ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡ್ರ ಕುಟುಂಬ ಆಸ್ತಿ ಸದ್ಯದಲ್ಲೇ ಸರಕಾರದ ವಶಕ್ಕೆ: 'ಬಿಜೆಪಿ'

By Srinath
|
Google Oneindia Kannada News

bj puttaswamy
ಬೆಂಗಳೂರು ಜು 6: ದೇವೇಗೌಡರ ಕುಟುಂಬದ ಅಕ್ರಮಗಳ ಬಗ್ಗೆ ಈಗ ನಡೆಯುತ್ತಿರುವ ತನಿಖೆ ಅವರ ಕುತ್ತಿಗೆಗೆ ಬರಲಾರಂಭಿಸಿದೆ. ಸದ್ಯ ಇದರಿಂದ ಪಾರಾಗಲು ಸಿಬಿಐ ತನಿಖೆಯ ನೆಪವೊಡ್ಡಿ ತನಿಖೆ ವಿಳಂಬವಾಗುವಂತೆ ಮಾಡುವುದು ಅವರ ಉದ್ದೇಶ. ಇವರು ಮಾಡಿರುವ ಅಕ್ರಮ ಆಸ್ತಿಪಾಸ್ತಿಗಳು ಸರಕಾರದ ವಶಕ್ಕೆ ಬರುವ ಕಾಲ ಸನ್ನಿಹಿತವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ ಜೆ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ರೇವಣ್ಣ ಸೇರಿದಂತೆ ಎಲ್ಲರ ವಿರುದ್ದ ಅಕ್ರಮ ವ್ಯವಹಾರಗಳ ಬಗ್ಗೆ ಉನ್ನತಾಧಿಕಾರಿಗಳ ಮಟ್ಟದಲ್ಲಿ ತನಿಖೆ ಪ್ರಕ್ರಿಯೆ ನಡೆಯುತ್ತಿದೆ. ತನಿಖೆ ನಡೆದಿಲ್ಲ ಎನ್ನುವ ಕುಮಾರಸ್ವಾಮಿ ಹೇಳಿಕೆಯಲ್ಲಿ ಹುರುಳಿಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ಎಲ್ಲಾ ಹಗರಣಗಳ ಬಗ್ಗೆ ವಿವಿಧ ಹಂತದ ತನಿಖೆ ಪ್ರಗತಿಯಲ್ಲಿದೆ ಎಂದು ಪುಟ್ಟಸ್ವಾಮಿ ಹೇಳಿಕೆ ನೀಡಿದ್ದಾರೆ.

ಸರಕಾರೀ ಮಟ್ಟದಲ್ಲಿ ನಡೆಯುತ್ತಿರುವ ತನಿಖೆಗಳ ಬಗ್ಗೆ ದಾಖಲೆ ಸಮೇತ ಮಾತನಾಡಿದ ಪುಟ್ಟಸ್ವಾಮಿ, ರಾಮನಗರ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ತಮ್ಮ ಆಸ್ತಿಪಾಸ್ತಿಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ನೀಡಿದ ಕುಮಾರಸ್ವಾಮಿ ವಿರುದ್ದ ಈಗಾಗಲೇ ರಾಮನಗರ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ವಿಚಾರಣೆ ಇದೆ ತಿಂಗಳ 17ರಂದು ಅಂತಿಮಗೊಳ್ಳಲಿದೆ. ಸುಳ್ಳು ಪ್ರಮಾಣಪತ್ರ ನೀಡಿರುವುದು ರುಜುವಾತಾದರೆ ಅವರು ಸಂಸದ ಸ್ಥಾನದಿಂದ ಅನರ್ಹ ಗೊಳ್ಳಲಿದ್ದಾರೆಂದು ಎನ್ನುವ ಸತ್ಯ ಕುಮಾರಸ್ವಾಮಿಗೆ ಅವರಿಗೆ ತಿಳಿದಿರಲಿ ಎಂದು ಎಚ್ಚರಿಸಿದರು.

English summary
After hurling charges of amassing wealth against H D Deve Gowda family, the BJP on Tuesday (July 5) declared that there was no need to order a CBI probe into the charges as certain agencies and departments were already probing the cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X