• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರೇಕಿಂಗ್ ನ್ಯೂಸ್: ಶಿವ, ಸಂಕೇಶ್ವರ ಮಿಲನ

By Mahesh
|

ಬೆಂಗಳೂರು ಜೂ 28:ಇಂಡಿಯನ್ ಎಕ್ಸ್ ಪ್ರೆಸ್ ಒಡೆತನದ ಕನ್ನಡ ದಿನಪತ್ರಿಕೆ ಕನ್ನಡ ಪ್ರಭದ ಸಂಪಾದಕರಾಗಿದ್ದ ಶಿವ ಸುಬ್ರಮಣ್ಯ ಅವರು ತಮ್ಮ ಸ್ಥಾನವನ್ನು ವಿಶ್ವೇಶ್ವರ ಭಟ್ ಗೆ ಬಿಟ್ಟುಕೊಟ್ಟು ಹೊರ ನಡೆದ ಮೇಲೆ ಅವರ ಸುದ್ದಿ ಅಷ್ಟಾಗಿ ತಿಳಿದಿರಲಿಲ್ಲ. ಒಂದಷ್ಟು ದಿನ ಕಾಡು ಮೇಡು ಸುತ್ತಾಡಿ ಬಂದ ಮೇಲೆ ಯಾವ ಪತ್ರಿಕೆ, ಯಾವ ಚಾನೆಲ್ ಅವರನ್ನು ಕೂಗಿ ಕರೆಯಿತು ಎಂಬುದು ಮಿಡಿಯಾ ಮೇಲೆ ಹದ್ದಿನ ಕಣ್ಣಿಟ್ಟಿರುವ ಬ್ಲಾಗ್ ಗಳಿಗೂ ತಿಳಿದಿರಲಿಲ್ಲ.

ಆದರೆ, ಇಂದು ನಡೆದಿರುವ ಲೇಟೆಸ್ಟ್ ಬೆಳವಣಿಗೆ ಬಗ್ಗೆ ಮೀಡಿಯಾಮನ ಬ್ಲಾಗ್ ಬರೆದು ಕೊಂಡಿದೆ. ಸತ್ಯಾಸತ್ಯತೆಯ ಸಂಪೂರ್ಣ ಹಕ್ಕು ಬ್ಲಾಗ್ ಓನರ್ ಗೆ ಸೇರುತ್ತದೆ. ಹೊಸ ಪತ್ರಿಕೆ ಮಾಡುವ ಹುಮ್ಮಸ್ಸಿನಲ್ಲಿರುವ ವಿಜಯ ಸಂಕೇಶ್ವರ ಅವರನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಹುದ್ದೆಗಾಗಿ ಚಡಪಡಿಸುತ್ತಿರುವ ಶಿವ ಸುಬ್ರಹ್ಮಣ್ಯ ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಭೇಟಿ ಮಾಡಿದ್ದಾರೆ. ಶಿವನ ಕುರಿತು ಸಂಕೇಶ್ವರ ಅವರ ಅಭಿಪ್ರಾಯ ಏನಿದೆ ಎಂಬುದನ್ನು ಮೊದಲೇ ಪ್ರಕಟಿಸಲಾಗಿದೆ.

ಸಂಕೇಶ್ವರ ಅವರ ನಿರಾಸಕ್ತಿಯ ಹೊರತಾಗಿಯೂ ಕೆಲವರನ್ನು ಕಾಡಿ ಬೇಡಿ ಅವರನ್ನು ಭೇಟಿ ಮಾಡಲು ಶಿವ ಯಶಸ್ವಿಯಾಗಿದ್ದಾರೆ. ಈಗಾಗಲೇ ಹೊಸಪತ್ರಿಕೆ ಕಾರ್ಯಾರಂಭದ ಸೂಚನೆಯಾಗಿ ತಿಮ್ಮಪ್ಪ ಭಟ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರ ಕೈ ಕೆಳಗೆ ಬೇಕಾದರೂ ಕೆಲಸ ಮಾಡಲು ಸಿದ್ಧ ಎಂದು ಶಿವ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಫಲಶ್ರುತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

ಆದರೆ ತಿಮ್ಮಪ್ಪ ಭಟ್ ಅವರನ್ನು ಸಂಪಾದಕರನ್ನಾಗಿ ನೇಮಿಸಿಕೊಂಡಿದ್ದಾರೋ ಅಥವಾ ಸಲಹೆಗಾರ ರೀತಿ ನೇಮಿಸಿಕೊಂಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.

ಉದಯವಾಣಿ ಬಳಗಕ್ಕೆ ರವಿ ಹೆಗ್ಡೆ ಬಳಗ ಹೋದ ಮೇಲೆ ತಿಮ್ಮಪ್ಪ ಭಟ್ಟರು ಅಲ್ಲಿಂದ ಹೊರಬಿದ್ದಿದ್ದರು. ಅಷ್ಟೇ ಬೇಗ ಇನ್ನೊಂದು ಸ್ಥಾನ ಗಳಿಸಲು ಅವರು ಯಶಸ್ವಿಯಾಗಿದ್ದಾರೆ. ಆದರೆ ಇನ್ನಿಬ್ಬರು ಮಾಜಿ ಸಂಪಾದಕರು ಮಾತ್ರ ಇನ್ನು ಹುದ್ದೆ ಹುಡುಕಾಟದಲ್ಲಿ ಬ್ಯೂಸಿ!

ಕೊನೆ ಕುಟುಕು: ಮಾಧ್ಯಮ ಮಿತ್ರರ ನಡುವೆ ಹರಿದಾಡುತ್ತಿರುವ ಎಸ್ ಎಂಎಸ್ ಹೀಗಿದೆ: Media news: 1. Kp Circulation jasti aagta illa. bhat ge tale novu! 2. Venkata Narayan samapadakatvadalli hosa daily 3.TV 5 ge h.r. ranganath 4. Janashri maaraTa! 5. Vijay Sankeshvara paper ge timmappa bhat editor

ಇದರಲ್ಲಿ ಜನಶ್ರೀ ಮಾರಾಟ, ತಿಮ್ಮಪ್ಪ ಭಟ್ಟರ ಸುದ್ದಿ ಸ್ಥಿರ ಎಂದರೂ ಉಷಾ ಕಿರಣ ಖ್ಯಾತಿಯ ವೆಂಕಟ ನಾರಾಯಣ್ ಸ್ಟೋರಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ಶಿವ ಹಾಗೂ ಸಂಕೇಶ್ವರ ಮಿಲನವಾದರೆ ತಿಮ್ಮಪ್ಪನ ಗತಿ ಏನು ತಿಮ್ಮಪ್ಪನ ಕೆಳಗೆ ಶಿವ ಇರುತ್ತಾರೋ, ಶಿವನ ಕೆಳಗೆ ತಿಮ್ಮಪ್ಪನೋ ಸಂಕೇಶ್ವರನೇ ಬಲ್ಲ. ಶಿವ ಮತ್ತೆ ಎಡಿಟರ್ ಆಗಿ ಮೆರೆಯುವ ಕಾಲ ಬರಲಿ ಎಂದು ಶೈವಸ್ಥರು(ಶಿವ ಬೆಂಬಲಿಗರು) ಹರಕೆ ಹೊತ್ತಿದ್ದಾರಂತೆ.

English summary
Vijay Sankeshwar Meets Journalist former editor of Kannadaprabha Shiva Subramanya.Vijay Sankeshwar is launching a new kannada daily with senior journalist Timmappa bhat a former Udayavani editor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X