ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದ ಹೆಸರನ್ನೇ ಬದಲಿಸಲು ಮಮತಾ ಆಲೋಚನೆ!

By Srinath
|
Google Oneindia Kannada News

Mamata Banerjee
ಕೋಲ್ಕತಾ, ಜುಲೈ 7: ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಸ್ಥಾಪಿಸಿದ್ದೇ ತಡ ರಾಜ್ಯ ಸರ್ವಾಮಗೀಣ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಇದುವರೆಗೆ ಯಾರಂದರೆ ಯಾರಿಗೂ ಹೊಳೆಯದಿದ್ದ ಅದ್ಭುತ ಆಲೋಚನೆ ದೀದಿಗೆ ಬಂದಿದೆ. ವ್ಯಾಪಾರ ದೃಷ್ಟಿಯಿಂದ ನಗರ, ಪಟ್ಟಣಗಳನ್ನು ಎ, ಬಿ ... ಸೆಂಟರುಗಳೆಂದು ವರ್ಗೀಸುವ ವಾಡಿಕೆಯಿದೆ.

ಆದರೆ ಅಕ್ಷರ ಮಾಲೆಯಲ್ಲಿ ಪಶ್ಚಿಮ ಬಂಗಾಳದ ಹೆಸರು ಎಲ್ಲಾ ರಾಜ್ಯಗಳಿಗಿಂತ ಕೆಳಗೆ ಬರುತ್ತದೆ ಎಂಬ ಕಾರಣಕ್ಕೆ ಇಡೀ ರಾಜ್ಯದ ಹೆಸರನ್ನೇ ಹೋಲ್ ಸೇಲ್ ಆಗಿ ಬದಲಿಸಲು ಮಮತಾಮಯಿದೀದಿ ನಿರ್ಧರಿಸಿದ್ದಾರೆ! ರಾಜ್ಯವನ್ನು ಮೇಲ್ಮಟ್ಟಕ್ಕೆ ಎತ್ತವುದು ಎಂದರೆ ಇದೇನೋ ಏನೋ !?

ಈ ಕುರಿತು ಇತ್ತೀಚೆಗೆ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇಂಗ್ಲಿಷ್‌ ಅಕ್ಷರಮಾಲೆಯಲ್ಲಿ ಪಶ್ಚಿಮ ಬಂಗಾಳದ (ವೆಸ್ಟ್‌ ಬೆಂಗಾಲ್‌- ಡಬ್ಲ್ಯೂ) ಹೆಸರು w ಅಕ್ಷರದಿಂದ ಆರಂಭವಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಆಯೋಜಿಸುವ ಎಲ್ಲ ಯೋಜನೆ, ಕಾರ್ಯಕ್ರಮಗಳಲ್ಲಿ ರಾಜ್ಯ ಹೆಸರು ಕೊನೆಗೆ ಬರುತ್ತಿದೆ. ಆದ್ದರಿಂದ ಹೆಸರು ಬದಲಾವಣೆಗೆ ಚಿಂತಿಸಲಾಗಿದ್ದು, ಈ ಕುರಿತು ಪ್ರಾಥಮಿಕ ಸಭೆ ನಡೆಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ತಿಳಿಸಿದ್ದಾರೆ.

ಅಲ್ಲದೇ ಇದೊಂದು ಸೂಕ್ಷ್ಮ ವಿಷಯವಾದ್ದರಿಂದ ಎಲ್ಲ ಪಕ್ಷಗಳ ಅಭಿಪ್ರಾಯ ಕೇಳುವಂತೆ ಹಾಗೂ ಸೂಕ್ತ ಹೆಸರು ಶಿಫಾರಸು ಮಾಡುವಂತೆ ಕೋರಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

English summary
The West Bengal Cabinet has passed a resolution to change the name of the state. Since the name of West Bengal starts with the letter ‘W’ its turn comes at the end. Just to avoid it M'am Mamata Banerjee now wants to up lift her state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X