ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಲಂ ಅಚ್ಯುತರಾವ್ ರಾಜ್ಯದ ಹೊಸ ಡಿಜಿ ಐಜಿಪಿ

By Mahesh
|
Google Oneindia Kannada News

Neelam Achuta Rao new DG IGP
ಬೆಂಗಳೂರು ಜು 5: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಅವರ ನಿವೃತ್ತಿ ನಂತರ ಅವರ ಸ್ಥಾನಕ್ಕೆ ನಡೆದಿದ್ದ ತ್ರಿಕೋನ ಸ್ಪರ್ಧೆಯಲ್ಲಿ ನೀಲಂ ಅಚ್ಯುತರಾವ್ ವಿಜಯಿಯಾಗಿದ್ದಾರೆ.ಡಿಜಿ ಐಜಿ ಸ್ಥಾನಕ್ಕೆ ಐಪಿಎಸ್ ಅಧಿಕಾರಿಗಳಾದ ಎಸ್.ಟಿ.ರಮೇಶ್, ಡಾ.ಡಿ.ವಿ.ಗುರುಪ್ರಸಾದ್ (ಸಿಐಡಿ ಹಾಲಿ ಮಹಾನಿರ್ದೇಶಕ) ಸಹ ಆಕಾಂಕ್ಷಿಗಳಾಗಿದ್ದರು.

ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಅಪರಾಧ) ಹುದ್ದೆಯಲ್ಲಿದ್ದ ನೀಲಂ ಅಚ್ಯುತರಾವ್‌ ಅವರಿಗೆ ಮುಂಬಡ್ತಿ ಪಡೆದು ಸಿಐಡಿ ಡಿಜಿಪಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಪ್ರಥಮ ಬಾರಿಗೆ ಹಂಗಾಮಿಯಾಗಿ ಹೊಸ ಡಿಜಿಪಿಯಾಗಿ ಎಸ್ ಟಿ ರಮೇಶ್ ಅವರನ್ನು ಫೆ 1 ರಂದು ನೇಮಿಸಿ ರಾಜ್ಯ ಗೃಹ ಸಚಿವ ಆರ್ ಅಶೋಕ್ ಆದೇಶ ಹೊರಡಿಸಿದ್ದರು.

ಕೊನೆಗೆ ರಾಜ್ಯ ಮಹಾ ನಿರ್ದೇಶಕರ ಶ್ರೇಣಿಯಲಿರುವ ಹಿರಿಯ ಐಪಿಎಸ್ ಅಧಿಕಾರಿಗಳಾದ ಎಸ್.ಟಿ.ರಮೇಶ್, ಡಾ.ಡಿ.ವಿ.ಗುರುಪ್ರಸಾದ್ ( ಸಿಐಡಿ ಹಾಲಿ ಮಹಾನಿರ್ದೇಶಕ), ಎನ್.ಅಚ್ಯುತರಾವ್ ಅವರಲ್ಲಿ ಒಬ್ಬರಿಗೆ ಸ್ಥಾನ ನೀಡಲು ನಿರ್ಧರಿಸಿದ ಸರ್ಕಾರ, ನೀಲಂ ಅಚ್ಯುತರಾವ್ ಅವರನ್ನು ಆಯ್ಕೆ ಮಾಡಿದೆ.

ಸಿಎಟಿ ತಡೆಯಾಜ್ಞೆ: ಪೊಲೀಸ್ ಮಹಾನಿರ್ದೇಶಕರ ಸ್ಥಾನಕ್ಕೆ ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನು ಪರಿಗಣಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಸಿಎಟಿ (ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ) ಮನವಿ ಮಾಡಿದ್ದರು. ಇದರಿಂದ ಡಿಜಿಪಿ ನೇಮಕಾತಿ ವಿಳಂಬವಾಗಿತ್ತು. [ಈ ದಿನದ ಎಲ್ಲಾ ಲೇಖನಗಳು]

English summary
Neelam Achutarao, IPS is new Karnataka Director General and Inspector General of Police (DG&IGP), DG & IGP in-charge S T Ramesh and DGP DV Guruprasad were in the race. Karnataka government made this announced today(Jul 5)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X