ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ ಖೈದಾ ವೆಬ್ ಸೈಟ್ ಗೆ ಹ್ಯಾಕರ್ಸ್ ಗಳ ದಾಳಿ!

By Mahesh
|
Google Oneindia Kannada News

Hackers Attack Al Qaeda Internet Network
ಲಂಡನ್ ಜು 1: ಉಗ್ರರಿಗೆ ಉಗ್ರರ ಭೀತಿ! ಜಗತ್ತನ್ನೇ ನಡುಗಿಸುವ ಉಗ್ರ ಸಂಘಟನೆ ಅಲ್ ಖೈದಾದ ಅಧಿಕೃತ ಇಂಟರ್ ನೆಟ್ ಜಾಲದ ಮೇಲೆ ಅನಾಮಿಕ ಹ್ಯಾಕರ್ ಸಂಘಟನೆಯ ದಾಳಿ ನಡೆದಿದೆ. ಇದರಿಂದಾಗಿ ಇಂಟರ್ ನೆಟ್ ಬಳಸಲು ಆಗದೆ ಅಲ್ ಖೈದಾ ಸಂಘಟನೆ ಒದ್ದಾಡಿರುವ ಘಟನೆ ನಡೆದಿದೆ.

ಅಲ್ ಖೈದಾ ಬಳಸುತ್ತಿದ್ದ ಪ್ರಬಲ ಇಂಟರ್ ನೆಟ್ ಜಾಲ ಹೆಣೆದಿದ್ದ ಬೇಲಿಯನ್ನು ಅತಿಕ್ರಮಿಸಿರುವ ಹ್ಯಾಕರ್ಸ್ ಗಳು ಸಂಪೂರ್ಣವಾಗಿ ಜಾಲವನ್ನು ನಿಷ್ಕ್ರಿಯಗೊಳಿಸಿದ್ದಾರೆ. ಆದರೆ ಅಲ್ ಖೈದಾಗೆ ಇಂಟರ್ ನೆಟ್ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾದ ಫ್ಲಾಶ್ ಪಾಯಿಂಟ್ ಗ್ಲೋಬಲ್ ಪಾರ್ಟರ್ನ್ಸ್ ನ ಇವನ್ ಕೊಹ್ಲ್ ಮನ್ ಅವರ ಪ್ರಕಾರ, ಇದು ಅತ್ಯಂತ ಜಾಣ್ಮೆಯಿಂದ ಮಾಡಿದ ಕೆಲಸ, ಈಗ ಜಾಲವನ್ನು ಪುನಃ ಸಮಸ್ಥಿತಿ ತರುವ ಪ್ರಯತ್ನ ನಡೆದಿದೆ. ಸುಮಾರು ದಿನಗಳ ಕಾಲ ರಿಪೇರಿ ಕಾರ್ಯ ನಡೆಯಲಿದೆ ಎಂದಿದ್ದಾರೆ.

ಇದಕ್ಕೂ ಮುಂಚೆ ಅಲ್ ಖೈದಾದ ಆನ್ ಲೈನ್ ಮ್ಯಾಗಜೀನ್ ಇನ್ ಸ್ಪೈರ್ ಮೇಲೆ ದಾಳಿ ಮಾಡಿದ್ದ ಯುಕೆ ಸರ್ಕಾರದ ಭದ್ರತಾ ತಜ್ಞರು, ಅಲ್ಲಿ ಬಾಂಬ್ ತಯಾರಿಕೆ ಹಾಗೂ ಕಪ್ ಕೆಕ್ ತಯಾರಿಕೆ ಬಗ್ಗೆ ಸಂದೇಶ ಹಾಕಿ ಅಲ್ ಖೈದಾಗೆ ಚೋಕ್ ನೀಡಿದ್ದರು. ಒಟ್ಟಿನಲ್ಲಿ ಉಗ್ರರಿಗೂ ಹ್ಯಾಕರ್ಸ್ ಕಾಟ ಶುರುವಾಗಿರುವಂತಿದೆ.

English summary
Terrorists also face terrorist attacks! An unknown hacker group has hacked Al-Qaeda's internet network and caused interruption in their ability to communicate via internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X