• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ರಿವಾಲ್ವರ್ ಪ್ರಸಂಗಕ್ಕೆ ಮಾಯಾವತಿ ನೇರ ಹೊಣೆ

By Mahesh
|

ನವದೆಹಲಿ/ಅಲಿಘಡ ಜು 7: ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ರಕ್ಷಣಾ ಪಡೆ ದಾಟಿ ರಿವಾಲ್ವರ್ ಹಿಡಿದು ಹತ್ತಿರಕ್ಕೆ ಬರುತಿದ್ದ ಯುವಕನೊಬ್ಬನನ್ನು ಬಂಧಿಸಲಾಗಿದೆ. ರಾಹುಲ್ ಸಮೀಪಕ್ಕೆ ಹೋಗಿದ್ದಾನೆ ಎಂದರೆ ಉತ್ತರ ಪ್ರದೇಶದಲ್ಲಿ ಯಾವ ಮಟ್ಟದಲ್ಲಿ ಎಂದು ಊಹಿಸಬಹುದು. ಈ ಸುರಕ್ಷತಾ ಲೋಪಕ್ಕೆ ಮಾಯಾವತಿ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕೇಂದ್ರ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.

ಅಲಿಘಡದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಕಾರ್ಯಕ್ರಮದ ಬಗ್ಗೆ ಮೊದಲೆ ಸರ್ಕಾರಕ್ಕೆ ತಿಳಿಸಲಾಗಿದೆ. ಆದರೆ, ಈ ರೀತಿ ಭದ್ರತೆಯಲ್ಲಿ ಲೋಪ ಕಂಡು ಬಂದಿರುವುದು ಅಕ್ಷಮ್ಯ. ಸರ್ಕಾರ ಸರಿಯಾದ ಕ್ರಮ ಕೂಡಲೇ ಕೈಗೊಳ್ಳಬೇಕು. ರಾಹುಲ್ ವಿಷಯದಲ್ಲಿ ಇಂಥ ಉದಾಸೀನತೆ ಸಲ್ಲದು ಎಂದು ಅಂಬಿಕಾ ಸೋನಿ ಹೇಳಿದ್ದಾರೆ.

ಯುವಕನೊಬ್ಬ 0.32 ರಿವಾಲ್ವರ್ ಹಿಡಿದುಕೊಂಡು ರಾಹುಲ್ ಗಾಂಧಿ ಭದ್ರತಾವಲಯದ ಎರಡನೇ ಸರಪಳಿ ದಾಟಿ ಮುಂದುವರೆಯುವಾಗ ಆತನನ್ನು ವಿಶೇಷ ರಕ್ಷಣಾ ಪಡೆ(SPG)ಯವರು ಬಂಧಿಸಿದ್ದಾರೆ. ಸದ್ಯ ಉತ್ತರ ಪ್ರದೇಶ ಪೊಲೀಸರ ವಶದಲ್ಲಿರುವ ಯುವಕ ಟಪ್ಪಾಲ್ ಗ್ರಾಮದವನಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಎಂದು ತಿಳಿದು ಬಂದಿದೆ.

ಭೂ ಸ್ವಾಧೀನ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ಪಾದಯಾತ್ರೆ, ಕಿಸಾನ್ ಮಹಾಪಂಚಾಯತ್ ನಡೆಸುತ್ತಾ ಉತ್ತರ ಪ್ರದೇಶ ಸರ್ಕಾರ ವಿರುದ್ಧ ರಾಹುಲ್ ಗಾಂಧಿ ತಿರುಗಿಬಿದ್ದಿದ್ದಾರೆ.ಉತ್ತರ ಪ್ರದೇಶ ದಲ್ಲಾಳಿಗಳಿಂದ ನಡೆಯುವ ರಾಜ್ಯವಾಗಿದೆ. ಇಲ್ಲಿ ಬಡವರು, ರೈತರ ಜೀವಕ್ಕೆ ಬೆಲೆ ಇಲ್ಲದ್ದಂತಾಗಿದೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

English summary
Union Minister Ambika Soni today sought "proper" security for Rahul Gandhi after a youth carrying a revolver was detained while trying to move close to the Congress leader during his padayatra in Uttar Pradesh. Later Rahul in his speech said Uttar Pradesh is run by 'dalals'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more