ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾ.ದಿನಕರನ್ ಪ್ರಕರಣ: ಸುಪ್ರೀಂ ವಾಗ್ದಂಡನೆಗೆ ಅನುಮತಿ

By Srinath
|
Google Oneindia Kannada News

Justice PD Dinakaran
ನವದೆಹಲಿ, ಜುಲೈ 5: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿಕ್ಕಿಂ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಪಿಡಿ ದಿನಕರನ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಸುಪ್ರೀಂಕೋರ್ಟ್ ಮಂಗಳವಾರ ಅನುಮತಿಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ತಮ್ಮ ವಿರುದ್ಧ ಜರುಗಿಸುತ್ತಿರುವ ದೋಷಾರೋಪ ಪ್ರಕ್ರಿಯೆಯನ್ನು ಕೈಬಿಡುವಂತೆ ಸೂಚಿಸಬೇಕು ಎಂದು ದಿನಕರನ್ ಕೋರ್ಟಿಗೆ ಅಲವತ್ತುಕೊಂಡಿದ್ದರು.

ತಮ್ಮ ವಿರುದ್ಧದ ಆರೋಪಗಳ ತನಿಖೆಗೆ ರಚಿನೆಗೊಂಡಿದ್ದ ಸಮಿತಿ ಪಕ್ಷಪಾತವೆಸಗುತ್ತಿದೆ. ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದ ದಿನಕರನ್ ಕೋರಿದ್ದರು. ಏಪ್ರಿಲ್ 29ರಂದು ತಡೆಯಾಜ್ಞೆ ನೀಡಿತ್ತು.

ಸರಕಾರ ಮತ್ತು ರಾಜ್ಯಸಭೆಯಿಂದ ನೇಮಕವಾಗಿದ್ದ ಸಮಿತಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಸಿ.ಕೆ. ಪ್ರಸಾದ್ ಅವರ ನ್ಯಾಯಪೀಠ ತಡೆಯಾಜ್ಞೆಯನ್ನು ತೆರವುಗೊಳಿಸಿ, ವಾಗ್ದಂಡನೆಗೆ ಅನುಮತಿ ನೀಡಿತು.

English summary
Chief Justice PD Dinakaran's petition challenging impeachment rejected. Impeach Dinakaran tells Supreme Court on July 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X