ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಾ ಮಾತಲ್ಲೂ ಅರ್ಥ ಇದೆ, ಬೆಂಕಿ ಇಲ್ಲದೆ ಹೊಗೆ ಆಡಲ್ಲ!

By Mahesh
|
Google Oneindia Kannada News

Saina Nehwal
ಹೈದರಾಬಾದ್ ಜು.7: ಭಾರತದ ಅನೇಕ ಅಥ್ಲೆಟ್‌ಗಳು ಹಾಗೂ ವೈಟ್ ಲಿಫ್ಟರ್ ಗಳು ಗೊತ್ತಿದ್ದೂ ನಿಷೇಧಿತ ಉದ್ದೀಪನಾ ಮದ್ದನ್ನು ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ನನಗೆ ಹೇಳಿದ್ದರು ಎಂದು ಬಾಂಬ್ ಸಿಡಿಸಿದ ಬ್ಯಾಡ್ಮಿಂಟನ್ ತಾರೆ ಸೈನಾ ಮಾತಲ್ಲೂ ಅರ್ಥವಿದೆ. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಅಪರಾಧ ಮುಚ್ಚಿ ಹಾಕಿಕೊಳ್ಳಲು ಅಜ್ಞಾನದ ಪರದೆ ಎಳೆಯಲು ಬರುವುದಿಲ್ಲ.

ನಮ್ಮ ದೇಶದ ಅಥ್ಲೀಟ್ ಗಳು ನಿಷೇಧಿತ ಡ್ರಗ್ಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಲು ಮೆಡಿಸಿನ್ ಬಗ್ಗೆ ಅವರಿಗಿರುವ ಅಜ್ಞಾನವೇ ಕಾರಣ. ಏನು ತೆಗೆದು ಕೊಳ್ಳಬೇಕೆಂದು ಅವರಿಗೆ ಗೊತ್ತಿರುವುದಿಲ್ಲ. ಪ್ರತಿಯೊಬ್ಬರಿಗೂ ವಾಡಾದ ನಿಯಮದ ಅರಿವಿರಬೇಕು. ವೆಬ್‌ಸೈಟ್ ನಲ್ಲಿ ಯಾವ ಮದ್ದನ್ನು ತೆಗೆದುಕೊಳ್ಳಬೇಕು ಹಾಗೂ ಬೇಡ ಎನ್ನುವ ಕುರಿತು ವಿವರ ನೀಡಲಾಗಿದೆ. [ವಿಡಿಯೋ ನೋಡಿ]

ಅಜ್ಞಾನವೇ ಕಾರಣವೇ?:ಹೆಚ್ಚಿನ ಅಥ್ಲೆಟ್‌ಗಳು ಹಾಗೂ ವೈಟ್ ಲಿಫ್ಟರ್ ಗಳು ಸುಶಿಕ್ಷಿತರು ಆಗಿರುವುದಿಲ್ಲ. ಅವರು ಕೋಚ್ ಹೇಳಿದ ಔಷಧವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಇದರಲ್ಲಿ ಕೋಚ್ ಜವಾಬ್ದಾರಿಯೂ ಸೇರಿದೆ. ನನಗೆ ಸಣ್ಣ ಜ್ವರ ದ ಉಳಿಗೆ ನುಂಗಬೇಕಾದರೂ ವೈದ್ಯರ ಸಲಹೆ ಮೇರೆಗೆ ಗುಳಿಗೆಯಲ್ಲಿರುವ ಪದಾರ್ಥದ ಬಗ್ಗೆ ವಿವರ ಪಡೆದು ನಂತರ ಸೇವಿಸುವೆ ಎಂದು ಸೈನಾ ಹೇಳಿದ್ದಾರೆ.

ಆಕೆ ಹೇಳುವುದೇನೋ ಸರಿ ಆದರೆ, ವಾಡಾ ವೆಬ್ ಸೈಟ್ ನಲ್ಲಿ ನಿಷೇಧಿತ ಡ್ರಗ್ಸ್ ಪಟ್ಟಿ ಹೈದರಾಬಾದಿನಿಂದ ಬೆಂಗಳೂರು ತನಕ ಇದೆ ಅಷ್ಟನ್ನೂ ಯಾರು ನೆನಪಲ್ಲಿ ಇಟ್ಟುಕೊಳ್ಳುತ್ತಾರೆ. ಚಿನ್ನದ ಪದಕ ಗೆಲ್ಲುವ ಗುರಿ ಇಟ್ಟುಕೊಳ್ಳುವ ಕ್ರೀಡಾಪಟುಗಳ ಆಹಾರ, ಔಷಧಿ ವಿಷಯದ ಹೊಣೆ ತರಬೇತುದಾರರದ್ದೇ ಅಲ್ಲವೇ?

English summary
Indian weightlifters and athletes do consume banned drugs and it is common thing,but they do it knowingly says India's ace shuttler Saina Nehwal. Every sportsperson is aware of WADA rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X