ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥೇಮ್ಸ್ ನದಿ ನೀರ ಮೇಲೆ ಬರಿಗಾಲಲ್ಲಿ ಡೈನಮೋ ನಡಿಗೆ

By Mahesh
|
Google Oneindia Kannada News

Magician Dynamo walks on Thames River
ಲಂಡನ್ ಜೂ 28: ಥೇಮ್ಸ್ ನದಿ ನೀರಿನ ಮೇಲೆ ಅವನು ನಡಿತಾ ಇದ್ದರೆ ಸೇತುವೆ ಮೇಲೆ ನಿಂತಿದ್ದ ಪ್ಯಾರಿಸ್ ಹಿಲ್ಟನ್, ವಿಲ್ ಸ್ಮಿತ್ ಬಿಟ್ಟ ಬಾಯಿ ಬಿಟ್ಟಂತೆ ಮೂಕವಿಸ್ಮತರಾಗಿ ನೋಡುತ್ತಿದ್ದರು. ನೆರೆದಿದ್ದ ಸಾವಿರಾರು ಜನರನ್ನು ಸಮೂಹ ಸನ್ನಿಗೆ ಒಳಪಡಿಸಿ, ದಿಗ್ಭ್ರಮೆಗೊಳ್ಳುವಂಥ ಜಾದು ಪ್ರದರ್ಶಿಸಿದ ಮೋಡಿಗಾರನ ಹೆಸರು ಡೈನಮೋ. ಅಷ್ಟೇನೂ ಜನಪ್ರಿಯತೆ ಗಳಿಸಿರದ ಡೈನಮೋ, ಈ ಕಷ್ಟಕರ ಮೋಡಿ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾನೆ.

ಡೈನಮೋ ಎಂದು ಕರೆದುಕೊಳ್ಳುವ 28 ವರ್ಷದ ಸ್ಟೀವ್ ಫ್ರಾಯ್ನೆ ಈ ಸಾಹಸ ಮಾಡಿದ್ದು ಮ್ಯಾಜಿಕ್ ಇಂಪಾಸಿಬಲ್ ಎಂಬ ಹೊಸ ಟಿ.ವಿ ಧಾರಾವಾಹಿಗಾಗಿ ಎಂದು ತಿಳಿದುಬಂದಿದೆ. ತನ್ನ ಜಾದೂ ಕಾರ್ಯಕ್ರಮಗಳಿಗೆ ಪ್ರಖ್ಯಾತರನ್ನೇ ಕರೆಸಿಕೊಳ್ಳುವುದು ವಾಡಿಕೆಯಾಗಿತ್ತು. ಈ ಬಾರಿ ಮಾತ್ರ ಡಿಫರೆಂಟ್. ರಭಸದಿಂದ ಹರಿಯುವ ನದಿಯ ಮಧ್ಯೆ ನಿಂತು ನಡೆದುಕೊಂಡು ಹೋಗುವವಂತೆ ಭ್ರಮೆ ಸೃಷ್ಟಿಸಿ ಯಶಸ್ವಿಯಾಗಿದ್ದಾನೆ.

ಬ್ರಾಡ್‌ಫೋರ್ಡ್‌ನಲ್ಲಿ ಹುಟ್ಟಿರುವ ಸ್ಟೀವ್ ನ ಮೋಡಿ ಮುಗಿಯುವ ತನಕ ವೆಸ್ಟ್ ಮಿನಿಸ್ಟರ್ ಸೇತುವೆ ಮೇಲೆ ನಿಂತು ಪೊಲೀಸರು ಚಪ್ಪಾಳೆ ತಟ್ಟುತ್ತಾ ನಿಂತಿದ್ದರು. ನಂತರ ಲಂಡನ್‌ನ ಹೌಸ್ ಆಫ್ ಪಾರ್ಲಿಮೆಂಟ್‌ನ ಎದುರು ಈ ಸಾಹಸ ನಡಿಗೆ ಪ್ರದರ್ಶಿಸಿದ ಸ್ಟೀವ್ ನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಮೊಬೈಲ್ ಫೋನ್ ಅನ್ನು ಬೀರ್ ಬಾಟಲ್ ಮಾಡುವುದು, ಹಿಮದ ರಾಶಿಯನ್ನು ಡೈಮಂಡ್ ಆಗಿ ಬದಲಿಸುವುದು ಮುಂತಾದ ಟ್ರಿಕ್ಸ್ ಗಳನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ್ದಾನೆ.

;
English summary
A 28 year old Bradford-born illusionist Steve Frayne popularly known as Dynamo proved that he can walk on water. Magician Dynamo crossed the Thames river on foot with out using bridge. This publicity stunt for his new TV series.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X