ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಕಳ ಕಸಾಯಿಖಾನೆಗೆ ಗೋ ಸಾಗಾಟ ಪತ್ತೆ

By Srinath
|
Google Oneindia Kannada News

cows
ಕಾರ್ಕಳ (ಉಡುಪಿ ಜಿಲ್ಲೆ), ಜುಲೈ 5: ಶನಿವಾರ ರಾತ್ರಿ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಗೋಸಾಗಾಟ ಪ್ರಕರಣ ಪತ್ತೆಯಾಗಿದೆ. ಆರೋಪಿಗಳು ಟೆಂಪೋವನ್ನು ಬಿಟ್ಟು ಪರಾರಿಯಾಗಿದ್ದು ಅದರಲ್ಲಿ 9 ಜಾನುವಾರುಗಳನ್ನು ಅಮಾನವೀಯ ರೀತಿಯಲ್ಲಿ ಕಟ್ಟಿಹಾಕಿ, ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿತ್ತೆಂದು ತಿಳಿದುಬಂದಿದೆ.

ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ದಿನೇಶ್ ಪೂಜಾರಿ ಎಂಬಾತ ಈ ಜಾನುವಾರುಗಳನ್ನು ಪರಾರಿಯಾದ ಆರೋಪಿಗಳಿಗೆ ಮಾರಾಟ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್ ಮತ್ತು ಕ್ರೈಂ ವಿಭಾಗದ ಎಸೈ ರವಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇಶ್, ಸುರೇಶ್ ಶೆಟ್ಟಿ, ಸುರೇಂದ್ರ, ರಾಘವೇಂದ್ರ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೆಎ-19 ಎ 6151 ನೋಂದಣಿ ಸಂಖ್ಯೆಯ ಗೂಡ್ಸ್ ಟೆಂಪೊ ಅತೀ ವೇಗವಾಗಿ ಬರುತ್ತಿರುವುದನ್ನು ಕಂಡು ರಾತ್ರಿ ಗಸ್ತುವಿನಲ್ಲಿದ್ದ ಪೊಲೀಸರು ಅದನ್ನು ನಿಲ್ಲಿಸುವಂತೆ ಸೂಚಿಸಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನದ ಮಾಲಕ ಪಡುಬಿದ್ರಿಯ ಸುಲೈಮಾನ್ ಎಂದು ತಿಳಿದುಬಂದಿದೆ.

English summary
Illegal movement of cattle alleged for slaughter was found near Karkala, Udupi district on Saturday night (July 2). 9 cattles are rescued and a goods tempo was recovered. But no arrests were made.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X