ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಲಯದತ್ತ ಪೆಟ್ರೋಲ್ ದರ: ಗ್ರಾಹಕ ಹರೋಹರ

By Srinath
|
Google Oneindia Kannada News

Petrol price hiked again
ನವದೆಹಲಿ, ಜುಲೈ1: ಸಂಪಾದಕರ ಕಣ್ತಪ್ಪಿ ಸುದ್ದಿ ಮರುಕಳಿಸಿರಬಹುದು ಎಂದು ಸಮಾಧಾನಪಟ್ಟುಕೊಳ್ಳಬೇಡಿ. ಏಕೆಂದರೆ ಈ ಸುದ್ದಿ ತಾಜಾ. ತಾಜಾ ಆಗಿಯೇ ಕೇಂದ್ರ ಸರಕಾರ ಪೆಟ್ರೋಲ್ ಗ್ರಾಹಕರ ಮೇಲೆ ಬರೆ ಎಳೆದಿದೆ. ಇದನ್ನು ಜೀರ್ಣಿಸಿಕೊಳ್ಳುವುದು ದೇಶದ ಮಹಾಜನತೆಗೆ ತುಸು ಕಷ್ಟವೇ ಆದೀತು.

ಹೌದು, ಕಳೆದ ವಾರವಷ್ಟೇ ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲದ ದರ ಏರಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕೊಂಚ ಏರಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಪರಿಷ್ಕೃತ ದರವು ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 30 ಪೈಸೆ ಮತ್ತು ಡೀಸೆಲ್‌ ಬೆಲೆ 15 ಪೈಸೆ ಹೆಚ್ಚಾಗಿದೆ. ಅಂದರೆ ಪೆಟ್ರೋಲ್ ದರ ಬಹುತೇಕ 72 ರು. ಆಗಿದ್ದರೆ ಡೀಸೆಲ್ 42 ರುಪಾಯಿಗೆ ಬಂದು ನಿಂತಿದೆ.

ಪೆಟ್ರೋಲ್ ಪಂಪ್ ಮಾಲೀಕರಿಗೆ ಹೆಚ್ಚಿನ ಕಮಿಷನ್ ನೀಡುವುದಕ್ಕಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 27 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ದರವನ್ನು 15 ಪೈಸೆ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ತಜ್ಞ ಸಮಿತಿಯೊಂದು ಪೆಟ್ರೋಲ್‌ ಲೀ.ಗೆ ಶಿಫಾರಸು ಮಾಡಿದ ಕಮಿಷನ್‌ ದರಕ್ಕಿಂತ ಇದು 39.5 ಪೈಸೆ ಕಡಿಮೆಯಿದೆ. ಇದೇ ರೀತಿ ಡೀಸೆಲ್‌ ಬಗ್ಗೆ ಸಮಿತಿ ಶಿಫಾರಸು ಮಾಡಿದ ದರಕ್ಕಿಂತ ಇದು 17 ಪೈಸೆ ಕಡಿಮೆಯಿದೆ. ಅಂದರೆ ಇದನ್ನು ಸರಿದೂಗಿಸಲು ಶೀಘ್ರದಲ್ಲೇ ಮತ್ತೊಮ್ಮೆ ಪೆಟ್ರೋಲ್ ಉತ್ಪನ್ನಗಳ ಬೆಲೆಗಳು ಏರುವುದು ನಿಶ್ಚಿತವಾಗಿದೆ.

ದಿಲ್ಲಿಯಲ್ಲಿ ಈಗ ಪೆಟ್ರೋಲ್‌ ಬೆಲೆ ಲೀ.ಗೆ 63.37 ರು. ಇದೆ. ಅದು ಶುಕ್ರವಾರದಿಂದ ಲೀ.ಗೆ 63.64 ರು. ಆಗಲಿದೆ. ಡೀಸೆಲ್‌ ದರ ಲೀ.ಗೆ 41.12 ರು.ನಿಂದ 41.27 ರು.ಗೆ ಹೆಚ್ಚಲಿದೆ. ಕಳೆದ ವಾರವಷ್ಟೇ ಡೀಸೆಲ್‌ ದರವನ್ನು ಲೀ.ಗೆ 3 ರು. ಹೆಚ್ಚಿಸಲಾಗಿತ್ತು.

English summary
The government on Thursday (June30) hiked petrol and diesel prices by a marginal Rs 0.27 a litre and Rs 0.15 per litre respectively following increase in the commission paid to petrol pump dealers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X