ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಯಾಸ್ ಬೆಲೆ ಇಳಿಸಬೇಕಾ, ವೈ ಎಂದರು ಬಿಎಸ್ ವೈ

By Prasad
|
Google Oneindia Kannada News

I will not reduce LPG price : BS Yeddyurappa
ಬೆಂಗಳೂರು, ಜೂ. 28 : ಕೇಂದ್ರ ಅಡುಗೆ ಎಲ್ ಪಿ ಜಿ ಬೆಲೆ ಏರಿಸಿದ್ದರಿಂದ ದೇಶದಲ್ಲಿರುವ ಶ್ರೀಸಾಮಾನ್ಯ ಗ್ಯಾಸ್ ತೆಗೆದಿರುವ ಸಿಲಿಂಡರ್ ನಂತಾಗಿದ್ದಾನೆ. ಏನೇ ಆದರೂ, ಏರಿಸಿರುವ ಬೆಲೆ ಇಳಿಸುವುದಿಲ್ಲ ಎಂದು ಕೇಂದ್ರ ಸರಕಾರ ಶಪಥ ಮಾಡಿದೆ.

'ಏರಿದವನು ಇಳಿಯಲೇಬೇಕು ಎಂಬಾ ಮಾತನು ಸಾರುವನು' ಎಂಬ ವಿವೇಕವಾಣಿ ಏರಿದ ಬೆಲೆಗಳಿಗೆ ನಮ್ಮ ದೇಶದಲ್ಲಿ ಅನ್ವಯಿಸುವುದಿಲ್ಲ. ಆದರೂ, ಬಡವರ ಸಂಕಷ್ಟ ನೋಡಿ ಕೆಲ ರಾಜ್ಯಗಳು ಎಲ್ ಪಿಜಿ ಬೆಲೆಯನ್ನು ತುಸು ಇಳಿಸಿದ್ದು, ಬಡವನ ಕಣ್ಣೀರು ಕಪಾಳಕ್ಕಿಳಿಯದಂತೆ ತಡೆದಿವೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 16 ರು.ನಷ್ಟು ಇಳಿಸಿ ಬಡವರ ಮೇಲೆ ಮಮತೆ ತೋರಿದರು. ಕೇರಳ ಸರಕಾರ ಕೂಡ ಈ ಕುರಿತು ಚಿಂತಿಸುತ್ತಿದೆ. ಈಗ ತಾನೂ ಬಡವರ ಪರವಾಗಿದ್ದೇನೆ ಎಂದು ದೆಹಲಿ ಸರಕಾರ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ 40 ರು. ಇಳಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಆದರೆ, ನಮ್ಮ ಕರ್ನಾಟಕ ಸರಕಾರಕ್ಕೇನಾಗಿದೆ? ನಾವು ಬಡವರ ಪರವಾಗಿದ್ದೇವೆ ಎಂದು ಎದೆತಟ್ಟಿ ಹೇಳುವ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರಿಗೇನಾಗಿದೆ? ಆಣೆ ಪ್ರಮಾಣ ಮಾಡುವುದರಿಂದ ಹಿಂದೆ ಸರಿದ ಯಡಿಯೂರಪ್ಪ ದಕ್ಷಿಣ ಕನ್ನಡ ತೀರ್ಥಯಾತ್ರೆಯ ಸಮಯದಲ್ಲಿ, ದೇವರ ಸನ್ನಿಧಿಯಲ್ಲಿ ಹೇಳಿದ್ದೇನು ಗೊತ್ತೆ?

"ನಾವ್ಯಾಕೆ ಬೆಲೆ ಕಡಿಮೆ ಮಾಡಬೇಕು? ಬೇಕಿದ್ದರೆ ಕೇಂದ್ರ ಸರಕಾರವೇ ಬೆಲೆ ಕಡಿಮೆ ಮಾಡಲಿ. ಎಲ್ ಪಿ ಜಿ ಬೆಲೆಯನ್ನು ಏರಿಸಿದ್ದೇ ಕೇಂದ್ರ ಸರಕಾರ" ಎಂದು ಹೇಳುತ್ತ ಪತ್ರಕರ್ತರಿಗೆ ದೊಡ್ಡ ನಮಸ್ಕಾರ ಮಾಡುತ್ತ ಕಾಲುಕಿತ್ತರು. ಇನ್ನು ಉಳಿದದ್ದು ತಿಳಿದುಕೊಳ್ಳುವುದು, ತಿಳಿದುಕೊಳ್ಳದೇ ಇರುವುದು ನಮ್ಮ ಜನರ ವಿವೇಚನೆಗೆ ಬಿಟ್ಟಿದ್ದು.

English summary
West Bengal, Delhi govts have reduced LPG rates for BPL people. Kerala also thinking in the same line. But, what has happened to Karnataka and Chief Minister BS Yeddyurappa? BSY has said that he will not reduce the price come what may.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X