ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ವಿಥ್ ಕಲ್ಮಾಡಿ: ಅಂಡಮಾನ್‌ ಜೈಲು ಪಾಲಾದ ಅಧಿಕಾರಿ

By Srinath
|
Google Oneindia Kannada News

Tihar jail
ನವದೆಹಲಿ, ಜುಲೈ 3: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅಪಾರ ಭ್ರಷಾಚಾರವೆಸಗಿ ಜೈಲು ಸೇರಿರುವ ಕರ್ನಾಟಕ ಮೂಲದ ಕಾಂಗ್ರೆಸ್‌ ಸಂಸದ ಸುರೇಶ್‌ ಕಲ್ಮಾಡಿಗೆ ದೆಹಲಿಯ ತಿಹಾರ್ ಜೈಲಿನಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. ಕಾರಾಗೃಹದ ಅಧೀಕ್ಷಕರ ಕೊಠಡಿಯಲ್ಲಿ ಕುಳಿತು ಅವರ ಜತೆಯೇ ಚಹಾ ಸೇವಿಸಿದ್ದಾರೆ.

ಹೀಗೇ ಚಹಾ ಕುಡಿಯುತ್ತಿರುವಾಗಲೇ ನ್ಯಾಯಾಧೀಶರೊಬ್ಬರಿಗೆ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಪತ್ರಿಕೆಗಳಲ್ಲಿ ವರದಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜೈಲು ಆಡಳಿತ ತನಿಖೆಗೆ ಆದೇಶಿಸಿದೆ. ಕಲ್ಮಾಡಿ ಜತೆ ಚಹಾ ಕುಡಿಯುತ್ತಿದ್ದ ಜೈಲು ಅಧೀಕ್ಷಕ ಎಸ್‌.ಸಿ. ಭಾರದ್ವಾಜ್‌ ಅವರನ್ನು ಅಂಡಮಾನ್‌- ನಿಕೋಬಾರ್ ದ್ವೀಪ ಸಮೂಹದ ಪೋರ್ಟ್‌ಬ್ಲೇರ್ ಗೆ ಎತ್ತಂಗಡಿ ಮಾಡಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೂ (ಜುಲೈ 4) ಅವರಿಗೆ ಪೋರ್ಟ್‌ಬ್ಲೇರ್ ಗೆ ತೆರಳದಂತೆ ಆದೇಶಿಸಲಾಗಿದೆ.

ಕರುಣಾನಿ ಪುತ್ರಿ ಕನಿಮೋಳಿ, ಮಾಜಿ ಸಚಿವ ಎ. ರಾಜಾ ಅವರಿರುವ, ಇತ್ತೀಚಿನ ದಿನಗಳಲ್ಲಿ ವಿಐಪಿ ಜೈಲುಎಂದೇ ಹೆಸರುವಾಸಿಯಾಗಿರುವ ತಿಹಾರ್ ಗೆ ಗುರುವಾರ ನ್ಯಾಯಾಧೀಶ ಬ್ರಿಜೇಶ್‌ ಕುಮಾರ್ ಗರ್ಗ್‌ ಅವರು ದಿಢೀರನೆ ಭೇಟಿ ನೀಡಿದ್ದರು. ಈ ಸಂದರ್ಭ ಕಲ್ಮಾಡಿ ಅಧೀಕ್ಷಕರ ಕೊಠಡಿಯಲ್ಲಿ ಕುಳಿತು ಚಹಾ ಕುಡಿಯುತ್ತಿರುವುದನ್ನು ಗರ್ಗ್‌ ಪ್ರತ್ಯಕ್ಷವಾಗಿ ಕಂಡರು. ಅಲ್ಲದೆ 2ಜಿ ಹಗರಣದ ಕೆಲ ಆರೋಪಿಗಳು ಸೇರಿದಂತೆ ಕೆಲ ವಿಐಪಿ ಕೈದಿಗಳು ಜೈಲಿನಲ್ಲಿ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿಯೂ ಪ್ರಕಟವಾಯಿತು.

ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದ ಕಾರಾಗೃಹ ಡಿಐಜಿ ಆರ್‌.ಎನ್‌. ಶರ್ಮಾ, ತನಿಖೆ ನಡೆಸಿ 48 ಗಂಟೆಗಳಲ್ಲಿ ವರದಿ ಕೊಡುವಂತೆ ಆದೇಶಿಸಿದ್ದಾರೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

English summary
Tihar jail authorities have ordered a probe into the alleged extra liberty given to CWG scammer Suresh Kalmadi and other high profile prisoners. Jail Superintendent Bharadwaj, who is under the scanner, was supposed to leave Tihar July 1. But he has been asked to stay till the investigation in the case is completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X