ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಪಂಟರುಗಳನ್ನು ಬೆಚ್ಚಿ ಬೀಳಿಸಿದ ಮುಂಬೈ ಕುದುರೆ

By Shami
|
Google Oneindia Kannada News

Ashok Kheny presenting trophy to Mistry and Mehta
ಬೆಂಗಳೂರು, ಜೂ. 27 : ಶಾಪೂರ್ ಮಿಸ್ತ್ರಿ ಮತ್ತು ಹರೀಶ್ ಮೆಹ್ತ ಒಡೆತನದ ಮುಂಬೈ ಕುದುರೆ "ಅಮೆರೆಟ್ಟೊ" ಭಾನುವಾರ ಇಲ್ಲಿ ನಡೆದ ಜುವನೈಲ್ ಸ್ಪ್ರಿಂಟರ್ಸ್ ಮಿಲಿಯನ್ 1200 ಕಪ್ ಅನ್ನು ನಿರಾಯಾಸವಾಗಿ ಗೆದ್ದುಕೊಂಡಿತು. ತನ್ಮೂಲಕ ಫಾರಂನಲ್ಲಿರುವ ಕುದುರೆಗಳ ಬಾಲಕ್ಕೆ ಹಣ ಕಟ್ಟುವ ಜೂಜುಕೋರ ಕೈಕಚ್ಚಿತು.

ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ನಡೆಯುತ್ತಿರುವ ಬೆಸಿಗೆ ರೇಸುಗಳ 14 ನೆ ದಿನದ ಪಂದ್ಯಾವಳಿಗಳಲ್ಲಿ ಜುವನೈಲ್ ಮಿಲಿಯನ್ ಪ್ರಧಾನ ಆಕರ್ಷಣೆಯಾಗಿತ್ತು. ರೇಸುಗೆದ್ದ ಕುದುರೆಯ ಮಾಲಿಕರಿಗೆ 50 ಸಾವಿರ ರು. ಮೌಲ್ಯದ ಪಾರಿತೋಷಕ ಮತ್ತು 9,43,680 ರು.ಗಳ ಬಹುಮಾನವನ್ನು (stake Money) ನೈಸ್ ಕಂಪನಿಯ ಮುಖ್ಯಸ್ಥ ಅಶೋಕ್ ಖೇಣಿ ವಿತರಿಸಿದರು.

ಬೆಟ್ಟಿಂಗ್ ರಿಂಗಿನಲ್ಲಿ ಪಂಟುರುಗಳಿಂದ ಉಪೇಕ್ಷಣೆಗೊಳಗಾಗಿದ್ದ "ಅಮೆರೆಟ್ಟೊ" 30/1 ಬೆಲೆಯಲ್ಲಿ ಗೆದ್ದು ಅಚ್ಚರಿ ಉಂಟುಮಾಡಿತು. "ಅಮೆರೆಟ್ಟೊ" ತರಬೇತುದಾರ ಸಿಡಿ ಕರ್ಟಕ್, ಸವಾರಿ ಪಿ. ಟ್ರೆವರ್. ಫೇವರೆಟ್ ಕುದುರೆಗಳನ್ನು ಬೆಂಬಲಿಸುವ ಆಟಗಾರರಿಗೆ ನಿರಾಶಾದಾಯಕ ದಿನವಾಗಿದ್ದ ಭಾನುವಾರ ಅಚ್ಚರಿ ಫಲಿತಾಂಶ ನೀಡುವ ಕುದುರೆಗಳಿಗೆ ಸುಗ್ಗಿಯ ದಿನವಾಗಿ ಪರಿಣಮಿಸಿತು.

English summary
Young jockey Trevor Patel guides long shot 'Amaretto' to a fluent victory in Juvenile Sprinters Million 2011, races at Bangalore Turf Club on Sunday 26 June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X