ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಪೆಟ್ರೋಲ್‌ ಖರೀದಿ ಬೇಡ: ಫೇಸ್‌ಬುಕ್ ಅಭಿಯಾನ

By Srinath
|
Google Oneindia Kannada News

petrol campaign through Facebook
ಬೆಂಗಳೂರು, ಜೂನ್ 30: ಇಂಟರ್ನೆಟ್‌ 'ಫೇಸ್‌ಬುಕ್‌'ನಲ್ಲಿ ಮತ್ತೊಮ್ಮೆ ಸಾಮಾಜಿಕ ಕಳಕಳಿ ವ್ಯಕ್ತವಾಗಿದೆ. ಒಂದು ದಿನದ ಮಟ್ಟಿಗೆ ಪೆಟ್ರೋಲ್ ಖರೀದಿಸಬೇಡಿ ಎಂದು ಫೇಸ್‌ಬುಕ್‌ನಲ್ಲಿ ಕರೆ ನೀಡಲಾಗಿದೆ.

ಜೂನ್ 30ರ ಮಧ್ಯರಾತ್ರಿ 12ರಿಂದ ಜು.1ರ ಮಧ್ಯರಾತ್ರಿ 12ರ ವರೆಗೆ ಪೆಟ್ರೋಲ್‌ ಖರೀದಿಸಬೇಡಿ. 30 ಸಾವಿರ ಜನ ಈ ಆಂದೋಲನ ಬೆಂಬಲಿಸಿ ಒಂದು ದಿನ ಪೆಟ್ರೋಲ್‌ ಖರೀದಿಸದಿದ್ದರೆ, ಬೆಲೆ ಇಳಿಯುತ್ತೆ!

ಸಾಮಾಜಿಕ ಅಂತರ್ ಜಾಲ ತಾಣ 'ಫೇಸ್‌ಬುಕ್‌'ನಲ್ಲಿ ನಡೆಯುತ್ತಿರುವ ದೇಶೀಯ ಮಟ್ಟದ ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿ ಆಂದೋಲನ ಇದು. ಕೇರಳದ ಸಿವಿ ವರ್ಗೀಸ್‌, ನಬಿಲ್‌ ಪುದೆನ್‌ಪರಂಬಿಲ್‌ ಮತ್ತು ಜಾರ್ಜ್‌.ಎಂ. ಎಂಬ ಯುವಕರು ಹಾಗೂ ಕೊಟ್ಟಾಯಂನ ಗ್ಯಾಂಗ್‌ಸ್ಟಾಜ್‌ ಎಂಬ ಫೇಸ್‌ಬುಕ್‌ ಸಮುದಾಯ ಆರಂಭಿಸಿರುವ ಈ ಅಭಿಯಾನಕ್ಕೆ ಸುಮಾರು 20 ಸಾವಿರ ಜನ ಬೆಂಬಲ ಸೂಚಿಸಿದ್ದಾರೆ.

ಎ ಡೇ ವಿತ್‌ ಔಟ್‌ ಪೆಟ್ರೋಲ್‌ ಪರ್ಚೇಸ್‌ - ಟು ರೆಡ್ನೂಸ್‌ ಪೆಟ್ರೋಲ್‌ ಕಾಸ್ಟ್‌ (ಪೆಟ್ರೋಲ್‌ ಬೆಲೆ ಇಳಿಕೆಗಾಗಿ ಒಂದು ದಿನ ಪೆಟ್ರೋಲ್‌ ಖರೀದಿ ಇಲ್ಲ). ಹೀಗೆ ಬರೆದುಕೊಂಡ ಸಾಲುಗಳು ಫೇಸ್‌ಬುಕ್‌ನಲ್ಲಿರುವ 90 ಸಾವಿರಕ್ಕೂ ಹೆಚ್ಚು ಫೇಸ್‌ಬುಕ್‌ ಸದಸ್ಯರ ಗೋಡೆಗಳ ಮೇಲೆ ಮೂಡಿವೆ. ಈ ಆಂದೋಲನವನ್ನು 20 ಸಾವಿರ ಮಂದಿ ಬೆಂಬಲಿಸಿದ್ದಾರೆ.

English summary
Don't buy petrol on a certain day campaign through Facebook is going around last April or May! Today also (June 30) Facebook followers called upon not to buy petrol in protest aganist steep hike in petrol prices recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X