸಂಪತ್ತಿನ ಮೇಲೆ ವಿದೇಶಿ ಮಾಧ್ಯಮಗಳ ದಾಳಿ

By Srinath
|
Google Oneindia Kannada News

Padmanabhaswamy Temple during 1931
ಹೊಸದಿಲ್ಲಿ, ಜುಲೈ 8: ತಿರುವನಂತಪುರದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನೆಲಮಾಳಿಗೆ ಉಗ್ರಾಣಗಳಲ್ಲಿ ಪತ್ತೆಯಾಗಿರುವ ಸಂಪತ್ತಿನ ಮೇಲೆ ದೇಶ ವಿದೇಶಗಳಿಂದ ಮಾಧ್ಯಮ ಮಂದಿ ಮುಗಿಬಿದ್ದಿದ್ದಾರೆ. ಹೆಚ್ಚಿನ ಪಾಲು ಕಬಳಿಸಲು ಕೋರ್ಟಿನಿಂದ ನೇಮಕಗೊಂಡಿರುವ ಸಮಿತಿ ಸದಸ್ಯರು ಪಡುತ್ತಿರುವ ಶ್ರಮಕ್ಕಿಂತ ತುಸು ಹೆಚ್ಚೇ ಎನ್ನುವಷ್ಟು ಮಾಧ್ಯಮದವರು ಸುದ್ದಿಗಾಗಿ ಎಲ್ಲೆಡೆ ಜಾಲಾಡುತ್ತಿದ್ದಾರೆ.

The New York Times, Washington Post, The Time Magazine, Newsweek, BBC and Deutsche Welle (Germany) ಸೇರಿದಂತೆ ಅನೇಕ ಟಿವಿ ಚಾನೆಲ್ ಗಳೂ ಸಂಪತ್ತಿನ ಮೇಲೆ ವರದಿಗಾಗಿ ಕಣ್ಣು ಹಾಕಿದ್ದಾರೆ. ಇನ್ನು ನಮ್ಮ ತಿರು ಅನಂತ ಪುರದ ಸಂಸದರಾದ ತಲೆಹರಟೆ ಶಶಿತರೂರ್ ಅವರ ಸುಪುತ್ರ ಇಶಾನ್ ತರೂರ್ ದಿ ಟೈಮ್ ಮ್ಯಾಗಜೀನ್ ವಿಶೇಷ ವರದಿಗಾರರರಾಗಿದ್ದಾರೆ. ಅವರಂತೂ ಅಪ್ಪನ ನೆಟ್ ವರ್ಕ್ ಬಳಸಿ ವಿಶೇಷ ವರದಿಗಳಿಗಾಗಿ ತಹತಹಿಸುತ್ತಿದ್ದಾರೆ. ಅದ್ಭುತ ಸುದ್ದಿಗಳನ್ನು ಹೆಕ್ಕಿ ತಾ ಎಂದು ಇಶಾನ್ ಗೆ 'ದಿ ಟೈಮ್' ಅಸೈನ್ ಮಾಡಿದೆ.

'ದಕ್ಷಿಣ ಭಾರತದ ದೇವಸ್ಥಾನದ ತಳದಲ್ಲಿ ಭರ್ಜರಿ ಸಂಪತ್ತಿನ ಲೋಕವೇ ತೆರೆದುಕೊಂಡಿದೆ' ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವರದಿಯ ತುಣುಕೊಂದು ಹೀಗಿದೆ ಓದಿಕೊಳ್ಳಿ: 'ಭಾರತದ ದೇವಸ್ಥಾನಗಳೆಂದರೆ ಧನಕನಕಗಳು ಹೇರಳವೇ. ಭಕ್ತಾದಿಗಳು, ಯಾತ್ರಾರ್ಥಿಗಳು, ಧನಿಕ ಕೊಡುಗೈ ದಾನಿಗಳು ಚಿನ್ನ, ನಗದು ಮುಂತಾದ ಅಮೂಲ್ಯ ವಸ್ತುಗಳನ್ನು ದೇವಸ್ಥಾನದ ಹುಂಡಿಗಳಲ್ಲಿ ಕಾಣಿಕೆ ಹಾಕುವುದು ಸಾಮಾನ್ಯವೇ. ಆದರೆ ... ಅನಂತ ದೇಗುಲ ನಿಧಿ ರಾಶಿಗಳ ಮುಂದೆ ಅವೆಲ್ಲ ಕುಬ್ಜವಾಗಿ ಕಾಣಿಸುತ್ತಿವೆ'.

ಆದರೆ ಒಂದು ಸಿಎನ್ಎನ್ ಮಾತ್ರ 'ಯಾರದು, ಭಾರತವನ್ನು ಬಡ ರಾಷ್ಟ್ರ ಎಂದಿದ್ದು. ತಿರುವನಂತಪುರಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ಸಂಪತ್ತು ಹೇಗೆ ಕೊಳೆಯುತ್ತಾ ಬಿದ್ದಿದೆ ಎಂಬುದನ್ನು ಪರಾಂಬರಿಸಿ ನೋಡಿ' ಎಂದು ಕೊಂಡಾಡಿದೆ. ಪಕ್ಕದ ಪಾಕಿಸ್ತಾನಕ್ಕೂ ಈ ಹಿಂದೂ ದೇಗುಲದಲ್ಲಿ ದೊರೆತಿರುವ ಧನಕನಕ ಅಪಾರ ಕುತೂಹಲ ಕೆರಳಿಸಿದೆ. ಡಾನ್ ಪತ್ರಿಕೆ ಈ ಸಂಪತ್ತಿನ ಬಗ್ಗೆ, ಧಾರ್ಮಿಕ ಸಂಪತ್ತಿನ ಬಗ್ಗೆ ಪಾಕಿಗಳಿಗೆ ಒಂದಷ್ಟು ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆಸಿದೆ.

English summary
The awe-inspiring riches of Sree Padmanabha Swamy Temple have triggered a new wave of colonial invasion. Leading international dailies and TV channels have sent their representatives to the state capital to cover the treasure hunt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X