ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀ ರಾಮ ಸೇನೆ ನಿಗೂಢ ಶಸ್ತ್ರಾಸ್ತ್ರ ತರಬೇತಿ ಜಾರಿ

By Mahesh
|
Google Oneindia Kannada News

Pramod Mutalik
ಬೆಳಗಾವಿ, ಜು.7: ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ಇಲ್ಲಿನ ಆಶ್ರಮವೊಂದರಲ್ಲಿಗೌಪ್ಯವಾಗಿ ನಿವೃತ್ತ ಸೇನಾಧಿಕಾರಿಗಳಿಂದ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದಾರೆ. ಅಥಣಿಯ ನಂದಗಾವ ಗ್ರಾಮದ ಭೂ ಕೈಲಾಸ ಆಶ್ರಮವೊಂದರಲ್ಲಿ ಶ್ರೀರಾಮ ಸೇನೆಯ ನೂರಾರು ಕಾರ್ಯರ್ಕತರು ಹಲವು ದಿನಗಳಿಂದ ಕಠಿಣ ಅಭ್ಯಾಸ ನಿರತರಾಗಿದ್ದಾರೆ.

ಕಾರ್ಯಕರ್ತರಲ್ಲಿ ಹೋರಾಟದ ಮನೋವೃತ್ತಿಯನ್ನು ಬೆಳೆಸುವುದು ನನ್ನ ಉದ್ದೇಶ ಎಂದು ಪ್ರಮೋದ್ ಮುತಾಲಿಕೆ ಪ್ರತಿಕ್ರಿಯಿಸಿದ್ದಾರೆ. ಇದು ಭ್ರಷ್ಟಾಚರ ವಿರೋಧಿ ದಳವೋ ಅಥವಾ ಹಿಂದೂ ಆತ್ಮಾಹುತಿ ದಳವೋ ಇನ್ನೂ ಸ್ಪಷ್ಟವಾಗಿಲ್ಲ.

ಪೊಲೀಸರಿಗೆ ಗೊತ್ತಿಲ್ಲ:ರಾಜ್ಯದ 10 ಜಿಲ್ಲೆಗಳ ಸುಮಾರು 180 ಮಂದಿ ಶ್ರೀರಾಮಸೇನಾ ಕಾರ್ಯಕರ್ತರು ನಿವೃತ್ತ ಸೇನಾಧಿಕಾರಿಗಳಿಂದ ಸೇನಾ ಮಾದರಿಯ ಶಸ್ತ್ರಾಸ್ತ್ರ, ಕರಾಟೆ, ಕತ್ತಿವರಸೆಯ ತರಬೇತಿಗ ನೀಡಲಾಗುತ್ತಿದೆ. ಅಥಣಿಯಿಂದ ಸುಮಾರು 10 ಕಿ.ಮೀ ದೂರವಿರುವ ಭೂ ಕೈಲಾಸ ಆಶ್ರಮದ ಸುತ್ತಮುತ್ತ ಹೋಗದಂತೆ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ನಿರ್ಬಂಧ ಹೇರಲಾಗಿದೆ ಎಂಬ ವಿಷಯ ಹೊರಬಿದ್ದಿದೆ.

ಬೆಳಗಾವಿ ಜಿಲ್ಲಾಧಿಕಾರಿಗೆ ಹಾಗೂ ಪೊಲೀಸ್ ವರಿಷ್ಠರಿಗೆ ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದ್ದು, ಯಾರೂ ಕೂಡಾ ಈ ಆಶ್ರಮದ ಸುತ್ತಮುತ್ತ ಸುಳಿಯದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಕಾವಲಿದ್ದಾರೆ ಎನ್ನಲಾಗಿದೆ.

ರಾಜ್ಯದ ವಿವಿಧ ಕಡೆಗಳಲ್ಲಿ ನಡೆದಿರುವ ಗಲಭೆಗಳಿಗೆ ಪ್ರಚೋದನೆ ನೀಡಿರುವ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಪಿತೂರಿ ನಡೆಸಿರುವ ಆರೋಪಗಳನ್ನು ಎದುರಿಸುತ್ತಿರುವ ಪ್ರಮೋದ್ ಮುತಾಲಿಕ್, ತಾನು ತಮ್ಮ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವುದಾಗಿ ಈ ಹಿಂದೆಯೇ ಹೇಳಿದ್ದರು.700 ಜನರ ಆತ್ಮಾಹುತಿ ದಳ ಸಿದ್ಧವಾಗಲಿದೆ ನಂತರ ಇದರ ಸಂಖ್ಯೆ 5 ಸಾವಿರಕ್ಕೆ ಏರಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಸಭೆಯಲ್ಲಿ ಬಹಿರಂಗವಾಗಿ ಮುತಾಲಿಕ್ ಘೋಷಿಸಿದ್ದರು.

English summary
Sri Ram Sene chief Pramod Mutalik is secretly building Anti Terrorism Army or Hindu Suicide Squads in Athani. Hindu activists in hundereds of number are getting trained by a retd army men says sources. Earlier He opened said in Hindu Janajagruthi samiti that he will 700 suicide bombers being trained
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X