ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ದಿಢೀರ್ ಬ್ರಿಟನ್ ಪ್ರವಾಸ ಹಾಗೂ ಟೆನ್ನಿಸ್ ಪ್ರೇಮ

By Mahesh
|
Google Oneindia Kannada News

SM Krishna pays for Tennis tour
ನವದೆಹಲಿ, ಜು. 5: ವಿಂಬಲ್ಡನ್ ಪಂದ್ಯಗಳನ್ನು ವೀಕ್ಷಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಎಂ ಕೃಷ್ಣ ಅವರು ದಿಢೀರ್ ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ. ನಿಗದಿತ ದಿನಕ್ಕಿಂತ ಹೆಚ್ಚಿನ ದಿನ ಅಲ್ಲೇ ಉಳಿದು ಸರ್ಕಾರಿ ಹಣ ಪೋಲು ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಆದರೆ, ಈ ಆರೋಪಗಳನ್ನು ಕೃಷ್ಣ ಅಲ್ಲಗೆಳೆದಿದ್ದಾರೆ.

ಬ್ರಿಟಿಶ್ ವಿದೇಶ ಕಾರ್ಯದರ್ಶಿ ವಿಲಿಯಂ ಹೇಗ್ ಜೊತೆ ಅಧಿಕೃತ ಭೇಟಿ ಮುಗಿದ ಬಳಿಕವೂ ಸಚಿವರು ತೆರಿಗೆದಾರರ ಹಣದಲ್ಲೇ ಹೆಚ್ಚುವರಿಯಾಗಿ ಮೂರು ದಿನಗಳ ಕಾಲ ಬ್ರಿಟನ್‌ನಲ್ಲಿ ತಂಗಿದ್ದು, ವಿಂಬಲ್ಡನ್ ಪಂದ್ಯಗಳನ್ನು ವೀಕ್ಷಿಸಿದ್ದರು ಎಂದು ಎಂದು ಆರೋಪಗಳು ಕೇಳಿ ಬಂದಿವೆ.

ಕೃಷ್ಣ ತನ್ನ ಜುಲೈ 1 ರಂದು ನೊವಾಕ್ ಜೊಕೊವಿಕ್ ಮತ್ತು ಜೋ ವಿಲ್ಫ್ರೆಡ್ ಸೋಂಗ ನಡುವೆ ನಡೆದ ವಿಂಬಲ್ಡನ್ ಪುರುಷರ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಿದ್ದರು. ತನ್ನ ಅಧಿಕೃತ ಪ್ರವಾಸವನ್ನು ಮುಂದುವರಿಸಲು ಪ್ರಧಾನಿ ಕಚೇರಿ ಕೃಷ್ಣರಿಗೆ ಅನುಮತಿ ನೀಡಿತ್ತು. ಹೆಚ್ಚುವರಿ ದಿನ ತಂಗಿದ್ದ ಖರ್ಚು ವೆಚ್ಚವನ್ನು ತಾವೇ ಭರಿಸಿರುವುದಾಗಿ ಕೃಷ್ಣ ಹೇಳಿದ್ದಾರೆ.

ಇದು ಏಕೆ?: ಮಿತವ್ಯಯ ಅಭಿಯಾನದ ಅಂಗವಾಗಿ ವಿದೇಶ ಪ್ರವಾಸಗಳನ್ನು ಕಡಿತಗೊಳಿಸಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಇತ್ತೀಚೆಗೆ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗರಿಕ ವಾಯುಯಾನ ಸಚಿವ ವಯಲಾರ್ ರವಿ ಸೇರಿದಂತೆ ಹಲವು ಸಚಿವರ ಪ್ರವಾಸ ರದ್ದುಪಡಿಸಲಾಗಿತ್ತು. ಆದರೆ, ಎಸ್ ಎಂ ಕೃಷ್ಣರ ಪ್ರವಾಸಕ್ಕೆ ಯಾಕೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಎದ್ದಿದೆ.

ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವಾಲಯದ ವಿಭಾಗವೊಂದು ಎಸ್ ಎಂ ಕೃಷ್ಣ ವಿರುದ್ಧ ಪಿತೂರಿ ಹೂಡಿದೆ ಹಾಗೂ ಅವರನ್ನು ಹೊರಗಟ್ಟಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿಯೂ ಹೊರಬಿದ್ದಿದೆ.

English summary
The External Affairs Minister SM Krishna on Friday (July 1) watched the Jokovic-Tsonga semifinal at Wimbledon, while he was in London on a five-day official visit. Krishna is facing allegation on his overstay on taxpayer expense. Ahead of the cabinet reshuffle, Krishna is targeted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X