ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ಕಾಯಿಲೆ ಎಂದ ಅಜಾದ್ ಕ್ಷಮೆ ಯಾಚಿಸಲಿ

By Mahesh
|
Google Oneindia Kannada News

Minister Gulam Nabi Azad
ನವದೆಹಲಿ, ಜು 5: ಪುರುಷರ ನಡುವಿನ ಕಾಮ ಅನೈಸರ್ಗಿಕ ಹಾಗೂ ಕಾಯಿಲೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಆರೋಗ್ಯ ಖಾತೆ ಸಚಿವ ಗುಲಾಂ ನಬಿ ಅಜಾದ್ ಗೆ ಸಲಿಂಗಕಾಮಿಗಳ ಸಮುದಾಯ ಛೀಮಾರಿ ಹಾಕಿದೆ. ಪ್ರತಿಯೊಬ್ಬ ನಾಗರೀಕರಿಗೂ ತಮ್ಮದೆ ಆದ ಶೈಲಿಯಲ್ಲಿ ಬದುಕುವ ಹಕ್ಕಿದೆ. ಪೂರ್ವಾಗ್ರಹ ಪೀಡಿತರಾಗಿ ಈ ರೀತಿ ಹೇಳಿಕೆ ಕೊಟ್ಟಿರುವುದು ದುರದೃಷ್ಟಕರ. ಸಚಿವ ಅಜಾದ್ ಕೂಡಲೇ ಕ್ಷಮಾಯಾಚನೆ ಮಾಡಬೇಕು ಎಂದು ಸಿನಿಮಾ ನಿರ್ದೇಶಕ ಒನಿರ್ ಹೇಳಿದ್ದಾರೆ.

ಆರೋಗ್ಯ ಸಚಿವರ ಮಾತು ಕೇಳಿ ಶಾಕ್ ಆಗಿದೆ. LGBT ಸಮುದಾಯಕ್ಕೆ ಸಮಾನ ಹಕ್ಕು, ಗೌರವ ನೀಡಬೇಕು ಎಂದು ವಿಶ್ವಸಂಸ್ಥೆಯೇ ಸೂಚಿಸಿದೆ. ಲೈಂಗಿಕ ತಾರತಮ್ಯ ಮಾಡುವುದು ಸರಿಯಲ್ಲ. ಗೇ ಸೆಕ್ಸ್ ಅನೈಸರ್ಗಿಕವಲ್ಲ ಎಂದು ಮನೀಶ್ ಮಲ್ಹೋತ್ರ ಪ್ರತಿಪಾದಿಸಿದ್ದಾರೆ.

ಸುರಕ್ಷಿತ ಲೈಂಗಿಕತೆ ಮುಖ್ಯ. ಕಾಂಡೋಮ್ ಬಳಕೆ ಬಗ್ಗೆ ಪ್ರಚಾರ ನೀಡಲಿ. ಗೇ ಗಳ ಸಂಖ್ಯೆ ಸರಿಯಾಗಿ ಸಿಗುತ್ತಿಲ್ಲ ಎಂದು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಇತರೆ ಕಾರ್ಯಕ್ರಮದತ್ತ ಸಚಿವರು ಗಮನ ಹರಿಸಲಿ ಎಂದು ಗೇ ಹಕ್ಕುಗಳ ಕಾರ್ಯಕರ್ತೆ ಅಮೃತಾ ಶರ್ಮ ಪ್ರತಿಕ್ರಿಯಿಸಿದ್ದಾರೆ. ಸಚಿವ ಗುಲಾಂ ಮಾತ್ರ ಇನ್ನೂ ಗೇ ಗಳ ಪ್ರತಿರೋಧಕ್ಕೆ ಯಾವುದೇ ಉತ್ತರ ನೀಡಿಲ್ಲ.

English summary
Film-maker Onir has demanded Union health minister Ghulam Nabi Azad's apology. Azad made a comment that men having sex with men(MSM) is both 'unnatural' and a 'disease'. Gay Community and activists also demanded Minister's apology,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X