ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಪ್ಲಸ್ ಎಂಟ್ರಿಗೆ ಕ್ಲಿಕ್ ಮಾಡಿದ್ರೆ ವಯಾಗ್ರ ದರ್ಶನ

By Mahesh
|
Google Oneindia Kannada News

Google Plus invite virus by Canada hackers
ಬೆಂಗಳೂರು ಜು 6: ಎಗ್ಗಿಲ್ಲದ್ದಂತೆ ಮುನ್ನುಗ್ಗುತ್ತಿರುವ ಗೂಗಲ್ ಪ್ಲಸ್ ಜನಪ್ರಿಯತೆಯನ್ನು ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ನಡೆದಿದೆ. ಒಂದೆಡೆ ಫೇಸ್ ಬುಕ್ ವಿಡಿಯೋ ಚಾಟಿಂಗ್ ಸೇರಿದಂತೆ ಹೊಸ ಹೊಸ ಸೌಲಭ್ಯ ನೀಡುತ್ತಾ ಸ್ಪರ್ಧೆ ಒಡ್ಡುತ್ತಿದೆ. ಇನ್ನೊಂದೆಡೆ ಹ್ಯಾಕರ್ಸ್ ಗಳ ಕಾಟ. ನಕಲಿ ಗೂಗಲ್ ಪ್ಲಸ್ ಆಹ್ವಾನ ಇಮೇಲ್ ಸೃಷ್ಟಿಸಿ ಸುಮ್ಮನೆ ಎಲ್ಲರಿಗೂ ಹಂಚಿ ಮಜಾ ತೆಗೆದುಕೊಳ್ಳುತ್ತಿದ್ದಾರೆ ಕೆನಡಾ ಅತಿಕ್ರಮಿಗಳ ಗುಂಪು ಪರ್ಟ್ ನೆರ್ಕ.

ಅಹ್ವಾನವಿಲ್ಲದೆ ಗೂಗಲ್ ಪ್ಲಸ್(ಬೀಟಾ ಆವೃತ್ತಿ)ಗೆ ಪ್ರವೇಶವಿಲ್ಲ ಎಂಬ ಪರಿಸ್ಥಿತಿಯ ಲಾಭ ಪಡೆದು, ನಕಲಿ ಇಮೇಲ್ ಗಳನ್ನು ಸೃಷ್ಟಿಸಿ ಗೂಗಲ್ ಪ್ಲಸ್ ಬಳಕೆದಾರರಿಂದ ಎಲ್ಲರಿಗೂ ಅಹ್ವಾನವನ್ನು ಹ್ಯಾಕರ್ಸ್ ಗಳು ಹಂಚುತ್ತಿದ್ದಾರೆ.

ಅಬ್ಬಾ ಅಂತೂ ಗೂಗಲ್ ಪ್ಲಸ್ ಗೆ ಕೀಲಿ ಕೈ ಸಿಕ್ಕಿತು ಎಂದು ಡೋರ್ ಓಪನ್ ಮಾಡಿದರೆ ಸೀದಾ ಕೆನಡಾದ ಫಾರ್ಮಸ್ಯೂಟಿಕಲ್ಸ್ ವೆಬ್ ತಾಣಕ್ಕೆ ಹೋಗುತ್ತದೆ. ಗೂಗಲ್ ಪ್ಲಸ್ ಗೆಳೆಯರನ್ನು ನೋಡಬಯಸಿದವರಿಗೆ ವಯಾಗ್ರಾಸಿಯಾಲಿಸ್ ಹಾಗೂ ಲೆವಿಟ್ರಾ ಮುಂತಾದ ಕಾಮೋತ್ತೇಜಕ ಮಾತ್ರೆಗಳ ದರ್ಶನವಾಗುತ್ತಿದೆ.

ಅಂತರ್ಜಾಲ ಸುರಕ್ಷಿತಾ ಸಂಸ್ಥೆ ಸೊಫೊಸ್, ಈ ಬಗ್ಗೆ ಗಮನಹರಿಸಿದ್ದು, ಇದು ಸಾಧಾರಣ ಸ್ಪಾಮ್ ಸಂದೇಶ ಅಷ್ಟೇ. ಹ್ಯಾಕರ್ಸ್ ಗಳು ಇನ್ನೂ ಎಳಸುಗಳು, ಈ ರೀತಿ ವೆಬ್ ಸೈಟ್ ರೀಡೈರೆಕ್ಟ್ ಮಾಡುವ ತಂತ್ರ, ಅಕಸ್ಮಾತ್ ಯಾರಾದರೂ ಇವರ ತಂತ್ರಕ್ಕೆ ಸಿಕ್ಕಿಕೊಂಡರೂ ತೊಂದರೆ ಏನಿಲ್ಲ.

ಈ ಹ್ಯಾಕರ್ಸ್ ಗಳು ಬಳಕೆದಾರರ ಖಾಸಗಿ ವಿವರ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಆದರೂ ಗೂಗಲ್ ಈಗ ಯಾವುದೆ ಹೊಸ ಆಹ್ವಾನಗಳನ್ನು ಕಳಿಸುತ್ತಿಲ್ಲ. ಗೂಗಲ್ ಪ್ಲಸ್ ಆಂಡ್ರ್ಯಾಡ್ ಅಪ್ಲಿಕೇಷನ್ ಆಗಲಿ ಸೃಷ್ಟಿಯಾಗಿಲ್ಲ. ಹಾಗಾಗಿ ಎಚ್ಚರಿಕೆಯಿಂದ ಇಮೇಲ್ ಗೆ ಪ್ರತಿಕ್ರಿಯಿಸಿ ಎಂದಿದೆ.

English summary
Google +, the search giant’s new social network, has become the victim of a hacking group sending out bogus invites to the service, which instead directs users to a pharmaceutical website, says security firm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X