ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಪಾಲಿಕೆ ಕಚೇರಿ ಮುಂದೆ ವಾಮಾಚಾರ

By Chidambar Baikampady
|
Google Oneindia Kannada News

Withcraft at MCC office Mangalore
ಮಂಗಳೂರು, ಜು. 5 : ಬೆಂಗಳೂರು ವಿಧಾನಸೌಧದ ಮುಂದೆ ವಾಮಾಚಾರ ಮಾಡಿದ್ದುದು ಹಳೆ ಸುದ್ದಿ. ಇದೀಗ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂದೆ ಅದೂ ಮೇಯರ್ ಕಾರು ನಿಲ್ಲುವ ಜಾಗದಲ್ಲಿ ವಾಮಾಚಾರ ಮಾಡಿರುವ ಘಟನೆ ವರದಿಯಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಇದೀಗ ಬಿಜೆಪಿ ವಶದಲ್ಲಿದೆ. ಕಾಂಗ್ರೆಸ್ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿದೆ. ವಾಮಾಚಾರ ಮಾಡಿರುವುದು ಯಾವ ಉದ್ದೇಶಕ್ಕಾಗಿ ಎನ್ನುವುದು ಮಾತ್ರ ನಿಗೂಢ.

ಬೂದುಕುಂಬಳಕಾಯಿ, ಕುಂಕುಮ, ತೆಂಗಿನಕಾಯಿ ಈ ಸ್ಥಳದಲ್ಲಿ ಕಂಡುಬಂದಿದ್ದು ರಾತ್ರಿ ಪಾಳಿಯ ಕಾವಲುಗಾರನ ಕಣ್ಣುತಪ್ಪಿಸಿ ಈ ವಾಮಾಚಾರ ಮಾಡಲಾಗಿದೆ. ಪಾಲಿಕೆಯ ಮುಖ್ಯದ್ವಾರದ ಮುಂಭಾಗದಲ್ಲಿಯೇ ಮೇಯರ್ ಕಾರು ನಿಲ್ಲುತ್ತದೆ. ಅದೇ ಸ್ಥಳದಲ್ಲಿ ವಾಮಾಚಾರದ ಕುರುಹುಗಳು ಕಂಡುಬಂದಿವೆ.

ಬೀದಿ ಬದಿಯ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ಪಾಲಿಕೆ ಮುಂದಾದಾಗ ಕಾಂಗ್ರೆಸ್ ಮತ್ತು ಎಡಪಕ್ಷಗಳು ವಿರೋಧಿಸಿದ್ದವು. ಕಳೆದ ವಾರ ನಡೆದ ಪಾಲಿಕೆ ಮಾಸಿಕ ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವ ನಿರ್ಧಾರದ ವಿರುದ್ದ ಕಾಂಗ್ರೆಸ್ ಸಭಾತ್ಯಾಗ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಾಮಾಚಾರ ಮಾಡಿರಬಹುದೇ ಎನ್ನುವುದು ಪಾಲಿಕೆ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತುಗಳು. ಇದನ್ನು ನಂಬುತ್ತೀರಾ ನಂಬಿ, ನಕ್ಕು ಸುಮ್ಮನಾಗುವಿರಾದರೂ ಸರಿ ಹಾಗೇ ಮಾಡಿ.

English summary
Witchcraft has been performed in front of Mangalore mayor's office. District admn was trying to evict the road side vendors in Mangalore. Witchcraft could be an attempt to frighten the administrators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X