ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಏರಿಕೆ ಚಿಂತೆ- ಸಾಯೋಕೆ ಬಿಡಿ: ಬಿಜೆಪಿ ಸಂಸದ!

By Srinath
|
Google Oneindia Kannada News

ಭೋಪಾಲ, ಜೂನ್ 28: ಬೆಲೆ ಏರಿಕೆಯಿಂದ ಜನತೆ ಸಾಯುವುದನ್ನು ನೋಡುವುದಕ್ಕಿಂತ ಮೊದಲು, ಜನಪ್ರತಿನಿಧಿಯಾದ ನನಗೆ ದಯಾಮರಣ ಕರುಣಿಸಿ ಎಂದು ರಾಜ್ಯಸಭಾ ಸದಸ್ಯ ಪ್ರಭಾತ್ ಝಾ ವಿನೂತನ ಬೇಡಿಕೆ ಮುಂದಿಟ್ಟಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಮುಖ್ಯಸ್ಥರಾದ 54 ವರ್ಷ ವಯಸ್ಸಿನ ಝಾ ಈ ಕುರಿತು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.

'ದೇಶದಲ್ಲಿನ ಬೆಲೆ ಏರಿಕೆ ಹಾಗೂ ವ್ಯಾಪಕ ಭ್ರಷ್ಟಾಚಾರ ಜನರನ್ನು ಸಾವಿನಂಚಿಗೆ ದೂಡಿದೆ. ನೀವು ದೇಶದ 115 ಕೋಟಿ ಜನರ ತಾಯಿ. ನಿಮಗೂ ಬೆಲೆ ಏರಿಕೆಯಿಂದ ದುಃಖ ಆಗಿರಬಹುದು' ಎಂದು ಹೇಳಿದ್ದಾರೆ.

ಕಾಂಗ್ರೆಸ್ ಲೇವಡಿ: ಝಾ ಅವರ ಈ ಬೇಡಿಕೆಯನ್ನು ರಾಜಕೀಯ ದೊಂಬರಾಟ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. 'ಅವರಿಗೆ ಪಕ್ಷದ ಮುಖಂಡರೊಂದಿಗೆ ಭಿನ್ನಾಭಿಪ್ರಾಯ ಇರಬೇಕು. ಹಾಗಾಗಿ ಈ ಪತ್ರ ಬರೆದಿದ್ದಾರೆ. ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿರುವ ತಮ್ಮ ಪಕ್ಷದ ಸರ್ಕಾರದ ಜತೆ ಮಾತನಾಡಿ ಮಮತಾ ಬ್ಯಾನರ್ಜಿ ಅವರಂತೆ ರಾಜ್ಯದಲ್ಲೂ ತೆರಿಗೆ ಇಳಿಸಲು ಮನವೊಲಿಸುತ್ತಿದ್ದರು' ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಾಂತಿಲಾಲ್ ಭೂರಿಯಾ ಹೇಳಿದ್ದಾರೆ.

English summary
In a startling move, Madhya Pradesh BJP chief Prabhat Jha on Monday (June 27) urged President Pratibha Patil to accept his request for "death by wish" (euthanasia?) in the wake of spiralling prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X