ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು. 1ರಿಂದ ಮಂತ್ರಾಲಯಕ್ಕೆ ಹೊಸ ವೋಲ್ವೊ ಬಸ್

By Srinath
|
Google Oneindia Kannada News

Mantralaya
ಬೆಂಗಳೂರು, ಜೂನ್ 30 : ರಾಯರ ದಿನದಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಭಕ್ತಯರಿಗೆ ಕೆಎಸ್‌ಆರ್ ಟಿಸಿ ಒಳ್ಳೆಯ ಮಾಹಿತಿ ನೀಡಿದೆ. ನಾಳೆಯಿಂದ (ಜುಲೈ 1) ಬೆಂಗಳೂರು - ಮಂತ್ರಾಲಯ ನಡುವೆ ವಾರದಲ್ಲಿ ಮೂರು ಬಾರಿ ವೋಲ್ವೊ ಬಸ್ ಸಂಚರಿಸಲಿದೆ.

ಬೆಂಗಳೂರು - ಮಂತ್ರಾಲಯ ನಡುವೆ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಹೆಚ್ಚುವರಿ ವೋಲ್ವೊ ಬಸ್ ಸಂಪರ್ಕ ಕಲ್ಪಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ ಟಿಸಿ) ನಿರ್ಧರಿಸಿದೆ. 362 ಕಿ.ಮೀ. ದೂರವನ್ನು ಸುಮಾರು 8 ಗಂಟೆ ಅವಧಿಯಲ್ಲಿ ತಲುಪಬಹುದಾಗಿದೆ.

ಜುಲೈ 1ರಿಂದ ಈ ಸೇವೆ ಆರಂಭ ವಾಗಲಿದೆ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಹೊರಡುವ ಬಸ್, ಬೆಳಿಗ್ಗೆ 5.15ಕ್ಕೆ ಮಂತ್ರಾಲಯ ತಲುಪಲಿದೆ. ಮಧ್ಯಾಹ್ನ 2.15ಕ್ಕೆ ಮಂತ್ರಾಲಯದಿಂದ ಹೊರಟು, ರಾತ್ರಿ 9.45ಕ್ಕೆ ಬೆಂಗಳೂರು ತಲುಪಲಿದೆ ಎಂದು ಕೆಎಸ್‌ಆರ್ ಟಿಸಿ ಪ್ರಕಟಣೆ ತಿಳಿಸಿದೆ.

ನಿಗಮದ ವೆಬ್‌ಸೈಟ್ (www.ksrtc.in) ಮೂಲಕವೂ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ಮಾಹಿತಿಗೆ 77609 90562 ಅಥವಾ 22870099 ಸಂಖ್ಯೆಗೆ ಕರೆ ಮಾಡಬಹುದು.

English summary
KSRTC operates Bangalore to Mantralayam new volvo bus services from July 1. KSRTC bus booking can be made at www.ks­r­tc.in. Mantralaya, a small village in Andhra Pradesh on Karnataka border, is famous as it houses the original brindavan of great Madawa saint - Guru Raghavendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X