ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆ ಸೇರಿದ ಬಳ್ಳಾರಿಯ ಪ್ರವಳಿಕಾ

By * ರೋಹಿಣಿ ಬಳ್ಳಾರಿ
|
Google Oneindia Kannada News

ಈ ಕಿನ್ನಿಕೆಯ ಹೆಸರು ಪ್ರವಳಿಕಾ ಮುರಳೀಧರ. ಬಳ್ಳಾರಿಯ ಪ್ರತಿಷ್ಠಿತ ಸಂತ ಫಿಲೋಮಿನಾ ಶಾಲೆಯ 8ನೇ ತರಗತಿ ವಿದ್ಯಾರ್ಥಿ. ತಾಯಿ ರಾಖಿಯ ಪ್ರೋತ್ಸಾಹ - ತಂದೆ ಮುರಳೀಧರ ಅವರ ಪ್ರೇರಣೆಯಿಂದ ನೃತ್ಯದತ್ತ ಅತೀವ ಆಸಕ್ತಿ. ಕೂಚಿಪುಡಿಯಲ್ಲಿ ಪರಿಣಿತಿ ಸಾಧಿಸುವ ಗುರಿ. ಈ ನಿಟ್ಟಿನಲ್ಲಿ ಅವಿರತ ಶ್ರಮ.

ಸಾಧನೆಯ ಶಿಖಿರಗಳನ್ನೇರುತ್ತಲೇ ಸಾಧನೆಯ ಹಾದಿಯಲ್ಲಿ ಹೆಜ್ಜೆಗಳನ್ನಿರಿಸುತ್ತಿರುವ ಪ್ರವಳಿಕಾಗೆ 'ನಾಟ್ಯಮಯೂರಿ, ಕಲಾಶ್ರೀ, ಭರಣಿಶ್ರೀ, ದಿ. ಪುಟ್ಟರಾಜಗವಾಯಿಗಳ ಬಾಲಪ್ರತಿಭೆ" ಪ್ರಶಸ್ತಿಗಳು ಬಂದಿವೆ. ವಿವಿಧ ಸಂಘಟನೆಗಳು ಗೌರವಿಸಿ ಅಭಿನಂದಿಸಿವೆ.

2010ರ ಡಿಸೆಂಬರ್ 26ರಂದು ಹೈದ್ರಾಬಾದ್‌ನ ಗಚಿಭೌಲಿ ಕ್ರೀಡಾಂಗಣದಲ್ಲಿ ನಡೆದ ಎರಡನೆಯ ಅಂತಾರಾಷ್ಟ್ರೀಯ ಕೂಚಿಪುಡಿ ನೃತ್ಯ ಸ್ಪರ್ಧೆಯಲ್ಲಿ ಸಿಲಿಕಾನ್ ಆಂಧ್ರದ 2850 ಸದಸ್ಯರ ತಂಡದಲ್ಲಿ ಅವಕಾಶ ಪಡೆದು, 12 ನಿಮಿಷಗಳ ನೃತ್ಯ ಪ್ರದರ್ಶನ ಮಾಡಿ ತಂಡವಾಗಿ ಗಿನ್ನಿಸ್ ದಾಖಲೆ ಸೇರಿದ್ದಾಳೆ.

ತಂಡ ಗಿನ್ನಿಸ್ ದಾಖಲೆ ಸೇರಿದ ಕಾರಣ ತಂಡದ ಸದಸ್ಯೆ ಆಗಿರುವ ಪ್ರವಳಿಕಾ ಕೂಡ ಗಿನ್ನಿಸ್ ದಾಖಲೆ ಸೇರಿದ ಖುಷಿಯಲ್ಲಿದ್ದಾಳೆ. ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರ ನೀಡಿದ ಸಂಸ್ಥೆ ತಂಡದ ಪ್ರತಿಯೊಬ್ಬರಿಗೂ ವೈಯಕ್ತಿಕ ಪ್ರಮಾಣಪತ್ರ ನೀಡಿದೆ.

English summary
Pravalika from Bellary district has entered into Guinness Book of Records in group event in Kuchipudi dance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X