ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾ ಮಾಡಿದ್ದನ್ನು ಯಡಿಯೂರಪ್ಪ ಪ್ರಮಾಣವಾಗಿಯೂ ಮಾಡುತ್ತಾರಾ?

By Srinath
|
Google Oneindia Kannada News

mamata banerjee
ಬೆಂಗಳೂರು, ಜೂನ್ 26: ಯುಪಿಎ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಬೆಲೆಯೇರಿಸುವ ಮೂಲಕ ಇಡೀ ದೇಶದ ಜನಸಾಮಾನ್ಯರ ಕೋಪತಾಪ ಏರಿಸಿದ್ದರೆ ಮೈತ್ರಿಕೂಟದ ಗೆಳತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಣ್ಣಗೆ ತಮ್ಮ ರಾಜ್ಯದಲ್ಲಿ ಅಡುಗೆ ಅನಿಲದ ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿ ಕೇಂದ್ರಕ್ಕೆ ಸಡ್ಡು ಹೊಡೆದಿದ್ದಾರೆ.

ಯಡಿಯೂರಪ್ಪಾನೂ ಮನಸ್ಸು ಮಾಡಲಿ: ಈ ಮಧ್ಯೆ, ಆಣೆ ಪ್ರಮಾಣಗಳಲ್ಲಿ ಕಳೆದುಹೋಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಮತಾ ಕೈಗೊಂಡಂತಹ ದಿಟ್ಟ ನಿರ್ಧಾರವನ್ನು ತಾವೂ ಕೈಗೊಳ್ಳುವರೇ ಎಂದು ಸಿಲಿಂಡರ್ ಗ್ರಾಹಕರು ಕಾದುಕುಳಿತಿದ್ದಾರೆ. ಮಮತಾ ಬ್ಯಾನರ್ಜಿ ಅವರಂತೆ ಯಡಿಯೂರಪ್ಪ ಅವರೂ ಸೆಸ್‌ ಇಳಿಸುವ ಮೂಲಕ ಮೇಲ್ಪಂಕ್ತಿ ಹಾಕುತ್ತಾರಾ?

ಈ ಕುರಿತು ಪ್ರತಿಕ್ರಿಯಿಸಿರುವ ಇಂಧನ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ಅವರು ಅಧಿಭಾರ (ಸೆಸ್‌) ಇಳಿಸುವ ಮೂಲಕ ಎಲ್‌ಪಿಜಿ ದರದ ಹೊರೆಯನ್ನು ತುಸುವಾದರೂ ತಗ್ಗಿಸುವ ಕುರಿತು ಭಾನುವಾರ ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಮಮತಾಮಯಿಯ ಲೆಕ್ಕಾಚಾರ ಹೀಗಿದೆ: ಬಂಗಾಳದಲ್ಲಿ ಎಲ್‌ಪಿಜಿ ಬೆಲೆ 16 ರುಪಾಯಿ ಇಳಿಕೆಯಾಗಲಿದೆ. ಅಬಕಾರಿ ಸುಂಕವನ್ನು ತೆಗೆದುಹಾಕಿರುವುದರಿಂದ ಪ್ರತಿ ಸಿಲಿಂಡರ್ ಬೆಲೆ ದೇಶಾದ್ಯಂತ 50 ರು ಹೆಚ್ಚಳ ಕಂಡಿದ್ದರೆ, ಪಶ್ಚಿಮಬಂಗಾಳದಲ್ಲಿ 34 ರು ಮಾತ್ರ ಹೆಚ್ಚಿದೆ. ಇದರಿಂದಾಗಿ 417 ರು. ತಲುಪಿದ್ದ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಬಂಗಾಳದಲ್ಲಿ 401 ರು.ಗೆ ಇಳಿಯಲಿದೆ.

ಶುಕ್ರವಾರ ಮಧ್ಯರಾತ್ರಿ ಯುಪಿಎ ಸರ್ಕಾರ ಬೆಲೆ ಏರಿಸುತ್ತಿದ್ದಂತೆ ರಾಜ್ಯದ ಹಣಕಾಸು ಮಂತ್ರಿಯನ್ನು ತುರ್ತಾಗಿ ಭೇಟಿ ಮಾಡಿದ ಮಮತಾ ಅವರು ಅಬಕಾರಿ ಸುಂಕವನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿದ್ದಾರೆ.

English summary
Providing some cushion to people hit by Centre's decision to hike cooking gas price by Rs 50 per cylinder, Bengal CM Mamata Banerjee on has decided to withdraw cess of Rs 16 per LPG cylinder in the state. Can our CM BS Yeddyurappa follow Mamata didi and give some relief to arnataka people?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X