ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿ, ಬೋಸ್ನಿಯಾದಲ್ಲೂ ಕನ್ನಡ ಅಧ್ಯಯನ ಪೀಠ

By Mahesh
|
Google Oneindia Kannada News

KDA, Mukhyamantri Chandru
ಬಿಜಾಪುರ ಜು 3: ಜರ್ಮನಿ, ಆಸ್ಟ್ರೀಯಾ ಮತ್ತು ಬೊಸ್ನಿಯಾ ಸೇರಿದಂತೆ ನಾಲ್ಕು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಪ್ರತಿ ವಿಶ್ವವಿದ್ಯಾಲಯಕ್ಕೂ ಒಂದು ಕೋಟಿ ಅನುದಾನ ನೀಡಲಾಗುವುದು ಎಂದರು.

ಜರ್ಮನಿಯ ಬಹೋರಿಯಾದ ಊರ್ಜಬರ್ಜ್, ಹೇಡನ್ ಬರ್ಗ್, ಮ್ಯೂನಿಚ್ ಹಾಗೂ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.ಮುಂದಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಈ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಸಿದ್ಧತೆ ನಡೆದಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಒಟ್ಟಾರೆ ಕರ್ನಾಟಕದಿಂದ ಹೊರಗಡೆ ಸುಮಾರು 7 ಕನ್ನಡ ಅಧ್ಯಯನ ಕೇಂದ್ರಗಳನ್ನು ಬೆಳೆಸಿ, ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಉದ್ಯೋಗನೀತಿ ಜಾರಿಗೊಳ್ಳಬೇಕು. ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಬೇಕು. ಆಡಳಿತದಲ್ಲಿ ಕನ್ನಡ ಬಳಕೆ ಹೆಚ್ಚಬೇಕು. ಶಾಸ್ತ್ರೀಯ ಭಾಷೆ ಅನುದಾನ ಹೆಚ್ಚಬೇಕು. ಈ ಬಗ್ಗೆ ಚರ್ಚಿಸಲು ನಿಯೋಗವನ್ನು ಕರೆದುಕೊಂಡು ಕೇಂದ್ರ ಸರ್ಕಾರ ಮೊರೆ ಇಡುವುದಾಗಿ ಮುಖ್ಯಮಂತ್ರಿ ಚಂದ್ರು ಹೇಳಿದರು.

English summary
Karnataka Government has allocated Rs 1 crore has been for four foreign universities in Germany, Austria and Bosnia Kannada Development Authority (KDA)is planning to start Kannada study centres in those varsities said Mukhyamantri Chandru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X