ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಸೆಪ್ಷನ್ ಕಾರ್ಡ್ ಪ್ರಮಾದ, ವಿಜೇಂದರ್ ಮೇಲೆ FIR

By Mahesh
|
Google Oneindia Kannada News

Boxer Vijendra Singh Booked
ನವದೆಹಲಿ, ಜು 1: ಒಲಿಂಪಿಕ್ ಪ್ರಶಸ್ತಿ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಇಂದು ರಾಷ್ಟ್ರದ ಮುಂದೆ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಅವರ ಮದುವೆ ಆರತಕ್ಷತೆ ಆಹ್ವಾನ ಪತ್ರಿಕೆಯಲ್ಲಿ ಭಾರತದ ರಾಷ್ಟ್ರಲಾಂಛನವನ್ನು ಬಳಸಿ ಅಪಮಾನ ಎಸೆಗಿದ್ದಾರೆ. ವಿಜೇಂದರ್ ಹಾಗೂ ಅವರ ಕುಟುಂಬದ ಮೇಲೆ ಪೊಲೀಸರು FIR ದಾಖಲಿಸಿದ್ದಾರೆ.

ದೆಹಲಿ ಮೂಲದ ಅಭಿಷೇಕ್ ಕದ್ಯಾನ್ ಎಂಬ ವ್ಯಕ್ತಿ ವಿಜೇಂದರ್ ಅವರ ರಿಸೆಪ್ಷನ್ ಕಾರ್ಡ್ ನಲ್ಲಿ ಆಗಿರುವ ಪ್ರಮಾದವನ್ನು ಗಮನಿಸಿ ಎಸ್ ಪಿ ಅಶ್ವಿನ್ ಸೈನ್ವಿ ಅವರಿಗೆ ತಿಳಿಸಿದ್ದಾರೆ. ಅದರೆ, ಸುಮಾರು ಒಂದು ತಿಂಗಳುಗಳ ಕಾಲ ಕೇಸ್ ಬುಕ್ ಮಾಡದೆ ಉದಾಸೀನ ತೋರಿದ ಪೊಲೀಸರು ಕೊನೆಗೂ ಕೋರ್ಟ್ ಗೆ ವಿಷಯ ತಿಳಿಸಿ ವಿಜೇಂದರ್ ಮೇಲೆ FIR ದಾಖಲಿಸಿದ್ದಾರೆ.

ವಿಜೇಂದರ್ ತನ್ನ ಬಾಲ್ಯದ ಗೆಳತಿ ಅರ್ಚನಾರನ್ನು ಮೇ 17, 2011ರಂದು ಮದುವೆಯಾದರು. ಈ ಆರೋಪದಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ವಿಜೇಂದರ್ ಕುಟುಂಬ ಹಾಗೂ ಕಾರ್ಡ್ ಪ್ರಿಂಟರ್ ಕೂಡಾ 3 ತಿಂಗಳು ಸೆರೆವಾಸ ಅಥವಾ 5 ಸಾವಿರ ರೂ ದಂಡ ತೆರಬೇಕಾಗುತ್ತದೆ.

ರಾಷ್ಟ್ರೀಯ ಲಾಂಛನ ಹಾಗೂ ಕಾಯಿದೆ ದುರ್ಬಳಕೆ ತಡೆ ಕಾಯಿದೆಯ ಸೆಕ್ಷನ್ 3ರ ಪ್ರಕಾರ ಕೇಸ್ ಹಾಕಲಾಗಿದೆ. ಇದರ ಪ್ರಕಾರ ರಾಷ್ಟ್ರ ಚಿಹ್ನೆ, ಬಾವುಟ, ಗೀತೆ ಮುಂತಾದವುಗಳನ್ನು ವ್ಯಾಪಾರ ಹಾಗೂ ವೈಯಕ್ತಿಕ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಭಿವಾನಿ ಸರ್ದಾರ್ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

English summary
The Olympic medalist, boxer Vijender Singh has been booked over using the national emblem (Ashok Chakra) on his marriage reception card.FIR against the boxer, his family and the printer of the marriage card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X