ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಸ್ವಾತಂತ್ರ್ಯ ದಿನದಂದೇ ಒಬಾಮ ಗುಂಡಿಗೆ ಬಲಿ!

By Srinath
|
Google Oneindia Kannada News

President Barack Obama
ವಾಷಿಂಗ್ಟನ್, ಜುಲೈ 5: ಅಮೆರಿಕಕ್ಕೆ ಜುಲೈ 4ರಂದು ತನ್ನ 235ನೇ ಸ್ವಾತಂತ್ರ್ಯೋತ್ಸವ. 'ಆದರೆ ಈಗಷ್ಟೇ ಬಂದ ಸುದ್ದಿಯೊಂದಿದೆ ಕೇಳಿ. ಅಮೆರಿಕದ ರಾಷ್ಟ್ರೀಯ ದಿನವಾದ ಜುಲೈ 4ರಂದು ಅಧ್ಯಕ್ಷ ಬರಾಕ್ ಒಬಾಮ ಗುಂಡೇಟಿಗೆ ಬಲಿಯಾಗಿದ್ದಾರೆ. ಇದೊಂದು ದುರ್ದಿನ' - ಹೀಗೆಂದು ದೇಶದ ಅತ್ಯಂತ ಜನಪ್ರಿಯ ಸುದ್ದಿ ಸಂಸ್ಥೆ 'ಫಾಕ್ಸ್ ನ್ಯೂಸ್' ಫೇಕ್ ನ್ಯೂಸ್ ಅನ್ನು ಪ್ರಕಟಿಸುವ ಅಚಾತುರ್ಯ ಎಸಗಿದೆ.

'ಫಾಕ್ಸ್ ನ್ಯೂಸ್'ಗೆ ಸೇರಿದ ಟ್ವಿಟರ್ ಗೆ ಕನ್ನ ಹಾಕಿದವರು (ಹ್ಯಾಕ್) ಇಂತಹದ್ದೊಂದು ಕುಚೋದ್ಯ ಮಾಡಿದ್ದಾರೆ. 'ಈ ಕೃತ್ಯ ಎಸಗಿದ್ದು ತಾವು ಎಂದು ದಿ ಸ್ಕ್ರಿಪ್ಟ್ ಕಿಡ್ಡೀಸ್ ಎಂಬ ಗುಂಪು ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ' ಎಂದು ಬಿಬಿಸಿ ಸುದ್ದಿ ಸಂಸ್ಥೆ ಪ್ರಕಟಿಸಿದೆ.

ಗಮನಾರ್ಹವೆಂದರೆ ಅಮೆರಿಕದಾದ್ಯಂತ ಅತ್ಯುತ್ತಮ ಜಾಲ ಹೊಂದಿರುವ 'ಫಾಕ್ಸ್ ನ್ಯೂಸ್' ಯಾವುದೇ ಸುದ್ದಿಯನ್ನು ಮರು ಪರಿಶೀಲಿಸಿಯೇ ನೀಡುತ್ತಿದ್ದು, ಮಾಧ್ಯಮ ಗುಂಪುಗಳಲ್ಲಿ ಅತ್ಯಂತ ವಿಶ್ವಾಸಾರ್ಹತೆ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿಯೇ ಸಿಎನ್‌ಎನ್ ನಂತಹ ಸುದ್ದಿವಾಹಿನಿಗಳನ್ನೂ 'ಫಾಕ್ಸ್ ನ್ಯೂಸ್' ಹಿಂದಿಕ್ಕಿದೆ. ಇಂತಹ ಸುದ್ದಿ ಸಂಸ್ಥೆಯಲ್ಲಿಯೇ ಈ ತೆರನಾದ ಪ್ರಮಾದ ನಡೆದಿರುವ ಬಗ್ಗೆ ಇದೀಗ ಅಮೆರಿಕದಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದಂತಾಗಿದೆ.

English summary
@BarackObama has just passed. The president is dead. A sad 4th of July, indeed. President Barack Obama is dead - read the first of the Obama-related tweets on an official Twitter account operated by Fox News.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X