ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಕ್ಕಾಗಿ ಬಿಎಸ್‌ವೈ-ಎಚ್‌ಡಿಕೆ ಒಳಒಪ್ಪಂದ

By Bm Lavakumar
|
Google Oneindia Kannada News

MP H Vishwanth takes on BSY and HDK
ಮೈಸೂರು, ಜೂ 29: ಸಂವಿಧಾನದ ಆಧಾರದಲ್ಲಿ ನಡೆಯಬೇಕಾದ ಸರಕಾರದ ಆಡಳಿತ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಅಡಗೂರು ಎಚ್.ವಿಶ್ವನಾಥ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯೆ ಅಧಿಕಾರಕ್ಕಾಗಿ ಒಳ ಒಪ್ಪಂದ ನಡೆದರೂ ಅಚ್ಚರಿಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಣೆ-ಪ್ರಮಾಣದಿಂದ ಕರ್ನಾಟಕದಲ್ಲಿ ಹೊಸ ಸಂಪ್ರದಾಯ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ ಆ ಮೂಲಕ ಇಬ್ಬರು ನಾಯಕರು ಜನರ ಧಾರ್ಮಿಕ ಭಾವನೆಯೊಂದಿಗೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ದೇಶದಲ್ಲಿ ಹಲವಾರು ಸಮಸ್ಯೆ ಹಾಗೂ ಲೋಕಪಾಲ ಮಸೂದೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ ಅದರಲ್ಲಿ ಭಾಗವಹಿಸಿ ಸಲಹೆ ನೀಡಬೇಕಾದ ಮಾಜಿ ಪ್ರಧಾನಿ ದೇವೇಗೌಡರು ಅದೆಲ್ಲವನ್ನು ಬಿಟ್ಟು ಹಾಸನದ ಬಿಲ್‌ಪಾಸ್ ಆಗಿಲ್ಲ ಎಂದು ಫುಟ್‌ಪಾತ್‌ನಲ್ಲಿ ಧರಣಿ ಕೂರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು ಆ ವಿಚಾರದಲ್ಲಿ ಅಧಿಕಾರಿಗಳನ್ನು ಕರೆದು ಕಿವಿ ಹಿಂಡಿ ಕೆಲಸ ಮಾಡಿಸಿಕೊಳ್ಳುವುದನ್ನು ಬಿಟ್ಟು ಪ್ರಚಾರಕ್ಕಾಗಿ ರಸ್ತೆಗಿಳಿಯುವುದು ಸರಿಯಲ್ಲ ಎಂದರು.

English summary
Mysore congress MP H Vishwanath has criticized BS Yeddyurappa and HD Kumaraswamy truth test drama. He also condemned HD Devegowda's hunger strike in front of Yeddyurappa's house
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X