ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಯ್ಲಿ ಕಿತ್ತಾಕ್ಕಿದ್ರೆ ನಂಗೆ ಚಾನ್ಸ್ ಕೊಡಿ ಮೇಡಂ: ಹರಿಪ್ರಸಾದ್

By Mahesh
|
Google Oneindia Kannada News

BK Hariprasad eyes Union Cabinet berth
ಬೆಂಗಳೂರು ಜು 1: ಕರ್ನಾಟಕ ಸರ್ಕಾರದ ಸಚಿವ ಸಂಪುಟ ಆಷಾಢ ನಂತರದ ಮಹೂರ್ತಕ್ಕೆ ಕಾದು ಕೂತಿದೆ. ಅತ್ತ ಕೇಂದ್ರ ಸಚಿವ ಸಂಪುಟ ವಿಸ್ತರಗೆ ಮಹೂರ್ತ ಫಿಕ್ಸ್ ಆಗಿದೆ. ಮೌನ ಮುರಿದ ಪ್ರಧಾನಿ, ಪತ್ರಕರ್ತರೊಡನೆ ಸಂವಾದ ನಡೆಸಿದ್ದಾರೆ. ಉಪವಾಸ ಸತ್ಯಾಗ್ರಹ ಹೂಡುವವರನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಅಂಗಪಕ್ಷಗಳ ತಾಳಕ್ಕೆ ಕುಣಿಯುವುದನ್ನು ಯುಪಿಎ ಸರ್ಕಾರ ಬಿಟ್ಟಿಲ್ಲ. ಜೊತೆಗೆ ಕಾಂಗ್ರೆಸ್ಸಿಗರಲ್ಲಿ ಸೀಟಿಗಾಗಿ ಲಾಬಿ ಜೋರಾಗಿ ನಡೆದಿದೆ.

ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರ ಸ್ಥಾನಕ್ಕೆ ಸಂಚಕಾರ ಉಂಟಾಗಿದ್ದು, ಬಿ.ಕೆ. ಹರಿ ಪ್ರಸಾದ್ ಹಾಗೂ ರೆಹ್ಮನ್‌ಖಾನ್ ಅವರು ಮೊಯ್ಲಿ ಸೀಟು ಬೇಕು ಎಂದು ಭಾರಿ ಲಾಬಿ ನಡೆಸುತ್ತಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಈ ಇಬ್ಬರು ರಾಜ್ಯಸಭಾ ಸದಸ್ಯರಾಗಿದ್ದು, ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವ ಉದ್ಧೇಶದಿಂದ ಮೊಯ್ಲಿ ವಿರುದ್ಧ ಪಿತೂರಿ ನಡೆಯತೊಡಗಿದೆ.

ಹೀಗಿದೆ ಲೆಕ್ಕಾಚಾರ: ರಾಜ್ಯವನ್ನು ಪ್ರತಿನಿಧಿಸುವ ಸಚಿವರಲ್ಲಿ ಒಬ್ಬರನ್ನು ಕೈಬಿಡುವ ಸಾಧ್ಯತೆಯಿದೆ. ಆಗ ಸಚಿವ ಸ್ಥಾನ ಸಲೀಸಾಗಿ ಸಿಗಲಿದೆ ಎಂಬ ನಂಬಿಕೆ ಹರಿಪ್ರಸಾದ್ ಅವರಿಗಿದೆ. ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ಪ್ರಧಾನಿ ಮತ್ತು ಸೋನಿಯಾಗಾಂಧಿ ಯವರಿಗೆ ಭಾರೀ ಹತ್ತಿರದಲ್ಲಿದ್ದಾರೆ. ಕೃಷ್ಣ ಅವರ ಕಾರ್ಯವೈಖರಿ ಬಗ್ಗೆ ಪಕ್ಷದಲ್ಲಿ ಅಪಸ್ವರ ಇದ್ದರೂ ಕೃಷ್ಣ ಅವರನ್ನು ಕೆಳಗಿಳಿಸಲು ಸೋನಿಯಾಜಿಗೆ ಮನಸ್ಸಿಲ್ಲ. ಇಳಿಸಿದರೂ ದೊಡ್ಡ ಹುದ್ದೆ ನೀಡುವುದಂತೂ ಗ್ಯಾರಂಟಿ.

ಇನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪ ಜಾತಿ ಆಧಾರದ ಮೇಲೆ ಸಂಪುಟದಲ್ಲಿ ಖಾಯಂ ಅತಿಥಿಗಳಾಗಿರುತ್ತಾರೆ. ಜಾತಿ ವಿಷಯದಲ್ಲಿ ಮೊಯ್ಲಿಯವರಿಗೆ ಬೆಂಬಲ ದೊರೆತರೂ ವರಿಷ್ಠರಿಗೆ ಯಾಕೋ ಮೊಯ್ಲಿ ಮೇಲೆ ಅಸಮಾಧಾನವಿದೆ. ಮೂಲಗಳ ಪ್ರಕಾರ ಚಿವ ಸ್ಥಾನಕ್ಕಾಗಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮೂಲಕ ಹರಿಪ್ರಸಾದ್ ಲಾಬಿ ನಡೆಸುತ್ತಿದ್ದಾರೆ.

English summary
UPA Cabinet Expansion is likely to happen on July first week. Meanwhile aspirants from Karnataka Congress have started lobbying BK Hariprasad and Rahman are the front runner. SM Krishna and Mallikarjun Kharge are safe and Moily is likely to be axed according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X