ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀರು ಹುಯ್ಯುವ ಬಾರ್ ಗರ್ಲುಗಳ ಸಾಮೂಹಿಕ ಆತ್ಮಹತ್ಯೆ

|
Google Oneindia Kannada News

 Bar girls
ಬೆಂಗಳೂರು, ಜೂನ್ 28: ಉದ್ಯಾನನಗರಿಯ ಬಾರ್ ಗರ್ಲ್ಸ್ ಕಂಗಾಲಾಗಿದ್ದಾರೆ. ನಮ್ಮ ಕೆಲಸ ವಾಪಸ್ ಕೊಡಿ ಎಂದು ಅಬಕಾರಿ ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಅವರಿಗೆ ಸಾಕಾಗಿದೆ. ಕಳೆದುಕೊಂಡ ಕೆಲಸ ಸಿಗುವ ಯಾವುದೇ ಸೂಚನೆ ಸಿಗದೇ ಇದೀಗ ಹೊಸ ದಾರಿ ಪ್ರಕಟಿಸಿದ್ದಾರೆ. ಅದೇ ಸಾಮೂಹಿಕ ಆತ್ಮಹತ್ಯೆ.

"ನಮಗೆ ಇನ್ಯಾವ ದಾರಿಯಿದೆ" ಎಂದು ಒಬ್ಬಾಕೆ ಪ್ರಶ್ನಿಸುತ್ತಾಳೆ. ಇಂದು ಸುಮಾರು 48 ಜನರಿದ್ದ ಬಾರ್ ಗರ್ಲ್ಸ್ ಸದಸ್ಯರಿಂದ ಪೊಲೀಸ್ ಇಲಾಖೆ ಮತ್ತು ಹೈಕೋರ್ಟ್ ಗೆ "ಕೆಲಸ ವಾಪಸ್ ನೀಡಿ" ಎಂದು ಮನವಿ ಸಲ್ಲಿಸಿದ್ದಾರೆ. ಆಗ ಎದುರಿಗೆ ಸಿಕ್ಕ ಅವರು ತಮ್ಮ ದುರಂತ ಬದುಕನ್ನು ತೆರೆದಿಟ್ಟು "ಆತ್ಮಹತ್ಯೆಯೇ ಉಳಿದಿರುವ ದಾರಿ" ಎಂದು ಕಣ್ಣೀರು ಸುರಿಸಿದ್ದಾರೆ.

ಕಳೆದ ಕೆಲವು ತಿಂಗಳಿಂದ ನಗರದ 4 ಸಾವಿರ ಬಾರ್ ಗರ್ಲ್ಸ್ ಕೆಲಸ ಕಳೆದುಕೊಂಡಿದ್ದಾರೆ. "ನನಗೀಗ ಕೆಲಸವಿಲ್ಲ. ಬ್ಯಾಂಕ್ ಅಕೌಂಟ್ ಖಾಲಿಯಾಗಿದೆ. ಮನೆಯೂ ಇಲ್ಲದಾಗಿದೆ. ಈಗ ಅನಿವಾರ್ಯವಾಗಿ ಸ್ನೇಹಿತೆಯರ ಮತ್ತು ಸಂಬಂಧಿಗಳ ಮನೆಯಲ್ಲಿ ಉಳಿಯುತ್ತಿದ್ದೇನೆ. ಅವರ ಮನೆಯಲ್ಲಿ ಎಷ್ಟು ದಿನಾಂತ ಇರಲು ಸಾಧ್ಯ? ಅವರು ಇರಲು ನಿರಾಕರಿಸಿದರೆ ಆತ್ಮಹತ್ಯೆಯೇ ಗತಿ" ಹಾಗಂತ ಕಣ್ಣೀರು ಸುರಿಸಿದವಳ ಹೆಸರು ಕೇಳಲಿಲ್ಲ.

ಇನ್ನೋಬ್ಬಕೆಯ ಕಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. "ಮನೆಯಲ್ಲಿ ಹಣಕ್ಕೆ ನನ್ನನ್ನೇ ಅವಲಂಬಿಸಿಕೊಂಡಿದ್ರು. ಇದೀಗ ಅವರಿಗೆ ದುಡ್ಡು ಕಳುಹಿಸಲಾಗದೇ ಪರದಾಡುತ್ತಿದ್ದೇನೆ" ಹೀಗೆ ಹೇಳಿದವಳ ಹೆಸರು ಶ್ವೇತಾ. "ಬಾರ್ ಗರ್ಲ್ಸ್ ಕೆಲಸ ಕಳೆದುಕೊಂಡ ಅನೇಕರು ವೇಶ್ಯಾವಾಟಿಕೆ ಜಾಲದ ಏಜೆಂಟ್ ಬಳಿ ಸಾಗುತ್ತಿದ್ದಾರೆ. ನಮಗೆ ಆತ್ಮಹತ್ಯೆಯೇ ಗತಿ" ಅಂದವಳು ಮತ್ತೊಬ್ಬಾಕೆ.

"ಬಾರ್ ಗರ್ಲ್ಸ್ ಗೆ ನ್ಯಾಯಾಲಯಕ್ಕೆ ಹೋಗುವ ಅಧಿಕಾರವಿದೆ. ನ್ಯಾಯಾಲಯ ಯಾವ ತೀರ್ಪು ನೀಡುತ್ತೋ ಅದನ್ನು ನಾವು ಪಾಲಿಸುತ್ತೇವೆ" ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
Today 48 member group of Bangalore bar girls will be submitting a written petition to the police department and the High Court. And they said "we commit mass suicide if they cannot get our jobs back"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X