ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ

By Mahesh
|
Google Oneindia Kannada News

Ponnampet accident, img by: Indresh BK
ಪೊನ್ನಂಪೇಟೆ ಜು 4: ಇಲ್ಲಿಗೆ ಸಮೀಪದ ಕಾನೂರು ಜಂಕ್ಷನ್ ಬಳಿ ಕರ್ನಾಟಕ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆ ವಾಹನ ಐದು ಜನರನ್ನು ಬಲಿ ತೆಗೆದುಕೊಂಡಿದೆ. ಕೇರಳದ ಕಡೆಗೆ ಹೊರಟ್ಟಿದ್ದ ಮಾರುತಿ ಓಮ್ನಿ ವ್ಯಾನ್ ಗೆ ಎದುರಿನಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಢಿಕ್ಕಿ ಹೊಡೆದ ಪರಿಣಾಮ, ವ್ಯಾನ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಚಾಲಕ ಹರಳಯ್ಯ ತಪ್ಪಿಸಿಕೊಂಡಿದ್ದಾರೆ.

ಈ ಭೀಕರ ಅಪಘಾತದಲ್ಲಿ ಮೃತಪಟ್ಟವರು ಒಂದೇ ಕುಟುಂಬಕ್ಕೆ ಸೇರಿದವರು. ಕೊಡಗಿನ ನಾಪೋಕ್ಲು ಸಮೀಪದ ಚೆರಿಯಪರಂಬುವಿನವರು ಎಂದು ತಿಳಿದು ಬಂದಿದೆ. ಇವರು ಪೊನ್ನಂಪೇಟೆ ಮಾರ್ಗವಾಗಿ ಕೇರಳದ ಮಾನಂದವಾಡಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು.

ಪೊನ್ನಂಪೇಟೆಯ ಸಮೀಪದ ಕಾನೂರು ಜಂಕ್ಷನ್ ಬಳಿ ತಿರುವಿನಲ್ಲಿ ಜೀಪನ್ನು ಹಿಂದಿಕ್ಕಿ ಮುನ್ನುಗ್ಗಿದ ಕೆಎಸ್ಆರ್ ಟಿಸಿ ಬಸ್ಸು, ಮಾರುತಿ ವ್ಯಾನಿಗೆ ಢಿಕ್ಕಿಹೊಡೆದಿದೆ. ಈ ಅಪಘಾತದಲ್ಲಿ ಮೃತಪಟ್ಟವರನ್ನು ಹುಟ್ಟೂ ಶವಗಳನ್ನು ಅವರ ಹುಟ್ಟೂರಿಗೆ ಸಾಗಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಮಕ್ಕಳು ಸೇರಿ ನಾಲ್ವರನ್ನು ಮೈಸೂರಿಗೆ ಸಾಗಿಸಲಾಗಿದೆ.

ಮೃತಪಟ್ಟವರನ್ನು ನಾಪೋಕ್ಲುವಿನ ಪಿಎಂ ಹ್ಯಾರಿಸ್(32)(ಡೈವರ್), ಸಿರಾಜ್(30), ಪೊನ್ನಂಪೇಟೆಯ ಉಮ್ಮರ್(40), ಐಸಮ್ಮ(38) ಎಂದು ಗುರುತಿಸಲಾಗಿದೆ. ಇಬ್ರಾಹಿಂ, ಶಫಿಲಾ, ಸಲ್ಮಾನ್ ಹಾಗೂ ಪಸ್ಮಿಯಾ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
A speeding Karnataka State Road Transport Corporation (KSRTC) bus was hit a Maruti Omni van killing four persons on the spot, who were traveling to Kerala on Sunday July 3 afternoon. The incident occurred at Mugutageri near Ponnampet, Kodagu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X