ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮಂಗಳವಾರ ಸ್ಕೂಲಿಗೆ ಹೋಗುತ್ತಾರೆ

By Prasad
|
Google Oneindia Kannada News

Yeddyurappa off to school on July 5
ಬೆಂಗಳೂರು, ಜು. 4 : ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪವರೆಗೆ ಎಲ್ಲಾ ಜನ ಪ್ರತಿನಿಧಿಗಳು ಜುಲೈ 5, ಮಂಗಳವಾರ ರಾಜ್ಯದಲ್ಲಿರುವ 46 ಸಾವಿರಕ್ಕೂ ಹೆಚ್ಚಿರುವ ಸರಕಾರಿ ಶಾಲೆಗಳಿಗೆ ಹೋಗಲಿದ್ದಾರೆ. ಸಮಯ : ಬೆಳಿಗ್ಗೆ 10 ಗಂಟೆಗೆ ಢಣಢಣ ಗಂಟೆ ಬಾರಿಸುತ್ತಿದ್ದಂತೆ ಶಾಲೆಗಳಲ್ಲಿ ಹಾಜರಾಗಲಿದ್ದಾರೆ.

ಸರಕಾರಿ ಶಾಲೆಗಳು ಹೇಗೆ ನಡೆಯುತ್ತಿವೆ, ವಿದ್ಯಾರ್ಥಿಗಳು ಬರುತ್ತಿದ್ದಾರಾ, ಶಿಕ್ಷಕರೆಷ್ಟಿದ್ದಾರೆ, ಶಾಲೆಗೆ ನಡ್ಕೊಂಡೇ ಬರ್ತಾರಾ, ಬಸ್ಸಿಗೆ ಬರ್ತಾರಾ... ಇತ್ಯಾದಿ ಸಂಗತಿಗಳ ಪರಿಶೀಲನೆ ಮಾಡಲಿದ್ದಾರೆ. 'ಇದು ನಮ್ಮ ಶಾಲೆ' ಅಭಿಯಾನದಡಿ ಇಂಥದೊಂದು ವಿನೂತನ ಕಾರ್ಯಕ್ರಮವನ್ನು ಸರ್ವಶಿಕ್ಷಣ ಅಭಿಯಾನದ ನಿರ್ದೇಶಕ ಬಿವಿ ಕುಲಕರ್ಣಿ ಹಮ್ಮಿಕೊಂಡಿದ್ದಾರೆ.

ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮುದಾಯದ ಸಹಭಾಗಿತ್ವವನ್ನು ಪಡೆಯುವ ದಿಸೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ವಿಧಾನಸಭೆ, ಸಂಸತ್ ಸದಸ್ಯರು ಶಾಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂಥ ಪ್ರಯತ್ನ ನಡೆಯುತ್ತಿರುವುದು ಇದು ಪ್ರಥಮ ಬಾರಿ.

ಜನಪ್ರತಿನಿಧಿಗಳು ಏನೇನು ಪರಿಶೀಲಿಸಲಿದ್ದಾರೆ?

* ಶಾಲೆ ಆರಂಭವಾಗುವ ಹೊತ್ತಿಗೆ ಪ್ರಾರ್ಥನಾ ಚಟುವಟಿಕೆ.
* ತರಗತಿವಾರು ಮಕ್ಕಳ ಮತ್ತು ಶಿಕ್ಷಕರ ಹಾಜರಾತಿ.
* ಪಠ್ಯಪುಸ್ತಕ, ಸಮವಸ್ತ್ರ, ಬೈಸಿಕಲ್‌ಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ.
* ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ವ್ಯವಸ್ಥೆ.
* ಶೌಚಾಲಯಗಳ ಸ್ವಚ್ಛತೆ ಮತ್ತು ಬಳಕೆ.
* ಕುಡಿಯುವ ನೀರಿನ ಲಭ್ಯತೆ, ಬಿಸಿಯೂಟದ ತಯಾರಿ, ಅದರ ವಿತರಣೆ.
* ಗ್ರಂಥಾಲಯದ ಬಳಕೆ, ಮಕ್ಕಳಲ್ಲಿ ಓದುವ ಸಾಮರ್ಥ್ಯದ ಅಧ್ಯಯನ.
* ಪಾಠ ಮಾಡುವ ಗುಣಮಟ್ಟದ ಪರಿಶೀಲನೆ.

ಈ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಕ್ರಿಯಾಶೀಲತೆ ಮತ್ತು ಸಮುದಾಯದ ಸಹಭಾಗಿತ್ವದ ಕುರಿತು ಜನಪ್ರತಿನಿಧಿಗಳು ಗಮನಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಆಲ್ ದಿ ಬೆಸ್ಟ್. ಜನಪ್ರತಿನಿಧಿಗಳು ಈ ಬಾರಿಯಾದರೂ ಶಾಲೆಗೆ ಚಕ್ಕರ್ ಹಾಕದಿರಲಿ.

English summary
Karnataka Chief Minister BS Yeddyurappa, MLAs, MPs, gram panchayat members will visit govt schools all over Karnataka on July 5, Tuesday and inspect standard of education, including infrastructure provided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X